Friday, October 18, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ ನೆಲದಲ್ಲಿ ಹುಟ್ಟುವುದು ಪುಣ್ಯ ; ಡಾ.ಮಹೇಶ್ ಜೋಶಿ

ಕರ್ನಾಟಕದಲ್ಲಿ ಹುಟ್ಟುವುದು ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಅದಕ್ಕಿಂತ ಮಿಗಿಲಾಗಿ ನಾಗಮಂಗಲದಲ್ಲಿ ಹುಟ್ಟುವುದು ನಮ್ಮ ಪೂರ್ವಜನ್ಮದ ಪುಣ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಹೇಳಿದರು.

ನಾಗಮಂಗಲದ ಗುರುಭವನದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಯಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ಸಭೆಯ ಉದ್ಘಾಟನೆ ಮಾಡಿ ಮಾತನಾಡಿದರು.

ನಮ್ಮ ಕರ್ನಾಟಕ ಒಂದು ಪುಣ್ಯಭೂಮಿ ಇಲ್ಲಿ ಹುಟ್ಟುವುದೇ ನಮಗೆ ಪುಣ್ಯ ಇಲ್ಲಿ ಇರುವಂತಹ ಸಾಹಿತ್ಯ ಕನ್ನಡ ಭಾಷೆಯ ಪ್ರೌಢಿಮೆ ಇಡೀ ವಿಶ್ವದ ಪ್ರಮುಖ ಮೂರು ಭಾಷೆಗಳಲ್ಲಿ ಕನ್ನಡವು ಒಂದಾಗಿದೆ ಎಂದು ತಿಳಿಸಿದರು .

ನಾಗಮಂಗಲ ಒಂದು ಪುರಾಣ ಪ್ರಸಿದ್ಧವಾದ ಸ್ಥಳ, ಇಲ್ಲಿನ ನರಸಿಂಹ ಸ್ವಾಮಿ ದೇವಸ್ಥಾನ ಇಲ್ಲಿನ ಇತಿಹಾಸವನ್ನು ನಾಗಮಂಗಲ ಎಂಬ ಹೆಸರು ಬರಲು ಕಾರಣವನ್ನು ತಿಳಿಸುತ್ತದೆ . ಇದು ಕೆಲವರಿಗೆ ಬೇಡವಾದರು ನಂಬಲೇಬೇಕಾದ ಜನರಿದ್ದಾರೆ. ನಂಬಿಕೆ ಎಂಬುದು ಅತಿ ಮುಖ್ಯ ನಂಬಿಕೆಯನ್ನು ನಂಬಿ ಹೋದರೆ ನಾವು ಯಶಸ್ಸನ್ನು ಕಾಣುತ್ತೇವೆ. ಅದೇ ರೀತಿ ಪ್ರತಿಯೊಬ್ಬರಲ್ಲಿ ನಾವು ವಿಶ್ವಾಸವನ್ನು ಇಟ್ಟು ಬೆಳೆಯಬೇಕಾಗಿದೆ ಎಂದರು.

ಈ ನಿಟ್ಟಿನಲ್ಲಿ ಮಂಡ್ಯದಲ್ಲಿ ನಡೆಯಲಿರುವಂತಹ ಅಖಿಲ ಭಾರತ ಕನ್ನಡದ ಸಾಹಿತ್ಯ ಸಮ್ಮೇಳನದಲ್ಲಿ ನಾಗಮಂಗಲದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ನಾಗಮಂಗಲ ಬಿ ಎಂ ಶ್ರೀ ರವರಿಂದ ಹಿಡಿದು ಅನೇಕ ಕವಿಗಳು ,ಜಾನಪದ ಕವಿಗಳು, ಕಾದಂಬರಿ ಕಾರರು ಹಾಗೆ ರಾಜರಾಮಣ್ಣನಂತಹ ಅಣು ವಿಜ್ಞಾನಿಗಳು ಹುಟ್ಟಿದಂತಹ ತಾಲೂಕು, ತಾಲೂಕಿನ ಜನ ಎಲ್ಲ ರಂಗದಲ್ಲೂ ಮುಂದಿದ್ದಾರೆ. ಇದನ್ನು ನೀವು ಗಮನದಲ್ಲಿಟ್ಟು ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೀವೇ ಬರಬೇಕು, ಇದು ನನ್ನ ಸಮ್ಮೇಳನ ನಾವೇ ಇದರ ಬಾಗಿಗಳು ಎಂಬುದನ್ನು ತಿಳಿದು ನೀವೆಲ್ಲರೂ ಭಾಗವಹಿಸಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಹಕಾರವನ್ನು ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಲಹೆಗಳನ್ನು ಕೇಳಲಾಗಿ ಕನ್ನಡ ಸಾಹಿತ್ಯ ಪರಿಷತ್ ಹಿಂದಿನ ಖಜಾಂಚಿ ಶ್ರೀನಿವಾಸ್ ದೇಶಪ್ರೇಮಿ ರವರು ಮಾತನಾಡಿ, ಸಾಹಿತ್ಯ ಸಮ್ಮೇಳನದಲ್ಲಿ ಇಲಾಖೆ ಕಾರ್ಯಕ್ರಮಗಳನ್ನೇ ವೇದಿಕೆ ಕಾರ್ಯಕ್ರಮಗಳಲ್ಲಿ ಮಾಡಿದಂತೆ ಸಾಹಿತ್ಯಕ್ಕೆ ಪೂರಕವಾದ ಕೆಲಸಗಳನ್ನು ವೇದಿಕೆಯ ಕಾರ್ಯಕ್ರಮವಾಗಿ ಮಾಡುವಂತೆ ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮಹೇಶ್ ಜೋಶಿ ರವರು ಅಖಿಲ ಭಾರತ ಕನ್ನಡದ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯಕ್ಕೆ ಪೂರಕವಾದ ಕಾರ್ಯಕ್ರಮಗಳೇ ಇರುತ್ತವೆ. ಇದರಲ್ಲಿ ಯಾವುದೇ ಅನುಮಾನ ಬೇಡವೆಂದು ತಿಳಿಸಿದರು .

ಕಾರ್ಯಕ್ರಮದಲ್ಲಿ ಸಮ್ಮೇಳನ ಸಂಚಾಲಕಿ ಮೀರಾ ಶಿವಲಿಂಗಯ್ಯ, ಕಸಾಪ ತಾಲೂಕು ಅಧ್ಯಕ್ಷ ಚಂದ್ರಶೇಖರ್ ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದು ,ಕನ್ನಡ ಸಾಹಿತ್ಯ ಪರಿಷತ್ ನ ಹಿರಿಯ ಸದಸ್ಯರುಗಳು ಹಾಗೂ ತಾಲೂಕಿನ ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!