Thursday, September 19, 2024

ಪ್ರಾಯೋಗಿಕ ಆವೃತ್ತಿ

ಆರೋಗ್ಯಕರ ಜೀವನಕ್ಕೆ ತಂಬಾಕು ನಿಯಂತ್ರಿಸಿ- ಡಾ.ಕೆ.ಮೋಹನ್

ಜಿಲ್ಲೆಯ ನಾಗರೀಕರಿಗೆ ಉತ್ತಮವಾದ ಆರೋಗ್ಯ ನೀಡಲು ತಂಬಾಕು ನಿಯಂತ್ರಣ ಅತ್ಯಾವಶ್ಯಕವಾದ ಅಂಶವಾಗಿದೆ ಎಂದು ಡಿಹೆಚ್ಓ ಡಾ.ಕೆ.ಮೋಹನ್ ತಿಳಿಸಿದರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಡಿಹೆಚ್ಓ ಕಛೇರಿ, ಡಿಎಸ್ಓ ಕಛೇರಿ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಮಂಡ್ಯ ಇವರ ಸಹಭಾಗಿತ್ವದಲ್ಲಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಒಂದು ದಿನದ ತರಬೇತಿ ಶಿಬಿರ ಉದ್ಘಾಟಿಸಿ ಮಾತನ್ನಾಡಿದರು.

ಗ್ರಾಮ ಮಟ್ಟದಲ್ಲಿ ಆರೋಗ್ಯ, ಆರಕ್ಷಕ, ಶಿಕ್ಷಣ ಇನ್ನಿತರ ಇಲಾಖೆಗಳು ಒಟ್ಟಾಗಿ ತಂಬಾಕು ನಿಯಂತ್ರಣ ಮಾಡಿ ಕೋಟ್ಪಾ ಕಾಯಿದೆಯನ್ನು ಉಲ್ಲಂಘನೆ ಆಗದಂತೆ ನಿರಂತರ ನಿಗಾವಣೆ ಮಾಡಲು ಆ ಮೂಲಕ ತಂಬಾಕು ಮುಕ್ತ ಯುವಜನರ ಸೃಷ್ಟಿಗೆ ಆರೋಗ್ಯ ಇಲಾಖೆಯೊಡನೆ ಕೈ ಜೋಡಿಸಲು ಕರೆ ನೀಡಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಕುಮಾರ್ ಮಾತನಾಡಿ, ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳನ್ನು ಶೇ.100ರಷ್ಟು ತಂಬಾಕು ಮುಕ್ತ ಗೊಳಿಸಲು ಆ ಮೂಲಕ ಭವಿಷ್ಯದಲ್ಲಿ ಮಂಡ್ಯ ಜಿಲ್ಲೆಯು ತಂಬಾಕು ಮುಕ್ತ ಜಿಲ್ಲೆಯನ್ನಾಗಿಸಲು ಆರೋಗ್ಯ ಇಲಾಖೆಗೆ ಸಾರ್ವಜನಿಕರು ಸಹಕರಿಸಬೇಕೆಂದರು.

ಮಿಮ್ಸ್ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ದಲಿಂಗಪ್ಪ ಹೂಗಾರ್, ಹಿರಿಯ ದಂತ ವೈದ್ಯಾಧಿಕಾರಿ ಡಾ.ಸ್ಮಿತ.ಜೆ.ಡಿ, ಜಿಲ್ಲಾ ಸಲಹೆಗಾರ ತಿಮ್ಮರಾಜು.ಎಸ್.ಎನ್, ಆರೋಗ್ಯ ಮೇಲ್ವೀಚಾರಕ ಶಿವಸ್ವಾಮಿ ಹಾಗೂ ಸಮಾಜ ಕಾರ್ಯಕರ್ತ ಮೋಹನ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!