Thursday, September 19, 2024

ಪ್ರಾಯೋಗಿಕ ಆವೃತ್ತಿ

ನಿಸ್ವಾರ್ಥದಿಂದ ಸಮಾಜ ಸೇವೆ ಮಾಡುವವರಿಗೆ ಹೆಚ್ಚಿನ ಅವಕಾಶ ದೊರೆಯಲಿ

ಯಾವುದೇ ಪ್ರತಿಫಲ ಬಯಸದೆ ನಿಸ್ವಾರ್ಥದಿಂದ ನಾಯಕತ್ವದ ಹೊಣೆ ಹೊತ್ತುಕೊಂಡು ಸಮಾಜ ಸೇವೆ ಮಾಡುವವರಿಗೆ ಹೆಚ್ಚಿನ ಅವಕಾಶ ದೊರೆಯಬೇಕಿದೆ ಎಂದು 2009-10ನೇ ಸಾಲಿನ ಜಿಲ್ಲಾ ರಾಜ್ಯಪಾಲರಾದ ಲಯನ್ ಕೆ.ದೇವೇಗೌಡ ತಿಳಿಸಿದರು.

ಮಂಡ್ಯ ನಗರದ ಹೊರವಲಯದಲ್ಲಿರುವ ಕನ್ವೆನ್ಷನ್ ಹಾಲ್ ಒಂದರಲ್ಲಿ ನಡೆದ ಅಂತರಾಷ್ಟ್ರೀಯ ಲಯನ್ ಸಂಸ್ಥೆ ಜಿಲ್ಲೆ 317ಎ, ಜಿಲ್ಲಾ ಲಯನ್ಸ್ ಸಂಸ್ಥೆಗಳ ವತಿಯಿಂದ ನೂತನ 317 ಜಿ ಜಿಲ್ಲೆಗೆ ಆಯ್ಕೆಯಾಗಿರುವ ರಾಜ್ಯಪಾಲರ ತಂಡದ ಅಭಿನಂದನಾ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು.

ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಲು ಮುಂದಾಗುವ ಪ್ರಾಮಾಣಿಕ ವ್ಯಕ್ತಿಗಳಿಗೆ ಯಾವುದೇ ರೀತಿಯ ಅಡೆತಡೆಗಳು ಉಂಟಾಗಬಾರದು ಎಂಬುದು ನಮ್ಮೆಲ್ಲರ ಮನದಾಸೆ. ಇಂತಹ ಸುಂದರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಲು ಬಹಳ ಸಂತೋಷವಾಗುತ್ತಿದೆ. ಅಂತರಾಷ್ಟ್ರೀಯ ಮಾಜಿ ನಿರ್ದೇಶಕರಾದ ಕೃಷ್ಣಾರೆಡ್ಡಿ ಅವರು ಸರಿ ಸುಮಾರು 8 ರಿಂದ 10 ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ, ಬಡವರ ಪಾಲಿನ ಆಶ್ರಯದಾತರಾಗಿ ನಿಂತಿರುವ ಅವರ ನಾಯಕತ್ವದ ಗುಣಕ್ಕೆ ನಮ್ಮ ಜಿಲ್ಲೆಯ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು.

ಎಲ್ಲರ ಆಶೀರ್ವಾದದಿಂದ ಮೂರು ಜನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಗೆಲುವಿನ ಹಿಂದೆ ಶ್ರಮವಹಿಸಿದಂತಹ ಮಂಡ್ಯ ಜಿಲ್ಲೆಗೆ ಅಭಿನಂದನೆ ಸಲ್ಲಿಸುತ್ತೇನೆ. ಆಯ್ಕೆಯಾಗಿರುವ ಎಲ್ಲರೂ ನಿಸ್ವಾರ್ಥದಿಂದ ಜನರಿಗೆ ಸೇವೆ ಸಲ್ಲಿಸುವ ಮೂಲಕ ಲಯನ್ಸ್ ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಮಾಜಿ ನಿರ್ದೇಶಕ ಲಯನ್ ವಿ.ವಿ ಕೃಷ್ಣಾರೆಡ್ಡಿ, ಚುನಾಯಿತ ಜಿಲ್ಲಾ ರಾಜ್ಯಪಾಲರಾದ ಲಯನ್ ಡಾ.ಎನ್.ಕೃಷ್ಣೇಗೌಡ, ಚುನಾಯಿತ ಮೊದಲ ಜಿಲ್ಲಾ ಉಪ ರಾಜ್ಯಪಾಲ ಲಯನ್ ಎನ್. ಸುಬ್ರಹ್ಮಣ್ಯ, ಚುನಾಯಿತ ಎರಡನೇ ಜಿಲ್ಲಾ ಉಪ ರಾಜ್ಯಪಾಲ ಲಯನ್ ಕೆ.ಎಲ್.ರಾಜಶೇಖರ್, ಮಾಜಿ ಮಲ್ಟಿಪಲ್ ಚೇರ್ಮನ್ ಲಯನ್ ರಾಮಚಂದ್ರ, ಮಲ್ಟಿಪಲ್ ಸಂಯೋಜಕ ಲಯನ್ ಡಾ. ಜಿ.ಎ ರಮೇಶ್ ಸೇರಿದಂತೆ ಇತರ ಲಯನ್ ಸಂಸ್ಥೆಯ ಸದಸ್ಯರುಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!