ಮನುಷ್ಯನ ಪ್ರಜ್ಞೆಯನ್ನು ಜಾಗೃತಗೊಳಿಸುವ ನಾಟಕವನ್ನು ಹಿರಿಯರು ತಮ್ಮ ಸಾಂಸ್ಕೃತಿಕ ಬದುಕಿನ ಭಾಗವಾಗಿಸಿಕೊಂಡು ಬಂದಿದ್ದಾರೆ, ನಾಟಕಗಳು ಸಮಾಜದ ಪ್ರತಿಬಿಂಬವಿದ್ದಂತೆ ಎಂದು ಮಂಡ್ಯ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ತಿಳಿಸಿದರು.
ಮಂಡ್ಯ ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಶಾಲಾ ಶಿಕ್ಷಣ ಇಲಾಖೆ, ಅರುವಿ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಲೇಖಕಿಯರ ಸಂಘ ಮಂಡ್ಯ ಜಿಲ್ಲಾ ಘಟಕ ವತಿಯಿಂದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪ್ರಥಮ ಪಿಯುಸಿಯ ಪಠ್ಯ: ‘ ಬೆಪ್ಪು ತಕ್ಕಡಿ ಬೋಳೇ ಶಂಕರ, ಹಾಗೂ ದ್ವಿತೀಯ ಪಿಯುಸಿಯ ಪಠ್ಯ: ‘ಕೃಷ್ಣೇಗೌಡರ ಆನೆ’ ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾವಿರಾರು ವರ್ಷಗಳಿಂದ ನಾಟಕ ಕಲೆ ಮುಂದುವರೆಯುತ್ತಾ ಬಂದಿದೆ.ಮೂಡಲಪಾಯ ಯಕ್ಷಗಾನ ಮೊದಲು ಪ್ರಾರಂಭವಾದ್ದು ಮಂಡ್ಯದಲ್ಲಿ ಅದೇ ರೀತಿ ಯಕ್ಷಗಾನದ ಬಗ್ಗೆ ಪುಸ್ತಕ ಬರೆದದ್ದು ಮಂಡ್ಯದಲ್ಲಿ ಎಂದು ತಿಳಿಸಿದರು.
ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಕನ್ನಡ ಪಠ್ಯಪುಸ್ತಕದಲ್ಲಿರುವ ಬೆಪ್ಪು ತಕ್ಕಡಿ ಬೋಳೇ ಶಂಕರ ಪಠ್ಯವನ್ನು ನಾಟಕ ರೂಪದಲ್ಲಿ ಕಲಾವಿದರು ಅಭಿನಯಿಸುತ್ತಿದ್ದಾರೆ ಇದರ ಮಹತ್ವವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ಈ ರೀತಿಯ ನಾಟಕ ಪ್ರದರ್ಶನಕ್ಕೆ ಯಶಸ್ವಿ ಸಿಗಲಿ ಎಂದು ಶುಭ ಹಾರೈಸಿದರು.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಕನ್ನಡ ವಿಷಯದ ಪಠ್ಯದಲ್ಲಿರುವ, ಪೂರ್ಣ ಚಂದ್ರ ತೇಜಸ್ವಿ ರಚಿತ ‘ ಕೃಷ್ಣೇಗೌಡರ ಆನೆ’ ನಾಟಕ ಮಂಗಳವಾರ ನಗರದ ಕಲಾ ಮಂದಿರದಲ್ಲಿ ನಗರದ ವಿವಿಧ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಪ್ರದರ್ಶನ ಗೊಳ್ಳಲಿದೆ ಇದರ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅರುವಿ ಟ್ರಸ್ಟ್ ಅಧ್ಯಕ್ಷೆ ಅರುಣಾ ಈಶ್ವರ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಲಿಂಗು, ಮಾಂಡವ್ಯ ಕಾಲೇಜು ಉಪನ್ಯಾಸಕ ಮಹೇಶ್, ನಾಟಕದ ನಿರ್ದೇಶಕ ಭೀಮಣ್ಣ ಅತ್ತಿಕುನಿ, ದೇವರಾಜು ಕೊಪ್ಪ, ವೈರಮುಡಿ,ಸಂತೆಕಸಲಗೆರೆ ಬಸವರಾಜು, ಶೇಖರ್ ಇದ್ದರು.




