Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಾದಕ ವಸ್ತು – ಮದ್ಯಪಾನ ಸಾಮಾಜಿಕ ಪಿಡುಗು : ಕೆ.ಟಿ.ಹನುಮಂತು

ಪ್ರಪಂಚದಲ್ಲಿ ಮಾದಕ ವಸ್ತು ಮತ್ತು ಮದ್ಯಪಾನ ಸಾಮಾಜಿಕ ಪಿಡುಗಾಗಿ ದುಷ್ಪರಿಣಾಮ ಉಂಟುಮಾಡುತ್ತಿದೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.

ಮಂಡ್ಯ ನಗರದ ಪೊಲೀಸ್ ಕಾಲೋನಿಯ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆ, ಕೃಷಿಕ ಲಯನ್ಸ್ ಸಂಸ್ಥೆ, ಸರ್ಕಾರಿ ಪದವಿಪೂರ್ವ ಕಾಲೇಜು, ಪೊಲೀಸ್ ಕಾಲೋನಿ ಇವರ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಮಾದಕವಸ್ತು ಮತ್ತು ಕಳ್ಳಸಾಗಾಣೆ ವಿರೋಧಿ ದಿನ-2023ರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ವರದಿಗಳ ಪ್ರಕಾರ ಮಾದಕವಸ್ತು ಮತ್ತು ಮದ್ಯಪಾನ ವ್ಯಸನಕ್ಕೆ ಯುವ ಸಮುದಾಯ ಬಲಿಯಾಗುತ್ತಿದೆ, ಯುವತಿಯರು, ಮಹಿಳೆಯರು ವ್ಯಸನಕ್ಕೆ ಒಳಗಾಗಿ ದುಷ್ಪರಿಣಾಮ ಎದುರಿಸುತ್ತಿದ್ದಾರೆ, ದುಶ್ಚಟಗಳಿಂದ, ವ್ಯಸನಗಳಿಂದ ದೂರ ಇರಲು ಜಾಗೃತಿ ಮೂಡಿಸುದಕ್ಕಾಗಿಯೇ ವಿಶ್ವ ಮಾದಕವಸ್ತು ಮತ್ತು ಕಳ್ಳಸಾಗಾಣೆ ವಿರೋಧಿ ದಿನವನ್ನು ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳು ಆಚರಿಸುತ್ತಿದೆ, ಸರ್ಕಾರ, ಸಂಘ ಸಂಸ್ಥೆಗಳು ಅರಿವು ಮೂಡಿಸುತ್ತಿವೆ ಎಂದು ನುಡಿದರು.

ಭಾರತ ದೇಶದಲ್ಲಿ 10 ರಿಂದ 17 ವರ್ಷದೊಳಗಿನ 1.58 ಕೋಟಿ ಮಕ್ಕಳು ಮಾದಕವಸ್ತುಗಳ ಬಳಕೆಯ ವ್ಯಸನಿಗಳಾಗಿದ್ದಾರೆ, ಇದು ಆತಂಕ ಸೃಷ್ಟಿಯ ಮಾಹಿತಿಯಾಗಿದೆ, ನಮ್ಮ ದೇಶದಲ್ಲಿ ಸುಮಾರು 16 ಕೋಟಿ ಜನ ಮದ್ಯವ್ಯಸನಿಗಳಿದ್ದಾರೆ, ದೇಶದಲ್ಲಿ 3 ಬಗೆಯ ಮಾದಕವಸ್ತುಗಳು ಲಭ್ಯವಾಗುತ್ತಿದೆ, ಕ್ಯನಬಿಸ್, ಅಫೀಮು, ಫಾರ್ಮಾಸ್ಟಿಕ್ ಡ್ರಗ್ಸ್ಗಳನ್ನು ಹೆಚ್ಚು ಬಳಸಲಾಗುತ್ತಿದೆ ಎಂದು ವಿವರಿಸಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಎನ್.ಜಿ. ವೇಣುಗೋಪಾಲ್ ಮಾತನಾಡಿ, ಮನುಷ್ಯನಿಗೆ ಆರೋಗ್ಯವೇ ದೊಡ್ಡ ಆಸ್ತಿ, ವ್ಯಸನ ಮುಕ್ತ ಜೀವನ ಚಂದ, ವ್ಯಸನ ಆವರಿಸಿಕೊಳ್ಳುವುದು ಕತೂಹಲದಿಂದ ಒಮ್ಮೆ ನೋಡೋಣ ಎನ್ನುವ ಭಾವನೆಯಿಂದ ಅದು ಜೀವನದಲ್ಲಿ ಹಾಸುಹೊಕ್ಕಾಗುತ್ತದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ, ಉಪನ್ಯಾಸಕ ಬಿ.ಲಿಂಗೇಗೌಡ, ಸಬನಾ, ರೆಡ್‌ಕ್ರಾಸ್ ಸಂಸ್ಥೆಯ ನಿರ್ದೇಶಕರಾದ ಕೆ.ಎಸ್.ಷಡಕ್ಷರಿ, ಕೆ.ಎಸ್.ಜವರೇಗೌಡ, ಸಿಬ್ಬಂದಿ ಜಗದೀಶ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ