Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಡಿಎಸ್ಎಸ್ ಮುಖಂಡ ಎಂ.ಬಿ.ಶ್ರೀನಿವಾಸ್ ಸಂಘಟಕ ಹೋರಾಟಗಾರ: ಸಿ.ಎಸ್.ಪುಟ್ಟರಾಜು

ಸಮಾಜದಲ್ಲಿ ಎಲ್ಲಿಯಾದರೂ ಅನ್ಯಾಯ ನಡೆಯುತ್ತಿದ್ದರೆ ಅಲ್ಲಿ ಎಂ.ಬಿ.ಶ್ರೀನಿವಾಸ್ ಇರುತ್ತಿದ್ದರು. ಅವರೊಬ್ಬ ಸಂಘಟಕ ಹೋರಾಟಗಾರ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಬಣ್ಣಿಸಿದರು.

ನಗರದ ಕರ್ನಾಟಕ ಸಂಘದ ಆವರಣದಲ್ಲಿರುವ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ಡಾ.ಎಂಬಿ.ಶ್ರೀನಿವಾಸ್ ನೆನಪು, ಕನ್ನಡ ರಾಜ್ಯೋತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಟದ ಮನೋಭಾವ ರೂಢಿಸಿಕೊಂಡವರು ಶೀನಣ್ಣ. ಅವರ ಹೋರಾಟದ ನೆನಪಿನಲ್ಲಿ ಅವರ ನೆನಪಿಸಿಕೊಳ್ಳುವ ಕೆಲಸ ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಪ್ರಶಂಸಿಸಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ೨೦೦೭ ರಲ್ಲಿ ೩೦ ದಿನಗಳ ಕಾಲ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿದ ಸಂದರ್ಭ ನನಗೆ ನೀಡಿದ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ ಎಂದರು.

ಎಂ.ಬಿ.ಶ್ರೀನಿವಾಸ್ ಅವರ ಸಮಾಜಮುಖಿ ಕಾರ್ಯಗಳು ಇಂದಿನ ಯುವ ಜನಾಂಗಕ್ಕೆ ಮಾದರಿ. ಶ್ರೀನಿವಾಸ್‌ಗೆ ಶ್ರೀನಿವಾಸ್ ಸಾಟಿ ಎಂಬುದಕ್ಕೆ ಅವರ ಹೋರಾಟಗಳೇ ಸಾಕ್ಷಿ ಎಂದು ತಿಳಿಸಿದರು.

ಅವರ ಹೋರಾಟದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಚಿರಿಸಿ ವಿವಿಧ ಕ್ಷೇತ್ರದ ಸಾಧಕರನ್ನು ಗುರುತಿಸಿ ಅಭಿನಂದಿಸುತ್ತಿರುವುದು ಉತ್ತಮ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಸಕ ಪಿ. ರವಿಕುಮಾರ್ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೆಲ, ಜಲದ ವಿಷಯ ಬಂದಾಗ ಎಂ.ಬಿ.ಶ್ರೀನಿವಾಸ್ ಮುಂದಾಳತ್ವ ವಹಿಸುತ್ತಿದ್ದರು. ಶ್ರೀನಿವಾಸ್ ಅವರ ದಲಿತ ಚಳುವಳಿಯ ಹೋರಾಟ ಇಂದಿನ ಯುವ ಸಮುದಾಯಕ್ಕೆ ಪ್ರೇರಣೆಯಾಗಲಿ ಎಂದರು.

ಎಂ.ಬಿ.ಶ್ರೀನಿವಾಸ್ ಅವರ ಹೆಸರಿನಲ್ಲಿ ಅವರ ಪುತ್ರ ರಾಹುಲ್ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಹೀಗೆ ಹಲವು ಸಾಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದಾರೆ. ಶ್ರೀನಿವಾಸ್ ಅವರು ಹೋರಾಟದ ಮೂಲಕ ಸಮಾಜಕ್ಕೆ ತಮ್ಮ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಇದು ದಲಿತ ಯುವ ಸಮುದಾಯಕ್ಕೆ ಪ್ರೇರಣೆಯಾಗಲಿ ಎಂದು ಆಶೀಸಿದರು.

ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸಾಧಕರಿಗೆ ಸನ್ಮಾನ ಮಾಡಿ ಮಾತನಾಡಿ, ಎಂ.ಬಿ.ಶ್ರೀನಿವಾಸ್ ಅವರು. ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿದ್ದರು. ಎಂ.ಬಿ.ಶ್ರೀನಿವಾಸ್‌ಗೆ ಕರೆ ಮಾಡಿದರೆ, ಎಸ್ಪಿ ಆಫೀಸ್ ಅಥವಾ ಜಿಲ್ಲಾಧಿಕಾರಿ ಕಚೇರಿ ಅಥವಾ ತಹಶೀಲ್ದಾರ್ ಕಚೇರಿಯಲ್ಲಿ ಇರುತ್ತಿದ್ದರು. ಸಮುದಾಯಕ್ಕೆ ಅನ್ಯಾಯವಾದರೆ ಅವರು ಸಹಿಸಿಕೊಳ್ಳುತ್ತಿರಲಿಲ್ಲ. ಬೀದಿಗಿಳಿದು ಹೋರಾಟ ನಡೆಸುವ ಮನೋಭಾವ ಬೆಳೆಸಿಕೊಂಡವರು. ಇವರ ಹೋರಾಟದ ಮನೋಭಾವ ಗುರುತಿಸಿ ಪರಿಶಿಷ್ಟ ಜಾತಿಯ ಜೆಡಿಎಸ್ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿತ್ತು ಎಂದರು.

ಈ ಸಮಾಜದ ಅಂಕು ಡೊಂಕನ್ನು ತಿದ್ದುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದರು. ಮಂಡ್ಯ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಬಗ್ಗೆ ಚೆನ್ನಾಗಿ ಅರಿತಿದ್ದವರು. ಸಂಘಟನೆ ಹೇಗೆ ಮಾಡಬೇಕು ಹಾಗೂ ಹೋರಾಟ ಹೇಗೆ ಮಾಡಬೇಕು ಎಂದು ಸಲಹೆ ನೀಡುತ್ತಿದ್ದರು ಎಂದರು.

ಎಂ.ಬಿ.ಶ್ರೀನಿವಾಸ್ ಇನ್ನು ಹಲವು ವರ್ಷ ಇರಬೇಕಾಗಿತ್ತು. ಅವರ ಅಕಾಲಿಕ ಮರಣಕ್ಕೆ ತುತ್ತಾದರು. ಮಂಡ್ಯ ಜಿಲ್ಲೆಯ ಒಬ್ಬ ಸಂಘಟಕ ಚತರ ಹಾಗೂ ಒಂದು ಶಕ್ತಿಯನ್ನು ಕಳೆದುಕೊಂಡೊ ಅನ್ನಿಸುತ್ತಿದೆ ಎಂದರು.
ಸಮಾಜದಲ್ಲಿ ತಂದೆಯ ಹೆಸರನ್ನು ಉಳಿಸುವ ಜೊತೆಗೆ ಸಮಾಜದಲ್ಲಿ ಅವರ ದಾರಿಯಲ್ಲಿಯೇ ಅವರ ಪುತ್ರ ರಾಹುಲ್ ಎಂ.ಬಿ. ಶ್ರೀನಿವಾಸ್ ಬೆಳೆಯುತ್ತಿದ್ದಾರೆ. ಅವರಿಗೆ ನಾವೆಲ್ಲರೂ ನೀರೆರೆದು ಪ್ರೋತ್ಸಾಹಿಸುವ ಕೆಲಸ ಮಾಡೋಣ ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಸಾಧಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತ್ತು.

ವೇದಿಕೆಯಲ್ಲಿ ಮುಡಾ ಅಧ್ಯಕ್ಷ ನಯಿಂ, ಮನ್‌ಮುಲ್ ನಿರ್ದೇಶಕ ಶಿವಪ್ಪ, ಕಸಾಪ ಮಾಜಿ ಜಿಲ್ಲಾಧ್ಯಕ್ಷೆ ಮೀರಾ ಶಿವಲಿಂಗಯ್ಯ, ಎಂ.ಬಿ.ಶ್ರೀನಿವಾಸ್ ಪತ್ನಿ, ಶೋಭಾ ಶ್ರೀನಿವಾಸ್ ಹಾಗೂ ಪುತ್ರ ರಾಹುಲ್ ಹಾಜರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ