Thursday, November 19, 2026

ಪ್ರಾಯೋಗಿಕ ಆವೃತ್ತಿ

ಡಾ.ಶಂಕರೇಗೌಡ ರಿಗೆ CNN- News 18 ಪ್ರಶಸ್ತಿ

ಐದು ರೂ  ವೈದ್ಯ ಎಂದು ಹೆಸರುವಾಸಿಯಾಗಿದ್ದ ಮಂಡ್ಯದ ಶಂಕರೇಗೌಡ ರವರಿಗೆ ಸಾಮಾಜಿಕ ಬದಲಾವಣೆ ವಿಭಾಗದಲ್ಲಿ CNN-News 18 indian of the year 2022 ಪ್ರಶಸ್ತಿಯನ್ನು ನೀಡಲಾಗಿದೆ.

ದೆಹಲಿಯಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಡಾಕ್ಟರ್ ಶಂಕರೇಗೌಡ ರವರಿಗೆ ಪ್ರಶಸ್ತಿ ಪ್ರಧಾನ ಮಾಡಿದರು.

“>ಸಾಮಾಜಿಕ ಬದಲಾವಣೆಯ ಅನೇಕ ಕೆಲಸ ಕಾರ್ಯಗಳನ್ನು ಮಾಡುತ್ತಿದ್ದ ಇವರು, ಆರೋಗ್ಯ ವಿಭಾಗದಲ್ಲಿ ಕಾರ್ಯಕರ್ತರಂತೆ ತಮ್ಮ ಕೆಲಸವನ್ನು ಸಾರ್ವಜನಿಕರಿಗಾಗಿ ನೀಡುತ್ತಾ ಬಂದಿದ್ದಾರೆ.

ವೈದ್ಯ ವೃತ್ತಿಯಲ್ಲಿ ಚರ್ಮರೋಗ ತಜ್ಞರಾಗಿದ್ದು, ತಮ್ಮ ದಿನನಿತ್ಯದ ರೋಗಿಗಳಿಗೆ ಕೇವಲ ಐದು ರೂಪಾಯಿಗಳನ್ನು ವಿಧಿಸುತ್ತಿದ್ದರು.

ರೋಗಿಗಳಿಗೆ ಕೈಗೆಟಕುವ ಔಷಧಿಗಳನ್ನು ಶಿಫಾರಸು ಮಾಡಲು ಹೆಸರುವಾಸಿಯಾಗಿದ್ದ ಇವರು, ಸುಮಾರು 100ಕ್ಕೂ ಹೆಚ್ಚಿನ ಯಶಸ್ಸಿನ ಪ್ರಮಾಣ ಪತ್ರಗಳನ್ನು ಹೊಂದಿದ್ದಾರೆ.

“ನಾನು 1982 ರಿಂದ ವೈದ್ಯ ವೃತ್ತಿ ಮಾಡುತ್ತಿದ್ದೇನೆ ಮತ್ತು ನಾನು ನನ್ನ ಅಭ್ಯಾಸವನ್ನು ಪ್ರಾರಂಭಿಸಿದ 40 ವರ್ಷಗಳಿಂದ ಐದು ರೂಪಾಯಿಯನ್ನು ವಿಧಿಸುತ್ತಿದ್ದೇನೆ. ನನ್ನಲ್ಲಿ ಏನೇ ಜ್ಞಾನ ಇದ್ದರೂ ಅದನ್ನು ಎಲ್ಲರಿಗೂ ಸಮಾನವಾಗಿ ನೀಡುತ್ತೇನೆ” ಎಂದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ