Monday, May 6, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಹೆಚ್.ಡಿ.ಕೆ ಪರ ಮೈತ್ರಿ ಪ್ರಚಾರ ಆರಂಭ: ಅನುಕಂಪ ಗಿಟ್ಟಿಸಿಕೊಳ್ಳಲ್ಲ ಎಂದ ನಿಖಿಲ್ ಕುಮಾರಸ್ವಾಮಿ

ಮಂಡ್ಯ ಲೋಕಸಭಾ ಕ್ಷೇತ್ರದ ನಾಗಮಂಗಲದಲ್ಲಿ ಮೈತ್ರಿ ಹೆಚ್.ಡಿ.ಕುಮಾರಸ್ವಾಮಿ ಪರವಾಗಿ ಅವರ ಪುತ್ರ ನಿಖಿಲ್ ಪ್ರಚಾರ ನಡೆಸಿದರು.

ನಾಗಮಂಗಲ ಪಟ್ಟಣದ ಬಡಗೂಡಮ್ಮ ದೇಗುಲದ ಆವರಣದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಆಪರೇಷನ್ ವಿಚಾರದಲ್ಲಿ ರಮೇಶ್ ಬಂಡಿಸಿದ್ದೇಗೌಡ ನೀಡಿರುವ ಹೇಳಿಕೆಯನ್ನು ಖಂಡಿಸಿದರು, ಇದು ರಮೇಶ್ ಬಾಬು ಅವರ ಹಿರಿತನಕ್ಕೆ ತಕ್ಕದಾದ ಹೇಳಿಕೆಯಲ್ಲ. ನಮ್ಮ‌ತಂದೆಗೆ ಆಪರೇಷನ್ ಆಗಿರೊದು ಸತ್ಯ. ಮೂರನೇ‌ ಬಾರಿಗೆ ಆಪರೇಷನ್ ಆಗಿದೆ. ಸುಳ್ಳು ಹೇಳಿಕೊಂಡು ಅನುಕಂಪ ಗಿಟ್ಟಿಸಿಕೊಳ್ಳಲ್ಲ.
ನಾವು ಪ್ರ್ಯೂ ಮಾಡಿಕೊಳ್ಳಬೇಕಾ ಎಂದರು.

ಕುಮಾರಸ್ವಾಮಿ ಅವರು ಆರು ವರ್ಷಕ್ಕೆ ಮೂರು ಸಾರಿ ಆಪರೇಷನ್ ಗೆ ಒಳಗಾಗಿದ್ದಾರೆ. ಜಿಲ್ಲೆಯ ಜನತೆ ನೋಡ್ತಿರ್ತಾರೆ. ಆ ರೀತಿ ಮಾತನಾಡಬೇಡಿ. ನಮಗಾಗಿ ನಾವು ಕಣ್ಣೀರು ಹಾಕಿಲ್ಲ. ಅವರೊಬ್ಬ ಭಾವ ಜೀವಿ. ಕಣ್ಣೀರು ಹಾಕಿ ನಾವು ಪ್ರಚಾರ ಗಿಟ್ಟಿಸಿಕೊಳ್ಳಬೇಕಿಲ್ಲ. ಕುಮಾರಸ್ವಾಮಿ ಬಂದು ಇಲ್ಲಿ ಸ್ಪರ್ಧೆ ಮಾಡ್ತಿರದು ಅವರಿಗೆ ಸಹಿಸಲಾಗ್ತಿಲ್ಲ, ಹಾಗಾಗಿ ಈ ರೀತಿ ಲಘುವಾದ ಹೇಳಿಕೆ‌ ನೀಡ್ತಿದ್ದಾರೆ ಎಂದರು.

ಮಾಜಿ ಶಾಸಕ ಸುರೇಶ್ ಗೌಡ ಮಾತನಾಡಿ, ರಮೇಶ್ ಬಂಡಿಸಿದ್ದೇಗೌಡ ಇಂತಹ  ಹೇಳಿಕೆ ಕೊಡಬಾರದಿತ್ತು. ಅವರ ಹೇಳಿಕೆಯಿಂದ ಸ್ಪಷ್ಟವಾಗಿ ಅರ್ಥವಾಗ್ತಿದೆ ಕುಮಾರಸ್ವಾಮಿ ಅವರ ಆರೋಗ್ಯವನ್ನ ಯಾವ ರೀತಿ ಪರಿಗಣಿಸಿದ್ರು ಅಂತ. ಕಾಂಗ್ರೆಸ್ ಪಕ್ಷಕ್ಕೆ ಕುಮಾರಸ್ವಾಮಿ ಅವರ ಚಿಕಿತ್ಸೆ ಯಶಸ್ವಿಯಾಗಿ ಬಂದಿರುವುದು ಇಷ್ಟ ಇಲ್ಲ ಅನಿಸುತ್ತದೆ. ವಿಕೃತ ಮನೋಭಾವದಿಂದ ದುರಹಂಕಾರದಿಂದ ಅಧಿಕಾರದಲ್ಲಿ ಮೆರೆಯುತ್ತಿದ್ದಾರೆ.
ಅವರು ಏನು ಬಯಸುತ್ತಾರೋ ಬಯಸಲಿ ಜನರೇ ಉತ್ತರ ಕೊಡ್ತಾರೆ ಎಂದು ಕಿಡಿಕಾರಿದರು.

ಮುಂದಿನ ದಿನದಲ್ಲಿ ಮೋದಿ ಸರ್ಕಾರದಲ್ಲಿ ಎಚ್ಡಿಕೆ ಕೇಂದ್ರದ ಸಚಿವರಾಗ್ತಾರೆ‌…. ಜಿಲ್ಲೆಗೆ ಕೇಂದ್ರ ಸಚಿವರಾಗುವರು ಬೇಕೋ ಇಲ್ಲ ಕಂಟ್ರಾಕ್ಟರ್ ಬೇಕೋ ನಿರ್ಧರಿಸಿ…. ದೇಶ ಕಾಯೋಕೆ ಮೋದಿ ಪ್ರಧಾನಿ ಆಗಬೇಕು, ಕಾವೇರಿ ಕಾಯೋಕೆ ಕುಮಾರಣ್ಣ ಕೇಂದ್ರ ಮಂತ್ರಿ ಆಗಬೇಕು… ಮಂಡ್ಯ ಜಿಲ್ಲೆಗೆ ಬರ್ತಿರೋ ಕುಮಾರಣ್ಣ ಸಂಬಂಧ ಪ್ರಶ್ನೆ ಮಾಡ್ತಾರೆ… ಆಗಾದ್ರೆ ಇಟಲಿ ಗೂ ಚಿಕ್ಕಮಗಳೂರಿಗೆ ಏನ್ ಸಂಬಂಧ… ರಾಹುಲ್ ಗಾಂಧಿಗೂ ವೈಯನಾಡಿಗೆ ಏನ್ ಸಂಬಂಧ?….ಮೈಸೂರಿನ ಸಿದ್ರಾಮಯ್ಯಗೂ ಬಾದಾಮಿಗೂ ಏನ್ ಸಂಬಂಧ… ಎಂದು ಪ್ರಶ್ಜಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಪ್ರತಾಪ ಸಿಂಹ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!