Saturday, June 15, 2024

ಪ್ರಾಯೋಗಿಕ ಆವೃತ್ತಿ

ಡಾ.ಬಿ.ಆರ್ ರವಿಕಾಂತೇಗೌಡರಿಗೆ ಗೌರವ ಸಲ್ಲಿಕೆ

ಗುರುವಾರ ಮದ್ದೂರು ತಾಲ್ಲೂಕಿನ ದೇಶಹಳ್ಳಿ ಗ್ರಾಮಸ್ಥರಿಂದ‌ ಅಭಿನಂದನೆ‌ ಸ್ವೀಕರಿಸಿದ ಬೆಂಗಳೂರಿನ ಸಂಚಾರಿ ವಿಭಾಗದ ಜಂಟಿ ಆಯುಕ್ತ ಡಾ.ಬಿ.ಆರ್. ರವಿಕಾಂತೇಗೌಡರಿಗೆ ಕದಲೂರು ಉದಯ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಗೌರವ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯ ಗೌರವಾಧ್ಯಕ್ಷ ಸಿಪಾಯಿ ಶ್ರೀನಿವಾಸ್, ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ರವಿಕಾಂತೇಗೌಡರು ಕಾಯಾ, ವಾಚಾ ಮನಸ್ಸಿನಿಂದ,ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ.

ಕರ್ತವ್ಯದ ಜೊತೆಗೆ ಅನೇಕ ಪುಸ್ತಕಗಳನ್ನು ರಚನೆ ಮಾಡಿದ್ದಾರೆ. ಇವರ ಮಹೋನ್ನತ್ತ ಸಾಧನೆಗೆ ರಾಷ್ಟ್ರಪತಿಯವರಿಂದ ರಾಷ್ಟ್ರಪತಿಗಳ ಶ್ಲಾಘನೀಯ ಸೇವಾ ಪದಕ ಪಡೆದಿರುವುದು ನಮ್ಮ ತಾಲ್ಲೂಕಿಗೆ ಹಾಗೂ ತಾಯ್ನಾಡಿಗೆ ಹೆಮ್ಮೆಯ ಸಂಗತಿ ಎಂದು ಬಣ್ಣಿಸಿದರು.

ತಾಲ್ಲೂಕಿನ ದೇಶಹಳ್ಳಿ ಗ್ರಾಮದಲ್ಲಿ ಇಂತಹ ದಕ್ಷ ಅಧಿಕಾರಿ ರವಿಕಾಂತೇಗೌಡರನ್ನು ಅಭಿನಂದಿಸಲು ಅವಕಾಶ ಸಿಕ್ಕಿದ್ದು ನಮಗೆ ತುಂಬಾ ಸಂತಸದ ವಿಷಯ.

ಮುಂದಿನ ದಿನಗಳಲ್ಲಿ ಇವರು ಇನ್ನೂ ಉನ್ನತ ಹುದ್ದೆಯನ್ನು ಅಲಂಕರಿಸಿ ಉತ್ತಮ ಸಾಧನೆ ಮಾಡಲಿ.

ಅವರ ಸಾಧನೆ ನಮ್ಮ ಯುವಕ ಮಿತ್ರರಿಗೆ ಮಾರ್ಗದರ್ಶನ ಹಾಗೂ ದಾರಿ-ದೀಪವಾಗಲಿ ಎಂದರು. ಈ ಸಂದರ್ಭದಲ್ಲಿ ಕೆ.ಎಂ.ರವಿ, ಧನಂಜಯ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!