Friday, September 20, 2024

ಪ್ರಾಯೋಗಿಕ ಆವೃತ್ತಿ

ಜನ ಚಳವಳಿಗಳು, ಜನ ಪ್ರತಿರೋಧಗಳು ಈಗಲಾದರೂ ‘ಕೈ’ ಕೊಡವಿ ಎದ್ದೇಳ ಬೇಕಲ್ಲವೇ?

ಶಿವಸುಂದರ್

ಚಳವಳಿಗಳು ಮರೆಯಬಾರದ ಆದರೆ ಮತ್ತೆ ಮತ್ತೆ ಮರೆತುಬಿಡುವ ಚಾರಿತ್ರಿಕ ವಿವೇಕ 

-ಚರಿತ್ರೆಯಲ್ಲಿ ಫ್ಯಾಶಿಸಂ ಚುನಾವಣೆಗಳ ಮೂಲಕ ಅಧಿಕಾರಕ್ಕೆ ಬಂದ ಉದಾಹರಣೆ ಇದೆ.

-ಆದರೆ ಚುನಾವಣೆಗಳ ಮೂಲಕವಾಗಲಿ, ಆಳುವವರ್ಗದ ಮತ್ತೊಂದು ಬಣದ ಮೂಲಕವಾಗಲೀ ಫ್ಯಾಶಿಸಂ ಅನ್ನು ಸೋಲಿಸಿದ ಉದಾಹರಣೆ ಇಲ್ಲ.

-ಅದರಲ್ಲೂ, ದುಡಿಯುವ ಜನರ ಸಂಘಟಿತ ರಾಜಕೀಯ ಶಕ್ತಿ ದುರ್ಬಲವಾಗಿರುವ ಸಂದರ್ಭದಲ್ಲಂತೂ ಇಲ್ಲವೇ

ಕರ್ನಾಟಕದ ಲೋಕಸಭಾ ಚುನಾವಣಾ ಫಲಿತಾಂಶ ಕೇವಲ ಬಿಜೆಪಿಗೆ ಹೆಚ್ಚು ಸೀಟು ಬಂದಿರುವುದನ್ನು ಮಾತ್ರ ಸೂಚಿಸುತ್ತಿಲ್ಲ…

ಈ ಫಲಿತಾಂಶ ರಾಜ್ಯದ ಬಲಿಷ್ಠ ಜಾತಿಗಳು ಹಿಂದುತ್ವದ ನೆಲೆಯಲ್ಲಿ ಮಾಡಿಕೊಂಡಿರುವ ಆಕ್ರಮಣಕಾರಿ ಒಕ್ಕೂಟದ ಪರಿಣಾಮವೂ ಆಗಿದೆ…

ಹೀಗಾಗಿ ಈ ಪ್ರಾಬಲ್ಯ ಇರುವಷ್ಟು ಕಾಲ ದುರ್ಬಲ ಜಾತಿ ವರ್ಗಗಳು ಕೂಡ ಅನಿವಾರ್ಯವಾಗಿ ಈ ಪ್ರತಿಗಾಮಿ ಒಕ್ಕೂಟವನ್ನು ಅನುಸರಿಸಿರುವುದನ್ನೇ ತಳಮಟ್ಟದ ವಿವರಗಳು ಮತ್ತು ಅಂಕಿ ಅಂಶಗಳು ಹೇಳುತ್ತಿವೆ…

ಹೀಗಾಗಿ 2019ಕ್ಕೆ ಹೋಲಿಸಿದಲ್ಲಿ ಬಿಜೆಪಿಗೆ ಒಂದಷ್ಟು ಕಡಿಮೆ ಸೀಟು ಬಂದಿದ್ದರೂ, ಹೈಕ ಬಿಟ್ಟರೆ ಕಾಂಗ್ರೇಸ್ ನ ಕಳಪೆ ಸಾಧನೆ ಹಿಂದುತ್ವದ ಹೊಸ ಹುರುಪನ್ನೇ ಸೂಚಿಸುತ್ತಿದೆ…

ಈಗ ರೂಪುಗೊಂಡಿರುವ ಹಿಂದುತ್ವದ ಚೌಕಟ್ಟಿನ ಸಾಮಾಜಿಕ ಸಮೀಕರಣ ನಾಡಿನ ದಲಿತ ದಮನಿತಾ ಆಸಕ್ತಿಗಳ ವಿರುದ್ಧದ ಮೇಲ್ಜಾತಿ ಮೇಲ್ವರ್ಗದ ಪ್ರತಿಕ್ರಾಂತಿಯೇ ಆಗಿದೇ. ಕಾಂಗ್ರೇಸ್ ಪಕ್ಷ ಇಂಥ ಸಾಮಾಜಿಕ ಸಮಿಕರಣವನ್ನು ಓಲೈಸಬಲ್ಲದೆ ವಿನ ಮುರಿಯುವುದಿಲ್ಲ…

ಹೆಚ್ಚೆಂದರೆ ತಾನೂ ಈ ಸಮಿಕರಣದ ಫಲಾನುಭವಿಯಾಗಲು ಪ್ರಯತ್ನಿಸುತ್ತದೆಯೇ ವಿನ, ಚುನಾವಣ ಪ್ರಜಾತಂತ್ರದ ಚೌಕಟ್ಟಿನಲ್ಲೂ ಅದಕ್ಕೆ ಪ್ರತಿಯಾದ ರಾಜಕೀಯ ಸಮಿಕರಣ ರೂಪಿಸಲು ಯತ್ನಿಸುವುದಿಲ್ಲ ಎನ್ನುವುದು ಅರಸು ನಂತರದ ಈವರೆಗಿನ, ಹಾಗೂ ಹಾಲಿ ಚುನಾವಣಾ ಅನುಭವಗಳು ಸ್ಪಷ್ಟ ಪಡಿಸುತ್ತದೆ..

ಇದರಲ್ಲಿ ವಿಶೇಷವೇನೋ ಇಲ್ಲ. ಕಾಂಗ್ರೇಸ್ ಇರುವುದೇ ಹಾಗೇ..

ಬಿಜೆಪಿಯನ್ನು ಶಿಕ್ಷಿಸಲು ಜನರು ಕಾಂಗ್ರೆಸ್ಸಿಗೆ ಓಟು ಹಾಕಿದ್ದಾರೆಯೇ ಹೊರತು ವಿಶೇಷ ನಿರೀಕ್ಷೆಗಳಿಂದಲ್ಲ ಎನ್ನುವುದನ್ನು ಪ್ರಗತಿಪರರು ಅರ್ಥಮಾಡಿಕೊಳ್ಳಬೇಕಷ್ಟೆ…

ಬಲಿಷ್ಠ ಜಾತಿಗಳ ಬಲದಿಂದ ರಿಚಾರ್ಜ್ ಆಗಿರುವ ಹಿಂದುತ್ವ ಫ್ಯಾಶಿಸಮ್ ಅನ್ನು ಸೋಲಿಸಲು ಸಾಧ್ಯವಿರುವುದು ಎಲ್ಲಾ ಜಾತಿ, ಸಮುದಾಯಗಳ ಶೋಷಿತ ದಮನಿತಾ ದುಡಿಯುವ ಜನರ ಸಂಘಟಿತ ಪ್ರತಿರೋಧಕ್ಕೆ ಮಾತ್ರ…

ಅದೂ ಈಗ ದುರ್ಬಲ ಸ್ಥಿತಿಯಲ್ಲಿದೆ…

ಆದರೆ ಅದನ್ನು ಗಟ್ಟಿಗೊಳಿಸದೇ ಕಾಂಗ್ರೇಸ್ ಕೂಡ ಸರಿಯಾದ ವಿರೋಧ ಪಕ್ಷವಾಗಿ ಕೆಲಸ ಮಾಡುವುದಿಲ್ಲ…

ಆದ್ದರಿಂದ ಈಗಲಾದರೂ ಜನ ಚಳವಳಿಗಳು ಹಿಡಿಯಿಲ್ಲದ ಕೈ ಕೊಡವಿ, ಪ್ರಬಲವಾದ ಜನ ಪ್ರತಿರೋಧ ಕಟ್ಟಲು ಎದ್ದೇಳಬೇಕಿದೆ…ಅಲ್ಲವೇ?

ಜಸ್ಟ್ ಆಸ್ಕಿಂಗ್…

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!