Saturday, November 21, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ದೊಡ್ಡರಸಿನಕೆರೆ ಗ್ರಾ.ಪಂ. ಸದಸ್ಯರಾಗಿ ಅವಿರೋಧ ಆಯ್ಕೆ

ಮದ್ದೂರು ತಾಲ್ಲೂಕು ದೊಡ್ಡರಸಿನಕೆರೆ ಗ್ರಾಮಪಂಚಾಯಿತಿಗೆ ನಡೆದ ಸದಸ್ಯರ ಉಪಚುನಾವಣೆಯಲ್ಲಿ ಧನುಷ್ ಹಾಗೂ ಭಾಗ್ಯಮ್ಮ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದೊಡ್ಡರಸಿನಕೆರೆ ಗ್ರಾಮದ ಒಂದನೇ ನೇ ಬ್ಲಾಕ್ ನಿಂದ ಮಂಚೇಗೌಡ ಅವರು ಆಯ್ಕೆಗೊಂಡಿದ್ದರು. ಅವರ ನಿಧನದಿಂದ ತೆರವಾಗಿ ಸ್ಥಾನಕ್ಕೆ ಅವರ ಪುತ್ರ ಧನುಷ್ ಅವರನ್ನು ಗ್ರಾ.ಪಂ ಸದಸ್ಯರನ್ನಾಗಿ ಗ್ರಾಮದ ಮುಖಂಡರು ಮತ್ತು ಪಂಚಾಯಿತಿ ಸದಸ್ಯರು ಅವಿರೋಧವಾಗಿ ಆಯ್ಕೆಗೊಳಿಸಿದ್ದಾರೆ.

ಮತ್ತೆ ಅದೇ ಒಂದನೇ ಬ್ಲಾಕ್ ನಿಂದ ಸುನಂದಮ್ಮ ಅವರು ನಿಧನಗೊಂಡ ಹಿನ್ನೆಲೆಯಲ್ಲಿ ಭಾಗ್ಯಮ್ಮ ಅವರನ್ನು ಸದಸ್ಯರನ್ನಾಗಿ ಅವಿರೋಧವಾಗಿ ಆಯ್ಕೆಗೊಳಿಸಿದ್ದಾರೆ.

ನೂತನ ಗ್ರಾ.ಪಂ ಸದಸ್ಯ ಧನುಷ್ ಅವರು ಗ್ರಾಮದ ಮುಖಂಡರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನಮ್ಮ ತಂದೆ ನಿಧನಗೊಂಡಿದ್ದರಿಂದ ಅವರ ತೆರವಾಗಿದ್ದ ಸ್ಥಾನಕ್ಕೆ ನನ್ನನ್ನು ಅವಿರೋಧವಾಗಿ ಗ್ರಾಮದ ಮುಖಂಡರು, ಯಜಮಾನರು ಆಯ್ಕೆಗೊಳಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಅವಧಿಯಲ್ಲಿ ಪಕ್ಷಾತೀತವಾಗಿ ಗ್ರಾಮದ ಅಭಿವೃದ್ದಿಗೆ ಶ್ರಮಿಸುತ್ತೇನೆ. ಎಲ್ಲರು ನನಗೆ ಸಹಕಾರ ನೀಡಿ ಎಂದು ಕೋರಿದರು.

ಇದೇ ವೇಳೆ ಚುನಾವಣಾಧಿಕಾರಿ ಕಾವೇರಿ ನೀರಾವರಿ ನಿಗಮದ ಎಇಇ ಅವಿನಾಶ್ ಅವರು ಧನುಷ್ ಮತ್ತು ಭಾಗ್ಯಮ್ಮ ಅವರು ಅವಿರೋಧವಾಗಿ ಗ್ರಾ.ಪಂ ಸದಸ್ಯರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಸದಸ್ಯತ್ವ ಪತ್ರವನ್ನು ನೀಡಿದರು.

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಕುರಿಕೆಂಪನದೊಡ್ಡಿ ಶಿವಲಿಂಗಯ್ಯ, ಡಿ.ಎಂ.ರಘು, ಡಿ.ಎಸ್.ಶರತ್, ಚಿಕ್ಕೋನು, ಸೌಮ್ಯ, ಮುಟ್ಟನಹಳ್ಳಿ ಚಂದ್ರಶೇಖರ್, ಕಲಾವತಿ, ಗೌಡನಯ್ಯನದೊಡ್ಡಿ ಶ್ರೀನಿವಾಸ್, ಮುಖಂಡರಾದ ಎಂ.ಚಿಕ್ಕಹುಚ್ಚೇಗೌಡ, ಕೇಬಲ್ ಆನಂದ್, ಶಿವಣ್ಣ, ಡಿ.ಎಲ್.ಪ್ರದೀಪ್, ಡಿ.ಎಚ್.ಮಹೇಶ್ ಸೇರಿದಂತೆ ಹಲವರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ