Friday, November 20, 2026

ಪ್ರಾಯೋಗಿಕ ಆವೃತ್ತಿ

ಮಹಿಳೆಯರನ್ನು ವಂಚಿಸಿ ಚಿನ್ನಾಭರಣ ದೋಚುತ್ತಿದ್ದ ಖದೀಮನ ಬಂಧನ

ವರದಿ : ಪ್ರಭು ವಿ ಎಸ್

ಮದ್ದೂರು ತಾಲೂಕಿನಲ್ಲಿ ಇತ್ತೀಚೆಗೆ ನಡೆಯುತ್ತಿದ್ದ ಸರ ಕಳ್ಳತನದ ಖದೀಮನನ್ನು ಮದ್ದೂರು ಪಟ್ಟಣ ಪೊಲೀಸರು ಬಂಧಿಸಿ ಸಾರ್ವಜನಿಕರು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ತಮ್ಮಡಹಳ್ಳಿ ಗ್ರಾಮದ ಸಣ್ಣಸ್ವಾಮಿ (35) ಬಂಧಿತ ಆರೋಪಿ.

ಘಟನೆ ವಿವರ

ಕಳೆದ ಜೂನ್ 20ರಂದು ಚಾಮನಹಳ್ಳಿ ಗ್ರಾಮದ ಗೌರಮ್ಮ (59) ಎಂಬ ವೃದ್ದ ಮಹಿಳೆ, ಮದ್ದೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಇದ್ದಾಗ ಅಪರಿಚಿತನೋರ್ವ ಎದುರು ಬಂದು ನಿಮಗೆ ವೃದ್ದಪ್ಯಾ ವೇತನ ಕೊಡಿಸುವುದಾಗಿ, ಅದ್ದಕ್ಕೆ ಅರ್ಜೆಂಟ್ ನಿಮ್ಮ ಭಾವಚಿತ್ರ ಬೇಕಾಗಿರುವುದರಿಂದ ಪೋಟೋ ತೆಗೆಸಬೇಕು ಎಂದು ಕರೆದುಕೊಂಡು ಹೋಗಿದ್ದ. ಪೋಟೋ ತೆಗೆಯುವಾಗ ಚಿನ್ನದ ಮಾಂಗಲ್ಯ ಸರ ಇದ್ದರೆ ವೇತನ ಬರುವುದ್ದಿಲ್ಲವೆಂದು ನಂಬಿಸಿ, ಮಾಂಗಲ್ಯ ಸರ ತೆಗೆದು ಕೊಂಡು ಓಡಿ ಹೋಗಿದ್ದನು. ಈ ಘಟನೆ ಸಂಬಂಧ ವೃದ್ದೆ ಮದ್ದೂರು ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಖದೀಮನಿಗೆ ಬಲೆ ಬೀಸಲು ಜಿಲ್ಲಾ ಪೋಲಿಸ್ ವರೀಷ್ಟಾಧಿಕಾರಿ ಎನ್.ಯತೀಶ್ ಮತ್ತು ಅಪರ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ವೇಣುಗೋಪಾಲ್ ಅವರು ವೃತ್ತ ನೀರಿಕ್ಷಕ ಎಸ್.ಸಂತೋಷ್ ಅವರ ನೇತೃತ್ವದ ತಂಡ ರಚಿಸಿದ್ದರು. ಎಸ್.ಸಂತೋಷ್ ನೇತೃತ್ವದ ತಂಡವು ಕಾರ್ಯಚರಣೆ ನಡೆಸಿ ಹುಣಸೂರು ತಾಲ್ಲೂಕಿನ ತಮ್ಮಡಹಳ್ಳಿ ಗ್ರಾಮದ ಸಣ್ಣಸ್ವಾಮಿ (35) ಎಂಬ ಆರೋಪಿಯನ್ನು ಮಾಲು ಸಮೇತ ಸೆರೆ ಹಿಡಿದಿದ್ದಾರೆ. ಬಂಧಿತ ಆರೋಪಿ ಮೂರು ಪ್ರಕರಣಗಳಲ್ಲಿ ಭಾಗಿಯಾಗಿದ್ದನೆಂದು ತಿಳಿದು ಬಂದಿದೆ

ಮದ್ದೂರು ಪಟ್ಟಣದಲ್ಲಿ ಎರಡು ಪ್ರಕರಣ ಸೇರಿದಂತೆ ಗುಂಡ್ಲುಪೇಟೆ ಠಾಣೆಯಲ್ಲಿ ಒಂದು ಪ್ರಕರಣದಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದ. ಈತನಿಂದ ಒಟ್ಟು 71 ಗ್ರಾಂ.ಚಿನ್ನವನ್ನು ವಶಪಡಿಸಿಕೊಂಡಿದ್ದು, ಇದರ ಒಟ್ಟು ಮೌಲ್ಯ 3 ಲಕ್ಷದ 50 ಸಾವಿರ ಎಂದು ಅಂದಾಜಿಸಲಾಗಿದೆ. ಪೋಲಿಸರ ಕಾರ್ಯಚರಣೆಯನ್ನು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹಾಗೂ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರು ಶ್ಲಾಘಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ