Monday, October 21, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ| 3.80 ಕೋಟಿ ವೆಚ್ಚದ ಡಾ.ಬಾಬುಜಗಜೀವನ ರಾಂ ಭವನಕ್ಕೆ ಸಚಿವರ ಶಂಕುಸ್ಥಾಪನೆ

ಮಂಡ್ಯ ಜಿಲ್ಲೆಯಲ್ಲಿ ಬಾಬು ಜಗಜೀವನ ರಾಮ್ ಭವನವನ್ನು ನಿರ್ಮಾಣ ಮಾಡುವಂತೆ ಹಲವಾರು ದಿನಗಳಿಂದ ಬೇಡಿಕೆ ಇತ್ತು, ಅದರಂತೆ 3 ಕೋಟಿ 80 ಲಕ್ಷ ರೂ. ವೆಚ್ಚದ ಬಾಬು ಜಗಜೀವನ ರಾಮ್ ಭವನದ ಶಂಕುಸ್ಥಾಪನೆಯನ್ನು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಸೋಮವಾರ ನೆರವೇರಿಸಿದರು.

ಮಂಡ್ಯ ಶಾಸಕ ರವಿಕುಮಾರ್ ಜಿಲ್ಲೆಯ ಅಭಿವೃದ್ಧಿಗಾಗಿ ಹೆಚ್ಚಿನ ಶ್ರಮ ವಹಿಸುತ್ತಿದ್ದು, ಬಾಬು ಜಗಜೀವನ ರಾಮ್ ಭವನವನ್ನು ನಿರ್ಮಿಸುವಂತೆ ತಿಳಿಸಿದರು. ಇಂದು ಭವನದ ಶಂಕುಸ್ಥಾಪನೆ ಕಾರ್ಯಕ್ರಮವು ಜರುಗುತ್ತಿದ್ದೂ, ಬಹುಶಃ ಮುಂದಿನ 1 ವರ್ಷದಲ್ಲಿಯೇ ಭವನವನ್ನು ಪೂರ್ಣಗೊಳಿಸಿ ಉದ್ಘಾಟಿಸಲು ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಬಾಡಿಗೆ ಕಟ್ಟಡದಲ್ಲಿರುವ ಜಿಲ್ಲೆಯಲ್ಲಿರುವ ಎಲ್ಲಾ ವಿದ್ಯಾರ್ಥಿ ನಿಲಯಗಳಿಗೆ ಸ್ಥಳವನ್ನು ನಿಗಧಿಪಡಿಸಿ ಹಂತ ಹಂತವಾಗಿ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲಾಗುವುದು ಎಂದರು.

ಗುಣಮಟ್ಟದ ಡಾ.ಬಾಬು ಜಗಜೀವನ್ ರಾಂ ಭವನ

ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ ರವಿಕುಮಾರ್ ಮಾತನಾಡಿ, ಮಂಡ್ಯ ಜಿಲ್ಲೆಯೂ ನಿರ್ಮಾಣವಾಗಿ ಸುಮಾರು 70 ವರ್ಷಗಳು ಕಳೆದರೂ ಇಂದಿಗೂ ಜಿಲ್ಲೆಯಲ್ಲಿ ಡಾ.ಬಾಬು ಜಗಜೀವನ ರಾಮ್ ಭವನವಿಲ್ಲ ಎಂದು ಮುಖಂಡರ ಚಿಂತೆಯಾಗಿತ್ತು. ನಾನು ಶಾಸಕನಾದ ನಂತರ ಬಾಬು ಜಗಜೀವನ ರಾಮ್ ಭವನವಿಲ್ಲದಿರುವುದನ್ನು ಮನಗೊಂಡು ಭವನದ ನಿರ್ಮಾಣಕ್ಕೆ ಅನುದಾನವನ್ನು ಬಿಡುಗಡೆಗೊಳಿಸುವಂತೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಕೇಳಿದ ನಂತರ ಅವರು ಸಂಬಂಧಪಟ್ಟ ಸಚಿವರ ಮೇಲೆ ಒತ್ತಡವವೇರಿ 3 ಕೋಟಿ 80 ಲಕ್ಷ ರೂ ವೆಚ್ಚದಲ್ಲಿ ಉತ್ತಮ ಹಾಗೂ ಗುಣಮಟ್ಟದ ಡಾ ಬಾಬು ಜಗಜೀವನ್ ರಾಮ್ ಭವನವನ್ನು ನಿರ್ಮಿಸಲು ಇಂದು ಡಾ ಬಾಬು ಜಗಜೀವನ ರಾಮ್ ಭವನದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವೀರ್ ಆಸಿಫ್, ಮೈಸೂರು ಸಕ್ಕರೆ ಕಂಪನಿ ನಿಯಮಿತದ ಅಧ್ಯಕ್ಷ ಸಿಡಿ ಗಂಗಾಧರ್, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯೀಮ್, ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟದ ಅಧ್ಯಕ್ಷ ಎನ್.ಆರ್.ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!