Tuesday, September 17, 2024

ಪ್ರಾಯೋಗಿಕ ಆವೃತ್ತಿ

ಅವರ ಅಗಲಿಕೆಯಿಂದ ನನಗೆ ಜೀವನದಲ್ಲಿ ಯಾವುದು ಶಾಶ್ವತವಲ್ಲ ಅನ್ನಿಸಿದೆ – ಕಣ್ಣೀರಿಟ್ಟ ಡಿ.ಕೆ ಶಿವಕುಮಾರ್

ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಅವರು 16ನೇ ವಿಧಾನಸಭೆಯ ಮೊದಲ ಅಧಿವೇಶನದ ಆರಂಭದ ದಿನವೇ ಕಣ್ಣೀರಿಟ್ಟ ಘಟನೆ ನಡೆಯಿತು.

ರಾಜ್ಯಪಾಲರ ಭಾಷಣದ ಬಳಿಕ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಈ ವೇಳೆ ಡಿಕೆ ಶಿವಕುಮಾರ್‌ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್‌ ಧೃವನಾರಾಯಣ ನಿಧನಕ್ಕೆ ಸಂತಾಪ ಸೂಚಿಸಿ, ಕಣ್ಣೀರಿಟ್ಟರು.

“ಸುರೇಶ್‌ ನನಗೆ ಯಾವ ರೀತಿ ಸಹೋದರನಾಗಿದ್ದನೋ ರಾಜಕಾರಣದಲ್ಲಿ ಆರ್‌ ಧೃವನಾರಾಯಣ ನನಗೆ ಸಹೋದರನಾಗಿದ್ದ. ಅವರ ಅಗಲಿಕೆಯಿಂದ ನನಗೆ ಜೀವನದಲ್ಲಿ ಯಾವುದು ಶಾಶ್ವತವಲ್ಲ ಅನ್ನಿಸಿದೆ” ಎಂದರು.

“ರಾಜ್ಯ ಕಾಂಗ್ರೆಸ್‌ ಅಧ್ಯಕ್ಷನಾಗಿ ಚುನಾವಣೆಯಲ್ಲಿ ಅನೇಕ ಜಿಲ್ಲೆಗಳ ಉಸ್ತುವಾರಿ ವಹಿಸಿಕೊಂಡಿದ್ದೆ. ಅವರು ಕಾರ್ಯನಿರ್ವಹಿಸಿದ ಜಿಲ್ಲೆಗಳ ಫಲಿತಾಂಶ ನೋಡಿದರೆ ನನಗೇ ಆಶ್ಚರ್ಯವಾಗುತ್ತದೆ. ಧೃವನಾರಾಯಣ ನಿಭಾಯಿಸಿದ ಉಸ್ತುವಾರಿ ಜಿಲ್ಲೆಗಳಲ್ಲಿ ಶೇ.75 ರಷ್ಟು ನಮ್ಮ ಶಾಸಕರು ಗೆದ್ದಿದ್ದಾರೆ. ಇಂದು ನಮ್ಮ ಜೊತೆ ಅವರು ಇದ್ದಿದ್ದರೆ ಖಂಡಿತ ಸಚಿವರಾಗಿ ಇರುತ್ತಿದ್ದರು” ಎಂದರು,

“ನನಗೆ ಎಷ್ಟು ದುಃಖ ಆಗಿದೆ ಎಂದರೆ ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಇಳಿದರೆ ಆರ್‌ ಧೃವನಾರಾಯಣ ಅವರನ್ನೇ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದೆ. ಆದರೆ ವಿಧಿ ಲಿಖಿತ ಬೇರೆ ಇದೆ. ಆದರೆ ಯಾಕೆ ಸತ್ತರು ಎನ್ನುವ ಚರ್ಚೆಗೆ ನಾನು ಹೋಗಲ್ಲ. ಒಬ್ಬ ಶ್ರೇಷ್ಠ ಸ್ನೇಹಿತನನ್ನು ಕಳೆದುಕೊಂಡಿರುವ ನೋವು ನನಗಿದೆ” ಎಂದು ಭಾವುಕರಾಗಿ ನುಡಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!