Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಪ್ಪಟ ರಾಷ್ಟ್ರಪ್ರೇಮಿ ಡಾ. ನಾ.ಸು. ಹರ್ಡಿಕರ್ – ಧನಂಜಯ ದರಸಗುಪ್ಪೆ

ಧಾರವಾಡ ಜಿಲ್ಲೆಯ ಹಾನಗಲ್ಲಿನ ಕಿಳುವಳ್ಳಿ ಗ್ರಾಮದ, ಪುರೋಹಿತ್ಯ ಸುಬ್ಬರಾವ್ ಮತ್ತು ಯಮುನಾ ಬಾಯಿ ಪುತ್ರರಾಗಿ ಹರ್ಡಿಕರ್ 7ನೇ ಮೇ 1889ರಲ್ಲಿ ಜನಿಸಿದ್ದ ಹರ್ಡಿಕರ್ ಅವರು ಅಪ್ಪಟ ರಾಷ್ಟ್ರಪ್ರೇಮಿಯಾಗಿ ದೇಶಕ್ಕೆ ಕೊಡುಗೆ ನೀಡಿದ್ದಾರೆಂದು ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್ ವಲಯಾಧ್ಯಕ್ಷ ಲಯನ್ ಧನಂಜಯ ದರಸಗುಪ್ಪೆ ಸ್ಮರಿಸಿದರು.

ಮಂಡ್ಯದ ಭಾರತ ಸೇವಾದಳದ ಡಾ.ನಾ.ಸು ಹರ್ಡಿಕರ್ ಭವನದ ಸಭಾಂಗಣದಲ್ಲಿ ಮಂಡ್ಯ ನಾಲ್ವಡಿ ಲಯನ್ಸ್ ಕ್ಲಬ್ ಆಯೋಜಿಸಿದ್ದ “48ನೇ ವರ್ಷದ ಡಾ.ನಾ.ಸು. ಹರ್ಡಿಕರ್ ರ ವರ ಪುಣ್ಯ ಸಂಸ್ಮರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹರ್ಡಿಕರ್ ಅವರು ಉತ್ತಮ ಅಭ್ಯಾಸ ಮಾಡಿ ಕಲ್ಕತ್ತಾದಲ್ಲಿ ವೈದ್ಯಕೀಯ ಪದವಿ ಪಡೆದು ತದನಂತರ ಅಮೆರಿಕದ ಮೆಚಿಗನ್ ವಿದ್ಯಾಲಯದಲ್ಲಿ ‘ಉನ್ನತ ವೈದ್ಯಕೀಯ ಪದವಿ’ ಪಡೆದರು. ಅಲ್ಲಿಯೇ ‘ಹಿಂದುಸ್ತಾನ್ ಅಸೋಸಿಯೇಷನ್ ಆಫ್ ಅಮೆರಿಕಾ’ದ ಅಧ್ಯಕ್ಷರಾಗಿದ್ದು ಭಾರತೀಯರ -ಪರಿಸ್ಥಿತಿಯ ಬಗ್ಗೆ ಕರಪತ್ರ ಹಂಚಿದ್ದು ಅಲ್ಲಿನ ಪ್ರಮುಖ ಪತ್ರಿಕೆಗಳಲ್ಲಿ ಸುದ್ದಿಯಾಗಿ ಗಮನ ಸೆಳೆದಿತ್ತು. ಅಷ್ಟರಲ್ಲಿ ಲಾಲ ರಾಜ ಪತ್ ರಾಯ್ ರವರ ಯ ಪರಿಚಯವಾಯ್ತು. ಅವರಿಗೆ ಅಲ್ಲಿಯೇ ಉತ್ತಮ ದೊಡ್ಡ ಉದ್ಯೋಗ ಸಿಗುತ್ತಿತ್ತು. ಅಷ್ಟರಲ್ಲಾಗಲೇ ಭಾರತದ ಸ್ವಾತಂತ್ರ್ಯ ಬಿಡುಗಡೆಗೆ ಹೋರಾಟಗಳು ನಡೆಯುತ್ತಿದ್ದು, ಸ್ವಾತಂತ್ರ ಹೋರಾಟಗಾರರುಗಳ ಪರಿಚಯವಾಗಿ ತಾವು ಕೂಡ ಸ್ವಾತಂತ್ರ್ಯದ ಚಳುವಳಿಯ ಭಾಗವಾಗಿ ಧುಮುಕಿದರು. ಕೆಲ ಕಾಲ ಯಂಗ್ ಇಂಡಿಯಾ ಪತ್ರಿಕೆಯಲ್ಲಿಯೂ ಸೇವೆ ಸಲ್ಲಿಸಿದ್ದರು ಎಂದು ಸ್ಮರಿಸಿದರು.

1919ರಲ್ಲಿ ಅಮೃತ್ ಸರದಲ್ಲಿ ನಡೆದ ಘಟನೆಯಿಂದ, ಚಳುವಳಿಗಾರರ ಉದ್ದೇಶವನ್ನು ಸ್ಪಷ್ಟವಾಗಿ ತಿಳಿಸುವ ಸಲುವಾಗಿ ಯೋಜನಾ ಬದ್ಧವಾಗಿ ಮತ್ತು ಸಂಘಟನಾತ್ಮಕವಾಗಿ ಚಳುವಳಿಗಾರರಿಗೆ ಶಿಸ್ತನ್ನು ಕಲಿಸುವ ಉದ್ದೇಶದಿಂದ,’ಸೇವಾ ಮಂಡಲ’ವನ್ನೇ, ಆಂಧ್ರ ಕಾಕಿನಾಡ ಸಮಾವೇಶದಲ್ಲಿ “ಹಿಂದೂಸ್ತಾನಿ ಸೇವಾದಳ” ಎಂದು ಪುನರ್ ನಾಮಕರಣದೊಂದಿಗೆ ಸ್ಥಾಪಿಸಲಾಯಿತು, ಕಾರ್ಯದರ್ಶಿಯಾಗಿ ನಾ. ಸು. ಹರ್ಡಿಕರ್ ನೇಮಕಗೊಂಡರು. 1939ರಲ್ಲಿ ನಡೆದ ಭೂಕಂಪನದ ಸಮಯದಲ್ಲಿ, ಸೇವಾದಳದ ಕಾರ್ಯಕರ್ತರ ನಿಸ್ವಾರ್ಥ ಸೇವಾ ಮನೋಭಾವದಿಂದ ನೊಂದವರ ಹಾರೈಕೆ, ಉಳಿದ ಜನರ ರಕ್ಷಣೆ ಮಾಡುವ ಮೂಲಕ ಸೇವಾ ದಲದ ಉದ್ದೇಶ ಏನು ಎಂಬುದನ್ನು ತೋರಿಸಿಕೊಟ್ಟು ಎಲ್ಲರಿಂದ ಪ್ರಶಂಸೆಗೆ ಪಾತ್ರರಾದರು ಎಂದು ತಿಳಿಸಿದರು.

ಹರ್ಡಿಕರ್ ಸೇವೆಯನ್ನ ಗುರುತಿಸಿದ್ದ ಕೇಂದ್ರ ಸರ್ಕಾರ ಇವರನ್ನು 1952 ರಿಂದ 1962ರ ವರೆಗೆ ಎರಡು ಬಾರಿ ಇವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿತ್ತು.ಇವರಿಗೆ ಕೇಂದ್ರ ಸರ್ಕಾರದ ಪದ್ಮಭೂಷಣ ಪ್ರಶಸ್ತಿಯು ಲಭಿಸಿತ್ತು. ಇವರು 26ನೇಆಗಸ್ಟ್ 1975ರಲ್ಲಿ ದೈವಾಧೀನರಾದರು ಇವರ ಸೇವೆಯನ್ನು ಸ್ಮರಿಸಿ ಅಂಚೆ ಇಲಾಖೆಯು 1989 ರಲ್ಲಿ ಇವರ ಸ್ಮರಣಾರ್ಥ ‘ಅಂಚೆ ಚೀಟಿ’ಯನ್ನು ಹೊರ ತಂದಿದೆ ನುಡಿದರು.

ಈ ಸಂದರ್ಭದಲ್ಲಿ ಲಯನ್ಸ್ ಜಿಲ್ಲೆ 317-ಜಿ ರ ಜಿ.ಇ.ಟಿ.ಕೋ -ಆರ್ಡಿ ನೇಟರ್ ಲ.ಹನುಮಂತಯ್ಯ, ಭಾರತ ಸೇವಾ ದಳದ ಸಂಘಟಕ ಸಿ ಎಸ್.ಗಣೇಶ್, ಲ. ಲಿಂಗೇಗೌಡ, ಲ ಸುಭಾಸ್, ಲ. ಶಿವಣ್ಣ, ಲ. ಶಿವಲಿಂಗೇಗೌಡ, ಲ. ಸಿದ್ದರಾಮೇಗೌಡ, ಲ ರವಿಲಾ, ಲ. ಗೋವರ್ಧನ್ ರೆಡ್ಡಿ, ಶಿಕ್ಷಕರಾದ ಅಶೋಕ, ಲಕ್ಷ್ಮಣ್ ಇತರರು ಉಪಸ್ಥಿತರಿದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!