Thursday, September 19, 2024

ಪ್ರಾಯೋಗಿಕ ಆವೃತ್ತಿ

ಪುನೀತ್ ಜನ್ಮದಿನದಂದು ರಕ್ತದಾನ ಶ್ರೇಷ್ಠ ಕಾರ್ಯ: ಡಾ.ಹೆಚ್.ಎಲ್.ನಾಗರಾಜು

ಸಮಾಜಮುಖಿ ಕೆಲಸಗಳಲ್ಲಿ ನಿರತರಾಗಿದ್ದು, ಚಿಕ್ಕ ವಯಸ್ಸಿಗೆ ನಮ್ಮನ್ನೆಲ್ಲ ಅಗಲಿದ ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬದಂದು ಅವರ ಅಭಿಮಾನಿಗಳು ರಕ್ತದಾನ ಮಾಡುತ್ತಿರುವುದು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್. ಎಲ್ ನಾಗರಾಜು ಹೇಳಿದರು.

ಮಂಡ್ಯನಗರದ ಬನ್ನೂರು ರಸ್ತೆ ಅಪ್ಪು ಬಿರಿಯಾನಿ ರೆಸ್ಟೋರೆಂಟ್ ಮತ್ತು ಅಪ್ಪು ಪಾರ್ಟಿ ಹಾಲ್ ನಲ್ಲಿ   ಡಾ.ಪುನೀತ್‌ರಾಜ್‌ಕುಮಾರ್ ಅಭಿಮಾನಿಗಳ ಬಳಗ, ಮಂಡ್ಯ ಜಿಲ್ಲಾ ರಕ್ತನಿಧಿ ಕೇಂದ್ರ, ಮಿಮ್ಸ್ ಇವರ ಸಹಯೋಗದಲ್ಲಿ ನಡೆದ ಬೃಹತ್ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮತ್ತು ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಮಿಮ್ಸ್ ನಲ್ಲಿ ರಕ್ತದ ಕೊರತೆ ಇದೆ, ಇಂತಹ ಸಂದರ್ಭದಲ್ಲಿ ಯುವಕರು ಒಟ್ಟುಗೂಡಿ ರಕ್ತದಾನ ಮಾಡುತ್ತಿರುವುದು ಸಾರ್ಥಕ ಕೆಲಸವಾಗಿದೆ, ಇಂತಹ ಕಾರ್ಯವನ್ನು ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕೆಂದು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಎಂ ಸಿ ಲಂಕೇಶ್ , ಮಿಮ್ಸ್ ರಕ್ತ ನಿಧಿ ಕೇಂದ್ರದ ಮಹಮ್ಮದ್ ರಫಿ, ವಾಣಿಶ್ರೀ, ಧನಂಜಯ, ಡಾನ್ ಬಾಸ್ಕೋ ಸಂಸ್ಥೆಯ ನಾಗರಾಜು, ರಾಧಿಕಾ ಮತ್ತು ಅಪ್ಪು ಅಭಿಮಾನಿಗಳಾದ ಸಿಟಿ ನವೀನ್, ಚೇತನ್ ಗಾಮನಹಳ್ಳಿ, ಪ್ರಸನ್ನ ಕುಮಾರ್, ಟೈಗರ್ ಸಿದ್ದಪ್ಪ, ಗುರುರಾಜ್, ಸಂಜೀವ್, ಶಿವು ಲೋಕಸರ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!