Thursday, September 19, 2024

ಪ್ರಾಯೋಗಿಕ ಆವೃತ್ತಿ

ವಯೋವೃದ್ಧರಿಗೆ ಅಂಚೆ ಮೂಲಕವೇ ಮತದಾನ ಮಾಡಲು ಅವಕಾಶ : ಜಿಲ್ಲಾಧಿಕಾರಿ

ಅನಿವಾರ್ಯ ಹಾಗೂ ಅನಾರೋಗ್ಯದಿಂದ ಮತ ಕೇಂದ್ರಕ್ಕೆ ತೆರಳಿ ಮತದಾನ ಮಾಡಲು ಸಾಧ್ಯವಾಗದ ಮತದಾರರು ಅಂಚೆ ಮೂಲಕ ಮತದಾನ ಮಾಡಬಹುದಾಗಿದೆ. ಅಂಥ ಮತದಾರರು ಅರ್ಜಿ ಸಲ್ಲಿಸಿದರೆ ಮನೆಗೆ ಸುಮಾರು 10ರಿಂದ 12 ಮಂದಿ ಅಧಿಕಾರಿಗಳು ಭೇಟಿ ನೀಡಿ ಮತದಾನಕ್ಕೆ ಅವಕಾಶ ನೀಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸುದ್ದಿಗೋ‍ಷ್ಠಿಯಲ್ಲಿ ಮಾತನಾಡಿದ ಅವರು, ಅಂಚೆ ಮತದಾನ ಮಾಡಿದ ನಂತರ ಮತಗಟ್ಟೆಯಲ್ಲಿ ಮತ ಚಲಾಯಿಸಲು ಅವಕಾಶವಿರುವುದಿಲ್ಲ. ಜಿಲ್ಲೆಯಲ್ಲಿ 80 ವರ್ಷ ಮೇಲ್ಪಟ್ಟ 37,411 ಮತದಾರರು ಹಾಗೂ 23 ಸಾವಿರ ವಿಶೇಷಚೇತನ ಮತದಾರರಿದ್ದಾರೆ. ಎಲ್ಲರಿಗೂ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ದೃಷ್ಟಿದೋಷ ಇರುವವರಿಗೆ ಕನ್ನಡದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಸಂಪೂರ್ಣ ದೃಷ್ಟಿದೋಷ ಇದ್ದ ವಿದ್ಯಾವಂತರು ಮತಯಂತ್ರ ಮೇಲೆ ಬ್ರೈಲ್ ಲಿಪಿ ಇದ್ದು, ಅದರ ಮೂಲಕ ಮತದಾನ ಮಾಡಬಹುದಾಗಿದೆ ಎಂದರು.

ಅನಧಿಕೃತ ಫ್ಲೆಕ್ಸ್, ಬ್ಯಾನರ್‌ ತೆರವು

ಮಂಡ್ಯ ಜಿಲ್ಲೆಯಾದ್ಯಂತ ನಗರ, ಪಟ್ಟಣ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಪೂರ್ವಾನುಮತಿ ಪಡೆಯದೆ ಅನಧಿಕೃತವಾಗಿ ಅಳವಡಿಸಿರುವ ಬ್ಯಾನರ್, ಬಂಟಿಂಗ್ಸ್, ಫ್ಲೆಕ್ಸ್, ಪೋಸ್ಟರ್ ಮತ್ತು ಕಟೌಟ್ ಗಳನ್ನು ಮಾ.19ಕ್ಕೆ ತೆರವುಗೊಳಿಸಲಾಗಿದೆ. 120 ಗೋಡೆ ಬರಹಗಳು, 491 ಪೋಸ್ಟ್ ಗಳು, 834 ಬ್ಯಾರ್‍ಸ್ ಹಾಗೂ ಇತರೆ 228 ಒಟ್ಟು 1,673 ಫ್ಲೆಕ್ಸ್, ಬ್ಯಾನರ್‌ಗಳ ಪೈಕಿ 1,200 ತೆರವುಗೊಳಿಸಲಾಗಿದೆ ಎಂದು ವಿವರಿಸಿದರು.

ಇವಿಎಂ ಹ್ಯಾಕ್ ಮಾಡಲು ಸಾಧ್ಯವಿಲ್ಲ

ಎಲೆಕ್ಟ್ರಾನಿಕ್ ಓಟಿಂಗ್ ಮಷಿನ್ ಅನ್ನು ಯಾವುದೇ ಕಾರಣಕ್ಕೂ ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯ ಸಂಪನ್ಮೂಲ ವ್ಯಕ್ತಿ ಕೆ.ಆರ್.ಶ್ರೀನಿವಾಸ್ ತಿಳಿಸಿದರು. ಇವಿಎಂ ಹಾಗೂ ವಿವಿ ಪಾಟ್ (Voter Verifiable Paper Audit Trail) ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿಕೊಟ್ಟರು.

ಮಸ್ಟರಿಂಗ್-ಡಿಮಸ್ಟರಿಂಗ್

ವಿದ್ಯುನ್ಮಾನ ಯಂತ್ರಗಳನ್ನು ಸಂರಕ್ಷಿಸಿಡಲು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಭದ್ರತಾ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಮಳವಳ್ಳಿಯ ಶಾಂತಿ ಪಿಯು ಕಾಲೇಜು, ಮದ್ದೂರು ಎಚ್.ಕೆ.ವೀರಣ್ಣಗೌಡ ಪಿಯು ಕಾಲೇಜು, ಮೇಲುಕೋಟೆ ಪಿಎಸ್‌ಎಸ್‌ಕೆ ಪ್ರೌಢಶಾಲೆ, ಮಂಡ್ಯ ವಿಶ್ವವಿದ್ಯಾಲಯ(ಅಟಾನಮಸ್), ಶ್ರೀರಂಗಪಟ್ಟಣ ಸರ್ಕಾರಿ ಪಿಯು ಕಾಲೇಜು, ನಾಗಮಂಗಲ ಜೂನಿಯರ್ ಕಾಲೇಜು ಹಾಗೂ ಕೆ.ಆರ್.ಪೇಟೆಯಲ್ಲಿ ಸರ್ಕಾರಿ ಇಂಜಿನಿಯರಿAಗ್ ಕಾಲೇಜುಗಳಲ್ಲಿ ಮಸ್ಟರಿಂಗ್ ಹಾಗೂ ಡಿ-ಮಸ್ಟರಿಂಗ್ ನಡೆಯಲಿದೆ ಎಂದರು.

ಮತದಾನದ ನಂತರ ವಿದ್ಯುನ್ಮಾನ ಮತಯಂತ್ರಗಳನ್ನು ಎಣಿಕೆ ದಿನದವರೆಗೆ ಸುರಕ್ಷತೆಯಲ್ಲಿಡಲು ಭದ್ರತಾ ಕೊಠಡಿ ಮತ್ತು ಎಣಿಕೆ ಕೊಠಡಿಗಳನ್ನು ನಗರದ ವಿಶ್ವವಿದ್ಯಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕ ದೂರುಗಳನ್ನು ಸ್ವೀಕರಿಸಲು 1950ಗೆ ಕರೆ ಮಾಡಬಹುದು ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!