Tuesday, May 14, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ| ಕಿರುಗಾವಲು ಹೋಬಳಿಯ ಕುಡಿಯುವ ನೀರಿನ ಸಮಸ್ಯೆ ಶೀಘ್ರ ನಿವಾರಣೆ

ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಬಹು ಕುಡಿಯುವ ನೀರು ಕಾಮಗಾರಿಯು ಶೀಘ್ರವಾಗಿ ಚಾಲನೆಗೊಳ್ಳಲಿದ್ದು ಕಿರುಗಾವಲು ಹೋಬಳಿಯ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗುತ್ತದೆ ಎಂದು ಶಾಸಕ ಪಿಎಂ ನರೇಂದ್ರಸ್ವಾಮಿ ತಿಳಿಸಿದರು.

ಕಾಡಾ ವತಿಯಿಂದ ಮಳವಳ್ಳಿ ಬೆಂಡರವಾಡಿ ಹಾಗೂ ಕಲ್ಕುಣಿ ಗ್ರಾಮಗಳಲ್ಲಿ ತಲಾ 10 ಲಕ್ಷ ರೂ ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೇರಿಸಿ ಮಾತನಾಡಿದ ಅವರು, ಕಿರುಗಾವಲು ಕುಡಿಯುವ ನೀರು ಸುಮಾರು ಐದು ವರ್ಷಗಳಿಂದ ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿದ್ದನ್ನು ಗಮನಿಸಿ ನಾನು ಶಾಸಕನಾದ ಕೂಡಲೇ ಕಾಮಗಾರಿಯನ್ನು ಚುರುಕು ಮಾಡಿಸಿ ಕೆಲವೇ ತಿಂಗಳಗಳಲ್ಲಿ ಈ ಹೋಬಳಿಯ ಗ್ರಾಮಗಳ ಕುಡಿಯುವ ನೀರು ಯೋಜನೆ ಆರಂಭವಾಗಲಿದೆ ಎಂದು ತಿಳಿಸಿದರು.

ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮದಿಂದ ಗದ್ದೆ ಬಯಲಿಗೆ ಹೋಗುವ ರಸ್ತೆಗಳು ಕಿರಿದಾಗುವುದರ ಜೊತೆಗೆ ರಸ್ತೆಗಳು ಹಳ್ಳ ಕುಳಿಗಳಿಂದ ರೈತರು ಗದ್ದೆಗಳಿಗೆ ಹೋಗಲು ಪರಿತಪ್ಪಿಸುತ್ತಿದ್ದರು, ಈ ಎಲ್ಲಾ ಸಮಸ್ಯೆಗಳನ್ನು ತೊಡೆದುಹಾಕಲು ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ದಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜೆ ದೇವರಾಜು, ಗ್ರಾ.ಪಂ ಅಧ್ಯಕ್ಷೆ ಭಾರತೀ ಸುರೇಶ್ , ಉಪಾಧ್ಯಕ್ಷೆ ಮಾದ ನಾಯಕ್, ಸದಸ್ಯರಾದ ಕುಮಾರಿ, ಗಂಗಾ, ಮುಖಂಡರಾದ ಚಂದ್ರು, ಕೃಷ್ಣ, ಮೂತಿ೯, ನಂಜುಂಡಸ್ವಾಮಿ, ಮಹೇಶ್, ಪುಟ್ಟಮಲ್ಲು, ಯಜಮಾನ್ ಮಹೇಶ್, ಚಂದ್ರಕುಮಾರ್, ನಂಜುಂಡಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!