Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಕರಡು ಮತದಾರರ ಪಟ್ಟಿ ಪ್ರಕಟ, ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಿ : ಡಾ.ಹೆಚ್.ಎಲ್ ನಾಗರಾಜು

ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ದಿನಾಂಕ 01-01-2025 ನ್ನು ಅರ್ಹತಾ ದಿನಾಂಕವನ್ನಾಗಿಟ್ಟುಕೊಂಡು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ಮಂಡ್ಯ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ದಿನಾಂಕ 29-10-2024ರಂದು ಕರಡು ಮತದಾರರ ಪಟ್ಟಿಯನ್ನು ಹಾಗೂ ಸೇವಾ ಮತದಾರರ ಕರಡು ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ ಹೆಚ್ ಎಲ್ ನಾಗರಾಜು ತಿಳಿಸಿದರು.

ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರುಗಳ ಜೊತೆ ಸಭೆ ನಡೆಸಿ  ಅವರು ಮಾತನಾಡಿದರು.

ಕರಡು ಮತದಾರರ ಪಟ್ಟಿಯಂತೆ ಮತದಾರರ ವಿವರ

ಮಳವಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 272 ಮತಗಟ್ಟೆಗಳಿದ್ದು, ಪುರುಷರು-126686, ಮಹಿಳೆಯರು-128487, ತೃತೀಯ ಲಿಂಗಿ-10, ಒಟ್ಟು 255183 ಮತದಾರರಿದ್ದಾರೆ.

ಮದ್ದೂರು ಒಟ್ಟು 254 ಮತಗಟ್ಟೆಗಳಿದ್ದು, ಪುರುಷರು-104071, ಮಹಿಳೆಯರು-111727, ತೃತೀಯ ಲಿಂಗಿ-20, ಒಟ್ಟು 215818 ಮತದಾರರಿದ್ದಾರೆ.

ಮೇಲುಕೋಟೆ ಒಟ್ಟು 264 ಮತಗಟ್ಟೆಗಳಿದ್ದು, ಪುರುಷರು-100535, ಮಹಿಳೆಯರು-103449, ತೃತೀಯ ಲಿಂಗಿ-10, ಒಟ್ಟು 203994 ಮತದಾರರಿದ್ದಾರೆ.

ಮಂಡ್ಯ ಒಟ್ಟು 263 ಮತಗಟ್ಟೆಗಳಿದ್ದು, ಪುರುಷರು-112324, ಮಹಿಳೆಯರು-118580, ತೃತೀಯ ಲಿಂಗಿ-43, ಒಟ್ಟು 230947 ಮತದಾರರಿದ್ದಾರೆ.

ಶ್ರೀರಂಗಪಟ್ಟಣ ಒಟ್ಟು 249 ಮತಗಟ್ಟೆಗಳಿದ್ದು, ಪುರುಷರು-106018, ಮಹಿಳೆಯರು-111581, ತೃತೀಯ ಲಿಂಗಿ-44, ಒಟ್ಟು 217643 ಮತದಾರರಿದ್ದಾರೆ.

ನಾಗಮಂಗಲ ಒಟ್ಟು 260 ಮತಗಟ್ಟೆಗಳಿದ್ದು, ಪುರುಷರು-107188, ಮಹಿಳೆಯರು-108564, ತೃತೀಯ ಲಿಂಗಿ-10, ಒಟ್ಟು 215762 ಮತದಾರರಿದ್ದಾರೆ.

ಕೆ.ಆರ್ ಪೇಟೆ ಒಟ್ಟು 261 ಮತಗಟ್ಟೆಗಳಿದ್ದು, ಪುರುಷರು-111432, ಮಹಿಳೆಯರು-112542, ತೃತೀಯ ಲಿಂಗಿ-10, ಒಟ್ಟು 223984 ಮತದಾರರಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 1823 ಮತಗಟ್ಟೆಗಳಿದ್ದು, ಪುರುಷರು-768254, ಮಹಿಳೆಯರು-794930, ತೃತೀಯ ಲಿಂಗಿ-147, ಒಟ್ಟು 1563331 ಮತದಾರರಿದ್ದಾರೆ.

ಸೇವಾ ಮತದಾರರ ವಿವರ

ಮಳವಳ್ಳಿ ಕ್ಷೇತ್ರದಲ್ಲಿ ಪುರುಷ-76, ಮಹಿಳೆ-5 ಒಟ್ಟು 81, ಮದ್ದೂರು ಕ್ಷೇತ್ರದಲ್ಲಿ ಪುರುಷ-140, ಮಹಿಳೆ-2 ಒಟ್ಟು 142, ಮೇಲುಕೋಟೆ ಪುರುಷ-62, ಮಹಿಳೆ-0 ಒಟ್ಟು 62, ಮಂಡ್ಯ ಪುರುಷ-116, ಮಹಿಳೆ-5, ಒಟ್ಟು 121, ಶ್ರೀರಂಗಪಟ್ಟಣ ಪುರುಷ-53, ಮಹಿಳೆ-2, ಒಟ್ಟು 55, ನಾಗಮಂಗಲ ಪುರುಷ-61, ಮಹಿಳೆ-5 ಒಟ್ಟು – 66, ಕೆ ಆರ್ ಪೇಟೆ ಪುರುಷ-92, ಮಹಿಳೆ-3 ಒಟ್ಟು- 95, ಜಿಲ್ಲೆಯಲ್ಲಿ ಒಟ್ಟು ಪುರುಷ-600, ಮಹಿಳೆ-22 ಒಟ್ಟು 622 ಸೇವಾ ಮತದಾರರಿದ್ದಾರೆ.

ಮತದಾರರ ಪಟ್ಟಿ ಪರಿಷ್ಕರಣ ಅವಧಿಯಲ್ಲಿ ಮಂಡ್ಯ ಜಿಲ್ಲೆಯ ಎಲ್ಲಾ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ 01-01-2025 ಕ್ಕೆ ಅರ್ಹರಿರುವ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಕ್ರಮವಹಿಸಲಾಗಿದೆ ಹಾಗೂ ಸ್ವೀಕೃತವಾದ ನಮೂನೆಗಳನ್ನು ನಿಯಮಾನುಸಾರ ನಿಗಧಿತ ಅವಧಿಯಲ್ಲಿ ವಿಲೆವಾರಿಗೊಳಿಸಲಾಗಿರುತ್ತದೆ ಎಂದರು.

ಕರಡು ಮತದಾರರ ಪಟ್ಟಿಯು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ, ಮತದಾರರ ನೋಂದಣಾಧಿಕಾರಿಗಳ ಕಛೇರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಛೇರಿಯಲ್ಲಿ ಮತ್ತು ಜಿಲ್ಲೆಯ ಎಲ್ಲಾ ಮತಗಟ್ಟೆಗಳಲ್ಲಿ ಪ್ರಕಟ ಪಡಿಸಲಾಗಿದೆ. ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳಿದ್ದಲ್ಲಿ ನವೆಂಬರ್ 28 ರವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮತ್ತು 06-01-2025 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟ ಪಡಿಸಲಾಗುತ್ತದೆ ಎಂದರು.

ಸಭೆಯಲ್ಲಿ ವಿವಿಧ ಪಕ್ಷಗಳ ಮುಖಂಡರಾದ ಮಂಜುನಾಥ್, ರಮೇಶ್, ಬೊಮ್ಮಯ್ಯ, ಚುನಾವಣಾ ತಹಶೀಲ್ದಾರ್ ರೇಣು ಕುಮಾರ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ