ಕರ್ನಾಟಕ ಪೌರಾಡಳಿತ ನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳ ಆದೇಶದಂತೆ ಇಂದು ಮಂಡ್ಯ ನಗರಸಭೆ ವತಿಯಿಂದ ಇ-ಖಾತಾ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು, ಮಂಡ್ಯ ನಗರ ವ್ಯಾಪ್ತಿಯ ಆಸ್ತಿದಾರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್ (ನಾಗೇಶ್) ಕರೆ ನೀಡಿದರು.
ಮಂಡ್ಯ ನಗರದ ಒಂದನೇ ವಾರ್ಡ್ ನಲ್ಲಿ ಚಾಲನೆ ನೀಡಿದ ಆಂದೋಲನ, ಡಿ.2ರಿಂದ 15 ರವರೆಗೆ ಮಂಡ್ಯ ನಗರಸಭೆಯ 35 ವಾರ್ಡ್ ಗಳಲ್ಲಿ ಇ – ಆಸ್ತಿ ಖಾತಾ ಆಂದೋಲನ ಜರುಗಲಿದ್ದು, ಆಸ್ತಿದಾರರು ತಮ್ಮ ಆಸ್ತಿಗಳಿಗೆ ಕಂದಾಯವನ್ನು ಪಾವತಿಸಿ ಹಾಗೂ ಸೂಕ್ತ ದಾಖಲಾತಿಗಳನ್ನು ನೀಡಿ ಈ ಆಸ್ತಿ ನಮೂನೆ- 3 ಅನ್ನು ಪಡೆಯಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯಾಧಿಕಾರಿ ರಾಜಶೇಖರ ಹೆಚ್. ಎಸ್., ಕಂದಾಯ ನಿರೀಕ್ಷಕ ಪುನೀತ್ ಮತ್ತು ಕರ ವಸೂಲಿಗಾರರಾದ ಮಂಜು ಮತ್ತು ಮಹದೇವ್ ಉಪಸ್ಥಿತರಿದ್ದರು.




