Thursday, September 19, 2024

ಪ್ರಾಯೋಗಿಕ ಆವೃತ್ತಿ

ತಮಿಳುನಾಡಿಗೆ ಹನಿ ನೀರನ್ನು ಬಿಡುಗಡೆ ಮಾಡಬಾರದು- ಡಾ.ಕೆ.ಅನ್ನದಾನಿ

ಒಂದು ಹನಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಬಾರದೆಂದು ಮಾಜಿ ಶಾಸಕ ಡಾ. ಕೆ.ಅನ್ನದಾನಿ ರಾಜ್ಯ ಸಕಾ೯ರವನ್ನು ಒತ್ತಾಯಿಸಿದರು.

ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾವೇರಿ ನೀರನ್ನು ತಮಿಳುನಾಡಿಗೆ ನೀರು ಬಿಡುವುದಿಲ್ಲ ಎನ್ನುವ ರಾಜ್ಯ ಸಕಾ೯ರದ ತೀಮಾ೯ನಕ್ಕೆ ಸ್ವಾಗತಿಸುತ್ತೇನೆ. ಆದರೇ ಈ ತೀಮಾ೯ನವನ್ನು ಮೊದಲೇ ಮಾಡಬೇಕಿತ್ತು. ರಾಜ್ಯದಲ್ಲಿಯೇ ಬರದ ಪರಿಸ್ಥಿತಿಯಲ್ಲಿ ಇರುವ ಸಂದರ್ಭದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ನೀರು ಬಿಟ್ಟಿರುವುದು ಸರಿಯಲ್ಲ ಮುಂದಿನ ದಿನಗಳಲ್ಲಿ ಒಂದು ಹನಿ ಕಾವೇರಿ ನೀರನ್ನು ಬಿಡಬಾರದೆಂದು ಆಗ್ರಹಿಸಿದರು.

ಕಳೆದ ಐದು ವರ್ಷದಲ್ಲಿ ಅಕ್ರಮಗಳು ನಡೆದಿವೆ ಎನ್ನುವ ಶಾಸಕರ ಮಾಡಿರುವ ಆರೋಪಗಳನ್ನು ಗಮನಿಸಿದ್ದೇನೆ. ಯಾರು ಅಕ್ರಮವಾಗಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆಂದು ಗಾಳಿಯಲ್ಲಿ ಗುಂಡು ಹಾರಿಸಿದಂತೆ ಆರೋಪ ಮಾಡಿದ್ದಾರೆ. ಕಳೆದ 15 ವಷ೯ದಲ್ಲಿ ಭೂ ಅಕ್ರಮಗಳ ಬಗ್ಗೆ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಮಳವಳ್ಳಿ ಪಟ್ಟಣ ಕುಡಿಯುವ ನೀರು ಯೋಜನೆಯ ಪೂರ್ಣ ಕಾಮಗಾರಿಯನ್ನು ಹಸ್ತಾಂತರ ಮಾಡಿಕೊಂಡಿಲ್ಲ, ಸತ್ತೇಗಾಲದಿಂದ ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದ ಪೈಪ್ ಗಳನ್ನು ಮಾತ್ರ ಹಸ್ತಾಂತರ  ಮಾಡಿಕೊಳ್ಳಲಾಗಿತ್ತು. ಕಳಪೆ ಕಾಮಗಾರಿಯ ಬಗ್ಗೆ ಸಿಓಡಿ ತನಿಖೆಗೆ ನಾನೇ ಒತ್ತಾಯಿಸಿದ್ದೆ. ಕಳಪೆ ಕಾಮಗಾರಿಗೆ ನನ್ನ ಹಿಂದೆ ಆಗಿದ್ದ ಶಾಸಕರೇ ಕಾರಣರಾಗಿದ್ದಾರೆಂದು ಆರೋಪಿಸಿದರು.

ಪೂರಿಗಾಲಿ ಹನಿ ನೀರಾವರಿ ಯೋಜನೆ ಹಾಗೂ ಕಿರುಗಾವಲು ಬಹು ಹಳ್ಳಿಗಳ ನೀರು ಕುಡಿಯುವ ಯೋಜನೆ ಕಾಮವಾರಿಯನ್ನು ಶೇ.70 ಕಾಮಗಾರಿಯನ್ನು ನಾನೇ ಮುಗಿಸಿದ್ದೇನೆ. ಪೂರಿಗಾಲಿ ಹನಿನೀರಾವರಿ ಯೋಜನೆಗೆ ಸಕಾ೯ರದಿಂದ 300 ಕೋಟಿ ಹಣ ಬಿಡುಗಡೆಗೊಳಿಸಿ ಕಾಮಗಾರಿ ಅಂತಿಮಗೊಳ್ಳಲು ಶ್ರಮಿಸಿದ್ದೇನೆಂದು ಹೇಳಿದರು.

ಪುರಸಭೆ ಸದಸ್ಯರಾದ ನಂದಕುಮಾರ್, ಸಿದ್ದರಾಜು ಪ್ರಶಾಂತ್, ನೂರುಲ್ಲಾ ಮುಖಂಡರಾದ ಶಂಕರೇಗೌಡ ಸದಾನಂದ, ಕಾಂತರಾಜು, ಕಂಬರಾಜು ಸೇರಿದಂತೆ ಇತರರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!