Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಗಳವಾರ ಮಂಡ್ಯದಲ್ಲಿ ‘ಡಾ.ಸಿದ್ದಲಿಂಗಯ್ಯ ಓದಿನಹಾದಿ’

ಇದೇ ಫೆ. 10 ರ ಮಂಗಳವಾರ ಸಂಜೆ 6 ಗಂಟೆಗೆ ಮಂಡ್ಯ ನಗರದ ಶಿವನಂಜಪ್ಪ ಪಾರ್ಕ್‌ನಲ್ಲಿ ಕನ್ನಡದ ಸಂವೇದನಾಶೀಲ ಕವಿ ಡಾ.ಸಿದ್ದಲಿಂಗಯ್ಯನವರ ಕುರಿತ ಓದಿನಹಾದಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಪರಿಚಯ ಪ್ರಕಾಶನದ ಓದಿನಹಾದಿಯ 8ನೇ ಸಂಚಿಕೆಯ ನಿಮಿತ್ತ ಓದು, ಹರಟೆ, ಹಾಡು ಮತ್ತು ಕನ್ನಡ ಸಾಹಿತ್ಯಲೋಕದದಲ್ಲಿ ಬಂಡಾಯ ಮತ್ತು ದಲಿತ ಸಂವೇದನೆಯ ಕವಿ ಡಾ.ಸಿದ್ದಲಿಂಗಯ್ಯ ಅವರ ನೆನಪುಗಳ ಮೆಲುಕು ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಿದ್ದಲಿಂಗಯ್ಯ ಅವರ ಬದುಕು ಬರಹದ ಕುರಿತು ನಾಡಿನ ಸೂಕ್ಷ್ಮ ವಿಮರ್ಶಕರಾದ ವಿ.ಎಲ್.ನರಸಿಂಹಮೂರ್ತಿ ಅವರು ಉಪನ್ಯಾಸ ನೀಡಲಿದ್ದಾರೆ.

ನನ್ನ ಜನಗಳು, ಅಲ್ಲೇ ಕುಂತವರೆ, ಊರುಕೇರಿ ಮುಂತಾದ ಡಾ.ಸಿದ್ದಲಿಂಗಯ್ಯನವರ ಗಂಭೀರ ಸಾಹಿತ್ಯದ ಕುರಿತು

ಕುವೆಂಪು ಅವರ ಅವಿನಾಭಾವವನ್ನು ತೆರೆದಿಡುವ ‘ಮಲೆನಾಡಿನ ಚಿತ್ರಗಳು’ ಕೃತಿಯ ಕುರಿತು ಹಿರಿಯ ವಕೀಲ ಮತ್ತು ಅಖಿಲ ಭಾರತ ವಕೀಲರ ಒಕ್ಕೂಟದ ಅಧ್ಯಕ್ಷರಾದ ಬಿ.ಟಿ.ವಿಶ್ವನಾಥ್ ಅವರು ಮಾತನಾಡಲಿದ್ದಾರೆ ಎಂದು ಪರಿಚಯ ಪ್ರಕಾಶನದ ಸಂಸ್ಥಾಪಕರಾದ ಶಿವಕುಮಾರ ಆರಾಧ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಸಂಜೆ ಐದು ಗಂಟೆಯಿಂದ ಆರಂಭವಾಗುವ ಸಂಗೀತ ಕಾರ್ಯಕ್ರಮದಲ್ಲಿ ಸಿದ್ದಲಿಂಗಯ್ಯನವರ ಅವರ ಪ್ರಸಿದ್ಧ ಗೀತೆಗಳನ್ನು ಮಂಡ್ಯ ಜಿಲ್ಲೆಯ ಹೆಮ್ಮೆಯ ಹಾಡುಗಾರರಾದ ಗಾಮನಹಳ್ಳಿ ಸ್ವಾಮಿ, ಪ್ರತಿಭಾಂಜಲಿ ಡೇವಿಡ್ ಮತ್ತು ಎಚ್.ಎನ್.ದೇವರಾಜು ಅವರು ಪ್ರಸ್ತುತಪಡಿಸಲಿದ್ದು, ಉಪನ್ಯಾಸಕಿ ಮತ್ತು ಕವಯತ್ರಿ ನಂದಾದೀಪ, ಶಿಕ್ಷಕಿ ರಾಧಿಕಾ ಮತ್ತು ಗಾಯಕಿ ಐಶ್ವರ್ಯ ಅನಿಲ್ ಅವರು ಸಿದ್ದಲಿಂಗಯ್ಯನವರ ಅವರ ಪ್ರೇಮ ಕವಿತೆಗಳನ್ನು ವಾಚಿಸಲಿದ್ದಾರೆ.

ಕೋಮುವಾದ, ಜಾತೀಯತೆ ವ್ಯಾಪಕವಾಗಿ ಹರಡುತ್ತಿರುವ ಈ ಕಾಲಘಟ್ಟದಲ್ಲಿ ಡಾ.ಸಿದ್ದಲಿಂಗಯ್ಯ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಮಾನವ ಬಂಧುತ್ವ ಮತ್ತು ವೈಚಾರಿಕ ಚಿಂತನೆಗಳನ್ನು‌ ಹೊಸತಲೆಮಾರಿಗೆ ಪಸರಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದು ಸಿದ್ದಲಿಂಗಯ್ಯ ಅವರ ಸಾಹಿತ್ಯಾಭಿಮಾನಿಗಳು ಭಾಗವಹಿಸಬಹುದು ಎಂದು ಪರಿಚಯ ಪ್ರಕಾಶನ‌ ತಿಳಿಸಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ