Thursday, September 19, 2024

ಪ್ರಾಯೋಗಿಕ ಆವೃತ್ತಿ

ಚುನಾವಣೆ ಸಂಬಂಧಿತ ದೂರು ಸ್ವೀಕರಿಸಲು ಕಂಟ್ರೋಲ್ ರೂಂ ಪ್ರಾರಂಭ

ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಚುನಾವಣೆಗೆ ಸಂಬಂಧಿಸಿದ ಸಾರ್ವಜನಿಕ ದೂರುಗಳನ್ನು ಸ್ವೀಕರಿಸಲು ಮಂಡ್ಯ ಜಿಲ್ಲೆಯಲ್ಲಿ ವಿಧಾನಸಭಾ ಕ್ಷೇತ್ರವಾರು ಕಂಟ್ರೋಲ್ ರೂಂ ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.

ಕಂಟ್ರೋಲ್ ರೂಂ ನ ದೂರವಾಣಿ ಸಂಖ್ಯೆ ವಿವರ ಕೆಳಕಂಡಂತಿವೆ 

ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯವಾಣಿ ಸಂಖ್ಯೆ-1950,

186-ಮಳವಳ್ಳಿ ವಿಧಾನಸಭಾ ಕ್ಷೇತ್ರ-08231-242277,

187-ಮದ್ದೂರು ವಿಧಾನಸಭಾ ಕ್ಷೇತ್ರ-08232-298074,

188-ಮೇಲುಕೋಟೆ ವಿಧಾನಸಭಾ ಕ್ಷೇತ್ರ-08236-255128,

189-ಮಂಡ್ಯ ವಿಧಾನಸಭಾ ಕ್ಷೇತ್ರ-08232-231229,

190-ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರ -08236-252029,

191-ನಾಗಮಂಗಲ ವಿಧಾನಸಭಾ ಕ್ಷೇತ್ರ-08234-285045,

192-ಕೆ.ಆರ್ ಪೇಟೆ ವಿಧಾನಸಭಾ ಕ್ಷೇತ್ರ-08230-262227

ಇದುವರೆಗೆ 217 ಪ್ರಕರಣ ದಾಖಲು

ಇದೇ ಮಾರ್ಚ್ 25ರ ಅಂತ್ಯಕ್ಕೆ ಅಕ್ರಮವಾಗಿ ದಾಸ್ತಾನು ಮತ್ತು ಸಾಗಾಣಿಕೆ ಮಾಡಲಾಗುತ್ತಿದ್ದ ವಸ್ತುಗಳು ಹಾಗೂ ದಾಖಲಾತಿಗಳನ್ನು ಒದಗಿಸದ ಅನಧಿಕೃತ ಹಣ ಮತ್ತು ಮಧ್ಯಗಳನ್ನು ಜಪ್ತಿ ಮಾಡಿ ಮಾಲೀಕರ ವಿರುದ್ಧ ಅಬಕಾರಿ ಇಲಾಖೆಯಿಂದ 206 ಪ್ರಕರಣಗಳು ಮತ್ತು ಆರಕ್ಷಕ ಇಲಾಖೆಯಿಂದ 11 ಪ್ರಕರಣಗಳು ಸೇರಿದಂತೆ ಒಟ್ಟು 217 ಪ್ರಕರಣಗಳು ದಾಖಲು ಮಾಡಲಾಗಿದೆ.

ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ಕಾರಿ ಮತ್ತು ಖಾಸಗಿ ಪ್ರದೇಶಗಳಲ್ಲಿ ಅನಧಿಕೃತವಾಗಿ ಬ್ಯಾನರ್, ಬಂಟಿಂಗ್ಸ್, ಪ್ಲೆಕ್ಸ್, ಪೊಸ್ಟರ್ಸ್ ಮತ್ತು ಕಟೌಟ್ಸ್‍ಗಳನ್ನು ಅಳವಡಿಸಿದ್ದು, ಮಾ.25ರ ಅಂತ್ಯಕ್ಕೆ ತೆರವುಗೊಳಿಸಲಾಗಿದೆ.

ಸರ್ಕಾರಿ ಪ್ರದೇಶಗಳಲ್ಲಿ ಗೋಡೆ ಬರಹ 675, ಪೊಸ್ಟರ್ಸ್ 3,717, ಬ್ಯಾನರ್ 6,101 ಹಾಗೂ ಇನ್ನಿತರ 2,572 ಸೇರಿದಂತೆ ಒಟ್ಟು 6,151. ಖಾಸಗಿ ಪ್ರದೇಶಗಳಲ್ಲಿ ಗೋಡೆ ಬರಹ 354, ಪೊಸ್ಟರ್ಸ್ 495, ಬ್ಯಾನರ್ 368 ಹಾಗೂ ಇನ್ನಿತರ 100 ಸೇರಿದಂತೆ ಒಟ್ಟು 1,317 ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!