Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿದ್ಯೆಯಿದ್ದರೆ ಎಲ್ಲಿ ಬೇಕಾದರೂ ಬದುಕ ಬಹುದು: ಉದಯ್

ವಿದ್ಯೆ ಕಲಿತಿದ್ದರೆ ಸಮಾಜದಲ್ಲಿ ಎಲ್ಲಿ ಬೇಕಾದರೂ ಬದುಕಲು ಸಾಧ್ಯ ಎಂದು ಕದಲೂರು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕದಲೂರು ಉದಯ್ ತಿಳಿಸಿದರು.

ಮದ್ದೂರು ತಾಲೂಕಿನ ವಳಗೆರೆಹಳ್ಳಿಯ ಪ್ರಮೀಳಾ ವೀರಪ್ಪ ಶಾಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅವರು ಮಾತನಾಡಿದರು.

ಹಳ್ಳಿಗಾಡಿನ ಮಕ್ಕಳು ವಿದ್ಯಾವಂತರಾಗಬೇಕಾದರೆ,ಮೊದಲು ಗ್ರಾಮೀಣ ಭಾಗದ ಶಾಲೆಗಳನ್ನು ಉಳಿಸಬೇಕು.ಈ ಒಂದು ದೂರದೃಷ್ಟಿಯಿಂದ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.

Kadalur Uday

ಮಕ್ಕಳು ವಿದ್ಯಾವಂತರಾದರೆ, ತಾನಾಗಿಯೇ ಉದ್ಯೋಗಾವಕಾಶಗಳು ಹುಡುಕಿಕೊಂಡು ಬರುತ್ತದೆ.ಉದ್ಯೋಗದಿಂದ ಬದುಕು ನಡೆಸಬಹುದು, ಜೀವನ ಕಟ್ಟಿಕೊಳ್ಳಬಹುದ. ಹೀಗಾಗಿ ಪ್ರತಿಯೊಬ್ಬ ಮಕ್ಕಳು ಓದಬೇಕು.ಓದಿದ ಶಾಲೆಗೆ,ಗ್ರಾಮಕ್ಕೆ ಜಿಲ್ಲೆಗೆ ಕೀರ್ತಿ ತರುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ನಮ್ಮ ಹಳ್ಳಿಗಾಡಿನ ಪ್ರತಿಭಾವಂತ ಮಕ್ಕಳು ಈ ದಿನ ದೊಡ್ಡ ಅಧಿಕಾರಿಗಳಾಗಿದ್ದಾರೆ ದೇಶ ವಿದೇಶಗಳಲ್ಲಿ ದೊಡ್ಡ ದೊಡ್ಡ ಹುದ್ದೆಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ ಅವರ ಹಾಗೆ ನೀವು ಸಹ ಕಷ್ಟಪಟ್ಟು ಓದಿ ಒಳ್ಳೆಯ ಸತ್ಪ್ರಜೆಯಾಗಬೇಕು ಎಂದು ತಿಳಿಸಿದರು.

ಪ್ರಮೀಳ ವೀರಪ್ಪ ಶಾಲೆಯ ಖಜಾಂಚಿ ಅನೋಜ್. ಮುಖ್ಯ ಶಿಕ್ಷಕ ಶಿವಣ್ಣ. ಗ್ರಾಮದ ಮುಖಂಡರಾದ ಅಭಿನಂದನ್. ಶಾಲೆಯ ಆಡಳಿತಾಧಿಕಾರಿ ರವಿ ಪ್ರಾಸ್ತವಿಕ ಭಾಷಣ ಮಾಡಿದ ವಿಜಯ್ ವಿಕ್ರಂ.ರವಿ.ಗುರುಪ್ರಸದ್. ಶಾಲೆಯ ಶಿಕ್ಷಕರು ಮಕ್ಕಳು ಪೋಷಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!