Thursday, April 18, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು | ಚುನಾವಣಾ ಸಂಭ್ರಮ ಜೊತೆಗೆ ಕಳೆಗಟ್ಟಿದ ಮದ್ದೂರು ದನಗಳ ಜಾತ್ರೆ

ವರದಿ : ಪ್ರಭು ವಿ ಎಸ್

  • ಅಬ್ಬರದ ಚುನಾವಣೆ ಪ್ರಚಾರ ನಡುವೆಯೂ ರೈತರು, ದನಪಾಲಕರು ಭಾಗಿ
  • ಹಳ್ಳಿಕಾರ್ ಜಾನುವಾರುಗಳೇ ಕಾಣ ಸಿಗುವ ಮದ್ದೂರು ದನಗಳ ಜಾತ್ರೆಗೆ ತನ್ನದೇ ಆದ ಇತಿಹಾಸವಿದೆ

ನೂರಾರು ವರ್ಷಗಳ ಇತಿಹಾಸವಿರುವ ಮದ್ದೂರು ಶ್ರೀ ನರಸಿಂಹಸ್ವಾಮಿ ಹಾಗೂ ಶ್ರೀಮದ್ದೂರಮ್ಮ ದನಗಳ ಜಾತ್ರೆ ಪ್ರಸಕ್ತ ವರ್ಷ ಕಳೆಗಟ್ಟಿದೆ.

ಚುನಾವಣಾ ನೀತಿ ಸಂಹಿತೆ ಜೊತೆಗೆ ಮದ್ದೂರು ದನಗಳ ಜಾತ್ರೆ ಪ್ರಸಕ್ತ ವರ್ಷ ಯಾವುದೇ ಅಡತಡೆ ಇಲ್ಲದೆ ಆರಂಭಗೊಂಡಿದ್ದು, ದನಗಳನ್ನು ಕೊಳ್ಳುವ, ಮಾರುವ ಉತ್ಸಾಹದಲ್ಲಿ ರೈತಾಪಿ ವರ್ಗ ಮತ್ತು ಪಶು ಪಾಲಕರು ಜಾತ್ರೆಯತ್ತ ಮುಖ ಮಾಡಿದ್ದಾರೆ.

ವರ್ಷದ ಆರಂಭದ ಪ್ರಮುಖ ಜಾತ್ರೆಗಳಲ್ಲಿ ಒಂದಾದ ಮತ್ತು ನೂರಕ್ಕೆ ನೂರರಷ್ಟು ಕೃಷಿ ಉಪಯೋಗಿ ಹಳ್ಳಿಕಾರ್ ಜಾನುವಾರುಗಳೇ ಕಾಣ ಸಿಗುವ ಮದ್ದೂರು ದನಗಳ ಜಾತ್ರೆಗೆ ತನ್ನದೇ ಆದ ಇತಿಹಾಸವಿದ್ದು, ಕರ್ನಾಟಕ ಸೇರಿದಂತೆ ನೆರೆಯ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯದಿಂದಲೂ ಜಾನುವಾರು ಮಾಲೀಕರು ಸದರಿ ಜಾತ್ರೆಗೆ ಆಗಮಿಸುವುದು ಹಿಂದಿನಿಂದಲೂ ನಡೆದು ಬಂದಿರುವ ವಾಡಿಕೆಯಾಗಿದೆ.

ಕಳೆದ ಎರಡು ದಿನಗಳಿಂದ ರಾಜ್ಯದ ವಿವಿಧೆಡೆಗಳೂ ಸೇರಿದಂತೆ ನೆರೆಯ ರಾಮನಗರ, ಮೈಸೂರು ಮತ್ತು ತುಮಕೂರು ಜಿಲ್ಲೆಗಳೂ ಸೇರಿದಂತೆ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಶ್ರೀರಂಗಪಟ್ಟಣ, ಪಾಂಡವಪುರ, ಮಳವಳ್ಳಿ, ನಾಗಮಂಗಲ ಮತ್ತು ತಾಲ್ಲೂಕಿನ ರೈತರು ಈಗಾಗಲೇ ಜಾತ್ರೆ ಮಾಳದಲ್ಲಿ ತಮ್ಮ ರಾಸುಗಳನ್ನು ಕರೆತಂದು ವ್ಯಾಪಾರಕ್ಕೆ ಕಟ್ಟಿದ್ದಾರೆ.

ಮುಂಗಾರು ಆರಂಭದ ಮೊದಲ ಜಾತ್ರೆಯ ಖ್ಯಾತಿ ಸ್ಥಳೀಯ ಜಾತ್ರೆಗಿದ್ದು ಪೂರ್ವ ಮುಂಗಾರು ಮಳೆ ನಡುವೆ
ಬಿತ್ತನೇ ಕಾರ್ಯಗಳಿಗೆ ಮುಂದಾಗುವ ರೈತರು ತಮ್ಮ ಜಮೀನುಗಳಲ್ಲಿ ಬಿತ್ತುವ ಬೀಜಗಳಿಗೆ ನೀಡುವಷ್ಟೇ ಪ್ರಾಮುಖ್ಯತೆಯನ್ನು ಜಾನುವಾರು ಗಳಿಗೂ ನೀಡುವ ಪ್ರತೀತಿಯಿದ್ದು ಇಲ್ಲಿನ ಹಳ್ಳಿಕಾರ್ ರಾಸುಗಳಿಗೆ ಅದರದ್ದೇ ಆದ ಪ್ರಾಮುಖ್ಯತೆ ಹಿಂದಿನಿಂದಲೂ ಇದೆ. ಪಟ್ಟಣದ ಬಹುತೇಕ ಬಡಾವಣೆಗಳು ನಿರೀಕ್ಷೆಗೂ ಮೀರಿ ಬೆಳೆದಿದ್ದು ಒಂದು ದಶಕಗಳ ಹಿಂದೆ ಖಾಲಿಯಿದ್ದ ಲೀಲಾವತಿ ಬಡಾವಣೆ, ವಿವಿ ನಗರ, ಎಚ್.ಕೆ.ವಿ. ನಗರ, ಮೈಸೂರು- ಬೆಂಗಳೂರು ಹೆದ್ದಾರಿ ಮತ್ತು ಮಳವಳ್ಳಿ, ತುಮಕೂರು ಮಾರ್ಗದ ರಸ್ತೆಯ ಎರಡೂ ಬದಿ ಜಾತ್ರೆ ವೇಳೆ ಜಾನುವಾರು ಕಟ್ಟುತ್ತಿದ್ದಜಾಗವೀಗ

ಸದ್ಯಕ್ಕೆ ಪಟ್ಟಣದ ಹಳೆ ಎಂ.ಸಿ. ರಸ್ತೆ, ಪ್ರವಾಸಿಮಂದಿರ ವೃತ್ತ, ತಾಲೂಕು ಕಚೇರಿ ಅಕ್ಕಪಕ್ಕದ ಲಭ್ಯವಿರುವ ಖಾಲಿ ಜಾಗಗಳಲ್ಲಿ ರೈತರು, ತಮ್ಮ ಜಾನುವಾರುಗಳನ್ನು ಕಟ್ಟಿದ್ದು ನಾಲ್ಕು ವರ್ಷಗಳ ಬಳಿಕ ಮತ್ತೆ ಚಾಲನೆಯಾಗಿರುವ ಜಾತ್ರೆಗೆ ತಾಲೂಕು ಆಡಳಿತ ಪೂರ್ವ ಸಿದ್ಧತೆಯನ್ನು ಕೈಗೊಂಡಿದೆ. ಅಗತ್ಯ ರಾಸುಗಳ ಕೊಳ್ಳುವ ಮತ್ತು ಮಾರುವ ಪ್ರಕ್ರಿಯೆಗೆ ವೇದಿಕೆಯಾಗಿರುವ ಮದ್ದೂರು ದನಗಳ ಆರಂಭಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ.

ಪುರಸಭೆ ಜಾತ್ರೆಗೆ ಬರುವ ಜನ, ಜಾನುವಾರುಗಳಿಗೆ ಟ್ಯಾಂಕರ್‌ಗಳ ಮೂಲಕ ನೀರು ಪೂರೈಕೆ, ನೀರಾವರಿ ಇಲಾಖೆ ವತಿಯಿಂದ ಮದ್ದೂರು ಕೆರೆ ವ್ಯಾಪ್ತಿಯ ನಾಲೆಗಳಲ್ಲಿ ನೀರು ಬಿಡುಗಡೆಗೊಳಿಸಿದ್ದು, ಸ್ವಚ್ಛತೆ, ಆರೋಗ್ಯ ಸಂಬಂಧ ಮುಂಜಾಗ್ರತಾ ಕ್ರಮಕ್ಕೆ ತಾಲೂಕು ಆಡಳಿತ ಎರಡು ಸುತ್ತಿನ ಸಭೆ ನಡೆಸಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!