Thursday, November 19, 2026

ಪ್ರಾಯೋಗಿಕ ಆವೃತ್ತಿ

ಬಸವಣ್ಣನ ವಚನಗಳು ಶಿಕ್ಷಣ ಕ್ಷೇತ್ರಕ್ಕೆ ಮೌಲ್ಯಯುತ ಕಾಣಿಕೆ- ಡಾ.ಬಸವಾಂಜಲಿ ಮಾತಾಜಿ

ಮಂಡ್ಯ ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಶ್ರೀಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ವಿ.ವಿ. ರಸ್ತೆ, ಮಂಡ್ಯ ಇವರ ಆಶ್ರಯದಲ್ಲಿ ಮನೆ ಮನೆಗೆ ಸೌಹಾರ್ದ ಬಸವಜ್ಯೋತಿ ಕಾರ್ಯಕ್ರಮದ 135 ನೇ ಆಧ್ಯಾತ್ಮಿಕ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮವನ್ನು ಮೈಸೂರಿನ ಬಸವ ಜ್ಞಾನಿ ಮಂದಿರದ ಡಾ.ಮಾತೆ ಬಸವಾಂಜಲಿ ಮಾತಾಜಿ ಉದ್ಘಾಟಿಸಿ ಮಾತನಾಡಿ, ಬಸವಣ್ಣನವರು ಶಿಕ್ಷಣಕ್ಕೆ ಮೌಲ್ಯಯುತವಾದ ವಚನಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಬಸವಣ್ಣನವರು ಮೌಲ್ಯಯುತವಾದ ವಚನಗಳನ್ನು ಮನೆಮನೆಗಳಲ್ಲಿ ಮಕ್ಕಳಿಗೆ ಬೋಧಿಸುವುದರಿಂದ ವ್ಯಕ್ತಿಗತ ಸುಧಾರಣೆ ಆಗುತ್ತದೆ. ಬಸವಣ್ಣನವರು ಶಿಕ್ಷಣಕ್ಕೆ ಮೌಲ್ಯಯುತವಾದ ವಚನಗಳನ್ನು ಕಾಣಿಕೆಯಾಗಿ ನೀಡಿದ್ದಾರೆ ಎಂದರು.

ವಚನಗಳು ನನ್ನ ಪ್ರಾಣ ಇದ್ದಂತೆ ಅದನ್ನು ಸಂರಕ್ಷಿಸುವ ಹೊಣೆಯು ನಿಮ್ಮೆಲ್ಲರದ್ದು ಎಂದು ಬಸವಣ್ಣನವರು ಹೇಳಿದ್ದಾರೆ ಅವರ ಮಾತು ಶಿವಶರಣರಿಗೆ ಹಾಗೂ ಬಸವಣ್ಣನವರ ಅನುಯಾಯಿಗಳಿಗೆ ಒಂದು ಗುರುತರವಾದ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಜಾಹೀರಾತು

ಕಾರ್ಯಕ್ರಮದಲ್ಲಿ ಎಲಚಾಕನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಕೆ. ನಾಗರಾಜು ಬಸವಣ್ಣನವರ ಬಗ್ಗೆ ಪ್ರವಚನ ನೀಡಿದರು.

ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಡಿ. ದ್ಯಾವಣ್ಣ, ನಿರ್ದೇಶಕರಾದ ಶಿವಕುಮಾರ್, ಮಹಾದೇವಸ್ವಾಮಿ, ಹೊನ್ನಮ್ಮ ಸೋಮಶೇಖರ್, ಬಿ.ಎಸ್. ಸಂತೋಷ್, ನಿವೃತ್ತ ಪೊಲೀಸ್ ಅಧಿಕಾರಿ ರುದ್ರಸ್ವಾಮಿ, ಜಗದೀಶ್ ದೇವನೂರು, ಪುಷ್ಪಲತಾ, ಎ. ಎಚ್ ಧರ್ಮಲಿಂಗಯ್ಯ ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ