Friday, September 20, 2024

ಪ್ರಾಯೋಗಿಕ ಆವೃತ್ತಿ

ಸಂಸ್ಕೃತಿ ಬಿಂಬಿಸುವ ಹಬ್ಬ-ಆಚರಣೆಗಳಲ್ಲಿ ವೈಜ್ಞಾನಿಕ ಸತ್ವವಿದೆ- ಡಾ. ನಿಂಗರಾಜ್‌ಗೌಡ

ಭಾರತೀಯ ಸಂಸ್ಕೃತಿ ಬಿಂಬಿಸುವ ಹಬ್ಬ ಆಚರಣೆಗಳಲ್ಲಿ ವೈಜ್ಞಾನಿಕ ತಳಹದಿ ಮತ್ತು ಸತ್ವ ಹಡಗಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್‌ಗೌಡ ಹೇಳಿದರು.

ಮಂಡ್ಯ ನಗರದ ಶ್ರೀವಿದ್ಯಾಗಣಪತಿ ದೇವಾಲಯದ ಹೊಯ್ಸಳ ಸಭಾಂಗಣದಲ್ಲಿ ಶ್ರೀರಂಜಿನಿ ಕಲಾವೇದಿಕೆ,  ಹೊಯ್ಸಳ ಕರ್ನಾಟಕ ಸೇವಾ ಟ್ರಸ್ಟ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಇನ್ನಿತರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಜನತೆಗೆ ನೂತನ ವರ್ಷದ ಶುಭ ಕೋರಲು ಹೊಸ ವರ್ಷ 2024 ಹಾಗೂ ಸಾಹಿತಿ ಡಾ.ಶಂಕರ ಹಲ್ಲೇಗೆರೆ ರಚಿತ ಕವನ ಸಂಕಲನ ಬಿಡುಗಡೆ ಮತ್ತು ಸಾಂಸ್ಕೃತಿಕ- ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬ್ರಿಟೀಷರ ಆಗಮನದಿಂದ ಭಾರತದೇಶದಲ್ಲಿ ವಿದೇಶಿ ದಿನದರ್ಶಿಕೆಯಲ್ಲಿ ಜ.1ರಂದು ಹೊಸವರ್ಷ ಎಂದು ಕ್ಯಾಲೆಂಡರ್ ಬದಲಿಸುವ ದಿನವಾಗಿದೆ, ಇದರಲ್ಲಿ ವಿಶೇಷತೆ ಎನೂ ಇಲ್ಲ, ಜನವರಿ ಒಂದು ನಮಗೆ ಹೊಸ ವರ್ಷವೇನೂ ಅಲ್ಲಾ.. ಅದು ನಾವೂ ಸರ್ಕಾರಿ ಕಛೇರಿಗಳಲ್ಲಿ , ಬ್ಯಾಂಕಿಂಗ್ ವಹಿವಟಿನಲ್ಲಿ ಅನುಸರಿಸುವ ಕ್ಯಾಲೇಂಡರ್ ಮಾತ್ರವಾಗಿದೆ.. ಆದರೆ ಭಾರತೀಯ ಸಂಸ್ಕೃತಿ ಬಿಂಬಿಸುವ ಪಾಕೃತಿಕ ಹಬ್ಬ-ಆಚರಣೆಗಳಲ್ಲಿ ವೈಜ್ಞಾನಿಕ ತಳಹದಿ, ಸತ್ವವಿದೆ, ಪ್ರಾಕೃತಿಕ ಬದಲಾವಣೆಂಯೊಂದಿಗೆ ಆರೋಗ್ಯಕರ ಮಾಹಿತಿಯಿದೆ ಎಂದು ನುಡಿದರು.

ಪ್ರಾಕೃತಿಕ ಬದಲಾವಣೆಯಲ್ಲಿ ಬರುವ ಯುಗಾದಿ ನಮಗೆ ಹೊಸ ವರ್ಷವಾಗಿದೆ. ಸೂರ್ಯ ತನ್ನ ದಿಕ್ಕನ್ನೂ ಬದಲಿಸುವ ಸಂಕ್ರಾಂತಿ, ಮಹಾಶಿವರಾತ್ರಿ, ದೀಪಾವಳಿ, ರಾಷ್ಟ್ರೀಯ ಹಬ್ಬಗಳು, ನಾಡಹಬ್ಬಗಳು, ಶ್ರೀರಾಮ – ಶ್ರೀಕೃಷ್ಣ ಸೇರಿದಂತೆ ಮಹಾಪುರುಷರ ಜಯಂತಿಗಳು, ಗ್ರಾಮೀಣ ಸೊಗಡಿನಿಂದ ಕೂಡಿದ ಹಬ್ಬಗಳು, ಮನೆ ಮಂದಿಯನ್ನು ಸಂಭ್ರಮದಿಂದ ಇರುವಂತೆ ಆಚರಿಸುವ ಹಬ್ಬಗಳಲ್ಲಿ ನಮ್ಮ ಸಂಸ್ಕೃಂತಿ ಸಂಪ್ರದಾಯದ ಜೊತೆ ವೈಜ್ಞಾನಿಕತೆಯ ಮಹತ್ವವಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾಹಿತಿ ಡಾ. ಶಂಕರ ಹಲ್ಲೇಗೆರೆ ರಚಿತ ಗೆಲುವು ನಗಬೇಕು ಮತ್ತು ಕಿಣ್ಣರ ಲೋಕ ಎರಡು ಕವನ ಸಂಕಲನಗಳನ್ನು ಲೋಕಾರ್ಪಣೆ ಗೊಳಿಸಲಾಯಿತು. ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮಂಗಲ ಲಂಕೇಶ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವವರನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಲಾಯಿತು. ಗಮಕವಿಧುಷಿ ಧರಿತ್ರಿಅನಂತರಾವ್ ಮತ್ತು ತಂಡದಿಂದ ಭಕ್ತಿಸುಧಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಶ್ರೀರಂಜಿನಿ ಕಲಾವೇದಿಕೆ ಅಧ್ಯಕ್ಷ ಗಮಕಿ ವಿದ್ವಾನ್ ಸಿ.ಪಿ ವಿದ್ಯಾಶಂಕರ್, ನಿವೃತ್ತ ಜೀವ ವಿಮೆ ಅಧಿಕಾರಿ ಡಾ. ಎಸ್ ಶ್ರೀನಿವಾಸ ಶೆಟ್ಟಿ, ಕಲಾ ಪೋಷಕ ಬಿ ಎಂ ಅಪ್ಪಾಜಪ್ಪ, ವೈದ್ಯರಾದ ಡಾ.ಚಂದ್ರಶೇಖರ್. ಮನೋವೈದ್ಯರಾದ ಡಾ. ಟಿ ಎಸ್ ಸತ್ಯನಾರಾಯಣ ರಾವ್, ಕ್ರೀಡಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಪಿಎಂ ಸೋಮಶೇಖರ್, ಯುವ ಮುಖಂಡ ವಿನಯ್ ಕುಮಾರ್, ರಂಗಭೂಮಿ ಕಲಾವಿದ ಸಂಪಹಳ್ಳಿ ಬಸವರಾಜು, ಗಮಕ ವಿದುಷಿ ಧರಿತ್ರಿ ಆನಂದ ರಾವ್ ಮತ್ತಿತರರು ಪಾಲ್ಗೊಂಡಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!