Thursday, June 13, 2024

ಪ್ರಾಯೋಗಿಕ ಆವೃತ್ತಿ

ಶ್ರಮಿಕ ಜನರ ವಿರೋಧಿಗಳಿಗೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ: ಡಾ.ವಾಸು

ಮಂಡ್ಯನಗರದ ಶ್ರಮಿಕ (ಸ್ಲಂ) ನಗರಗಳ ನಿವಾಸಿಗಳಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಾ ದಬ್ಬಾಳಿಕೆ ನಡೆಸುತ್ತ ಬಂದಿದ್ದ ಜನಪ್ರತಿನಿಧಿಗಳನ್ನು 2004ರಿಂದ ಶ್ರಮಿಕರು ಸೋಲಿಸುತ್ತಾ ಬಂದಿದ್ದೇವೆ, 2004ರಲ್ಲಿ ಗೆದ್ದಂತಹ ಶಾಸಕರು, ನಾನು ಸ್ಲಂ ಜನರ ಬೆಂಬಲದಿಂದ ಗೆದ್ದಿದ್ದೇನೆ ಎಂದು ಘೋಷಣೆ ಮಾಡಿಕೊಂಡಿದ್ದರು. ಇದು ಶ್ರಮಿಕರ ಶಕ್ತಿಯಾಗಿತ್ತು, ಈ ಚುನಾವಣೆಯಲ್ಲೂ ಶ್ರಮಿಕರು ಒಗ್ಗೂಡಿ ಕೋಮುವಾದಿಗಳು ಹಾಗೂ ಜಾತಿವಾದಿಗಳಿಗೆ ಪಾಠ ಕಲಿಸಬೇಕಿದೆ ಎಂದು ಪ್ರಗತಿಪರ ಚಿಂತಕ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ.ವಾಸು ಹೆಚ್.ವಿ ಕರೆ ನೀಡಿದರು.

ಮಂಡ್ಯನಗರದ ರೈತ ಸಭಾಂಗಣದಲ್ಲಿ ಮಂಡ್ಯ ಜಿಲ್ಲಾ ಶ್ರಮಿಕನಗರ ನಿವಾಸಿಗಳ ಒಕ್ಕೂಟದ ವತಿಯಿಂದ ನಡೆದ ‘ಶ್ರಮಿಕರ ಸ್ವಾಭಿಮಾನಿ ಗೆಲುವಿನ ಸಮಾವೇಶ’ದಲ್ಲಿ ಭಾಗವಹಿಸಿ ವಿಚಾರ ಮಂಡನೆ ಮಾಡಿದ ಅವರು, ಈ ಹಿಂದೆ ಬಿಜೆಪಿಯ ಯಡಿಯೂರಪ್ಪ ಸಿಎಂ ಆಗಿದ್ದಾಗ ಮಂಡ್ಯದ ಆರ್.ಟಿ.ಓ ಸ್ಲಂ ಅನ್ನು ಸಂಘ ಪರಿವಾರದ ಒಬ್ಬ ಮುಖಂಡನಿಗೆ ಬಿಡಿಸಿಕೊಡುವಂತೆ ಅಂದಿನ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ಒತ್ತಡ ಹೇರಿದ್ದರು. ಇಂತಹವರನ್ನು ನಾವು ಬೆಂಬಲಿಸಬೇಕೆ ? ಎಂದು ಪ್ರಶ್ನೆ ಮಾಡಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ದೇಶದಾದ್ಯಂತವಿರುವ ಸ್ಲಂಗಳನ್ನು ಬಿಲ್ಡರ್ ಗಳಿಗೆ ನೀಡಲು ಯೋಜಿಸಲಾಗಿತ್ತು. ಆದರೆ ಶ್ರಮಿಕ ಜನರು ಹೋರಾಟ ನಡೆಸಿದ್ದರಿಂದ ಅದನ್ನು ಕೈ ಬಿಡಲಾಯಿತು. ಅಲ್ಲದೇ ಶ್ರಮಿಕರಿಗೆ ಯಾವ ರೀತಿಯ ಮನೆ ಕಟ್ಟಿಸಬೇಕೆಂದು ಅಲ್ಲಿನ ಜನರಿಂದಲೇ ಅಭಿಪ್ರಾಯ ಪಡೆದು, ಮನೆ ನಿರ್ಮಾಣ ಮಾಡಬೇಕೆಂದು ಇದ್ದ ಗೈಡ್ ಲೈನ್ ಅನ್ನು ಬಿಜೆಪಿ ಸರ್ಕಾರ ಕೈ ಬಿಟ್ಟು, ಬಂಡವಾಳಶಾಹಿಗಳಿಗೆ ಅನುಕೂಲವಾಗುವಂತೆ ನಿರ್ಧಾರ ತಳೆಯಿತು, ಇಂತಹವರನ್ನು ನಾವು ಸೋಲಿಸಬೇಕೆಂದರು.

ಕೋಮುವಾದಿಗಳ ಜೊತೆ ಜಾತಿವಾದಿಗಳು ಸೇರಿದ್ದಾರೆ

ಈ ಚುನಾವಣೆಯಲ್ಲಿ ಧರ್ಮದ ಹೆಸರಿನಲ್ಲಿ ದೇಶದಾದ್ಯಂತ ಗಲಭೆಯೆಬ್ಬಿಸಿ ದೇಶದ ಸ್ವಾಸ್ಥ್ಯವನ್ನು ಕೆಡಿಸುತ್ತಿರುವ ಬಿಜೆಪಿ ಜೊತೆ ಅವಕಾಶವಾದಿ ಜೆಡಿಎಸ್ ಸೇರಿದೆ, ಈ ಚುನಾವಣೆಯಲ್ಲಿ ಇವರ ವಿರುದ್ದವಾಗಿ ಮತಚಲಾಯಿಸಬೇಕಿದೆ. ಇವರು ಯಾವತ್ತು ಶ್ರಮಿಕ ಜನರ ಪರವಾದ ನಿಲುವು ತಳೆದಿಲ್ಲ ಎಂದರು.

ಚಿತ್ರನಟ ಪ್ರಕಾಶ್ ರೈ, ವಸತಿ ಹಕ್ಕುಗಳ ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯರ್ಶಿ ಕುಮಾರ್ ಸಮತಳ ವಿಚಾರ ಮಂಡನೆ ಮಾಡಿದರು. ಸಿರಿಮನೆ ನಾಗರಾಜು, ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್ ಅಧ್ಯಕತೆ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆ ಜಿಲ್ಲಾಧ್ಯಕ್ಷ ಕೃಷ್ಣ ಪ್ರಕಾಶ್, ಸಿಐಟಿಯು ಮುಖಂಡರಾದ ಸಿ.ಕುಮಾರಿ, ಪತ್ರಕರ್ತ ಎನ್.ನಾಗೇಶ್, ರೈತಸಂಘದ ಲತಾ ಶಂಕರ್, ಕರ್ನಾಟಕ ಜನಶಕ್ತಿಯ ಸಿದ್ದರಾಜು, ಪೂರ್ಣಿಮ, ಜಗದೀಶ್ ನಗರಕರೆ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!