Thursday, September 19, 2024

ಪ್ರಾಯೋಗಿಕ ಆವೃತ್ತಿ

ಶೋಷಿತ ವರ್ಗಕ್ಕೆ ಶಿಕ್ಷಣವನ್ನು ನೀಡಿದ ತಾಯಿ : ಸಾವಿತ್ರಿ ಬಾಯಿ ಫುಲೆ

ಅಕ್ಷರ ಅವ್ವ ಸಾವಿತ್ರಿ ಬಾಯಿ ಫುಲೆಯವರು ಶೋಷಿತ ವರ್ಗಕ್ಕೆ ಶಿಕ್ಷಣವನ್ನು ನೀಡಿದ ಮಹಾ ತಾಯಿ. ಒಂದು ವರ್ಗಕ್ಕೆ ಸೀಮಿತವಾದ ಶಿಕ್ಷಣವನ್ನು ಎಲ್ಲಾ ವರ್ಗದ ಜನರಿಗೆ ನೀಡಿದರು, ಹಿಂದಿನ ಕಾಲದಲ್ಲಿ ಒಂದು ವರ್ಗಕ್ಕೇ ಮಾತ್ರ ಶಿಕ್ಷಕರಾಗುವ ವ್ಯವಸ್ತೆ ಇತ್ತು. ಅದನ್ನು ದಿಕ್ಕರಿಸಿ ಎಲ್ಲಾ ವರ್ಗದ ಜನರಿಗೆ ಶಿಕ್ಷಣ ನೀಡಿದರು ಎಂದು ಹೇಳಿದರು. ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್, ಮದ್ದೂರು ತಾಲೂಕು ಘಟಕದ ಕಚೇರಿಯಲ್ಲಿ ನಡೆದ ಸಾವಿತ್ರಿ ಬಾಯಿ ಫುಲೆ ಜಯಂತಿ ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ಎಂ.ಸಿ. ಬಸವರಾಜು ಅವರು ಮಾತನಾಡಿದರು.

ಪರಿಷತ್ ಮುಖಂಡರ ಗೌರವಾಧ್ಯಕ್ಷ ಎಂ.ಸಿ. ಬಸವರಾಜು ಮಾತನಾಡಿ ಸಾವಿತ್ರಿ ಬಾಯಿ ಫುಲೆ ದಂಪತಿಗಳು ಸಮಾಜ ಸುಧಾರಣೆಗಾಗಿ ಜೀವನವನ್ನೇ ತ್ಯಾಗ ಮಾಡಿದರು. ಅವರ ಆದರ್ಶವನ್ನು ಯುವಕರು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಹಿರಿಯ ಪರಿಷತ್ ಮುಖಂಡರಾದ ಸಿ.ಲಿಂಗಯ್ಯ ನವರನ್ನು ಅಭಿನಂದನೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಶಿವಲಿಂಗಯ್ಯ, ತಾಲೂಕು ಅಧ್ಯಕ್ಷ ಡಿ.ಸಿ, ಮಹೇಂದ್ರ, ಪ್ರದಾನ ಕಾರ್ಯದರ್ಶಿ ಕೆ. ಟಿ ಶಿವಕುಮಾರ, ಗೌರವ ಮಾರ್ಗದರ್ಶಕರು, ಶಂಕರಯ್ಯ, ಪ್ರಗತಿಪರ ಸಂಘಟನೆ ಶ್ರೀ.ಕ. ಶ್ರೀನಿವಾಸ್, ಗಂಗಾಧರ್, ಪುಟ್ಟಸ್ವಾಮಿ ಕೃಷ್ಣೇಗೌಡ, ಜಯಶಂಕರ್, ಚಿಕ್ಕ ಬೋರಯ್ಯ ಸೇರಿದಂತೆ ಮತ್ತಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!