Thursday, September 19, 2024

ಪ್ರಾಯೋಗಿಕ ಆವೃತ್ತಿ

ದೇಶದ ಅಭಿವೃದ್ದಿಗೆ ಶಿಕ್ಷಣ ಅತ್ಯಾವಶ್ಯಕ- ಡಾ.ಎಂ.ಬಿ.ಬೋರಲಿಂಗಯ್ಯ

ಯಾವುದೇ ದೇಶದ ಅಭಿವೃದ್ದಿಗೆ ಶಿಕ್ಷಣ ಮತ್ತು ಆರೋಗ್ಯ ಅತ್ಯಂತ ಅವಶ್ಯಕಕ ಎಂದು ದಕ್ಷಿಣ ವಲಯ ಪೊಲೀಸ್ ಉಪ ಮಹಾ ನಿರೀಕ್ಷಕ ಡಾ.ಎಂ.ಬಿ.ಬೋರಲಿಂಗಯ್ಯ ಅಭಿಪ್ರಾಯಪಟ್ಟರು.

ಡಾ.ಹೆಚ್.ಡಿ.ಚೌಡಯ್ಯ ಅವರ 96ನೇ ಜನ್ಮದಿನಾಚರಣೆ ಅಂಗವಾಗಿ ಮಂಡ್ಯ ಜನತಾ ಶಿಕ್ಷಣ ಟ್ರಸ್ಟ್ ವತಿಯಿಂದ ನಡೆದ 2023ನೇ ಸಾಲಿನ ರಾಜ್ಯಮಟ್ಟದ ಡಾ.ಹೆಚ್.ಡಿ. ಚೌಡಯ್ಯ ಶಿಕ್ಷಣ, ಅಂಕಣ, ಸಾಹಿತ್ಯ ಮತ್ತು ಕ್ರೀಡಾ ಪ್ರಶಸ್ತಿಗಳ  ಪ್ರದಾನ ಹಾಗೂ ಪ್ರತಿಭಾ ವಿದ್ಯಾರ್ಥಿ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ದೇಶವನ್ನು ಉದಾಹರಣೆಯಾಗಿ ತೆಗೆದುಕೊಂಡರೆ ಆ ದೇಶದ ಪ್ರಗತಿಗೆ ಶಿಕ್ಷಣ ಆರೋಗ್ಯಗಳೇ ಪ್ರಗತಿಯ ಮೆಟ್ಟಿಲುಗಳಾಗಿವೆ, ಶಿಕ್ಷಣ ಮಹತ್ವ ಅರಿತರವರು ಮಾತ್ರ ವಿದ್ಯಾಸಂಸ್ಥೆಗಳನ್ನು ತೆರೆದು ಶಿಕ್ಷಣ ಒದಗಿಸುತ್ತಿದ್ದಾರೆ. ಅಂತರವರಲ್ಲಿ ಪಿಇಎಸ್ ಸಂಸ್ಥೆ ಸ್ಥಾಪನೆ ಮಾಡಿದ ಕೆ.ವಿ.ಶಂಕರಗೌಡರು ಹಾಗೂ ಆ ಸಂಸ್ಥೆಯನ್ನು ಅಭಿವೃದ್ದಿಯತ್ತೆ ಕೊಂಡೊಯ್ದ ಹೆಚ್.ಡಿ.ಚೌಡಯ್ಯನವರು ಮಾದರಿಯಾಗಿದ್ದಾರೆಂದರು.

ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸಿರುವ ವಿದ್ಯಾರ್ಥಿಗಳು ಇದನ್ನೇ ಅವಕಾಶವೆಂದು ಪರಿಗಣಿಸಿ ಉನ್ನತ ಮಟ್ಟಕ್ಕೆ ಬೆಳವಣಿಗೆಯೊಂದಬೇಕೆಂದು ಸಲಹೆ ನೀಡಿದರು.

ಡಾ.ಹೆಚ್.ಡಿ. ಚೌಡಯ್ಯ ಶಿಕ್ಷಣ ಪ್ರಶಸ್ತಿಯನ್ನು ವಿಶ್ರಾಂತ ಪ್ರಾಂಶುಪಾಲ ಪ್ರೊ.ಎಂ.ಎಸ್.ಧನಂಜಯ, ಅಂಕಣ ಹಾಗೂ ಸಾಹಿತ್ಯ ಪ್ರಶಸ್ತಿಯನ್ನು ಪ್ರಸಿದ್ದ ಅಂಕಣಕಾರ ಡಾ.ವಿ.ರಂಗನಾಥ್, ಕ್ರೀಡಾ ಪ್ರಶಸ್ತಿಯನ್ನು ಪ್ಯಾರಾ ಒಲಂಪಿಕ್ ಕ್ರೀಡಾಪಟು ವೇಣುಗೋಪಾಲ್ ಅವರಿಗೆ ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಗಳು ತಲಾ ₹20 ಸಾವಿರ ರೂ ನಗದು ಹಾಗೂ ಪ್ರಶಸ್ತಿ ಫಲಕಗಳನ್ನೊಳಗೊಂಡಿದ್ದವು.

ಪ್ರತಿಭಾ ಪುರಸ್ಕಾರವನ್ನು ಮಂಡ್ಯ ತಾಲ್ಲೂಕಿನ ಹೊಳಲು ಸರ್ಕಾರಿ ಶಾಲೆಯ ಮೇಘನಾ ಹೆಚ್.ವಿ, ವಿನಯ್ ಹೆಚ್.ಜೆ, ಹೊಳಲು ಶ್ರೀವೆಂಕಟೇಶ್ವರ ವಿದ್ಯಾನಿಕೇತನ ಪ್ರೌಢಶಾಲೆಯ ದೀಕ್ಷಾ ಜೆ ಹಾಗೂ ತೇಜಸ್ ಸಿ.ಜೆ ಅವರಿಗೆ ನೀಡಲಾಯಿತು. ಪ್ರತಿಭಾ ಪುರಸ್ಕಾರವು ತಲಾ ₹2 ಸಾವಿರ ನಗದುವನ್ನೊಳಗೊಂಡಿತ್ತು.ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್ ವಹಿದ್ದರು. ಪಿಇಟಿ ಕಾರ್ಯದರ್ಶಿ ಎಸ್.ಎಲ್.ಶಿವಪ್ರಸಾದ್ ಹಾಗೂ ಟ್ರಸ್ಟಿ ಹೆಚ್.ಸಿ.ಮೋಹನ್ ಕುಮಾರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!