Thursday, September 19, 2024

ಪ್ರಾಯೋಗಿಕ ಆವೃತ್ತಿ

ಎಲೆಕ್ಟ್ರಿಕ್ ವಾಹನ ಬಳಕೆಯತ್ತ ಜನರ ಒಲವು : ವಿನಯ್ ಕುಮಾರ್

ಪ್ರಸ್ತುತ ದಿನದಲ್ಲಿ ಅತ್ಯಾಧುನಿಕ ತಂತ್ರಜ್ಜಾನದ ಎಲೆಕ್ಟ್ರಿಕ್ ವಾಹನ ಬಳಕೆಯತ್ತ ಜನರ ಒಲವು ಹೆಚ್ಚಾಗುತ್ತಿದೆ ಎಂದು ಇ-ಮಾಂಡವ್ಯ ಮೋಟಾರ್ಸ್ ವ್ಯಸ್ಥಾಪಕ ವಿನಯ್ ಕುಮಾರ್ ಹೇಳಿದರು.

ಮಂಡ್ಯ ನಗರದಲ್ಲಿರುವ ಪ್ರತಿಷ್ಠಿತ ಹೀರೋ ಎಲೆಕ್ಟ್ರಿಕ್ ವಾಹನ ಮಾಂಡವ್ಯ ಮೋಟರ್ಸ್ನನ “ಮೆಗಾ ಸರ್ವಿಸ್ ಕ್ಯಾಂಪ್‌ನಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಭಾರತ ದೇಶವು ಇಂಧನ ರಹಿತ ದೇಶವಾಗಲು ಸರ್ವ ಪ್ರಯತ್ನ ಮಾಡುತ್ತಿದೆ, ಈಗಿನಿಂದಲೇ ದೇಶವು ಎಲೆಕ್ಟ್ರಿಕ್ ತಂತ್ರಜ್ಞಾನದ ವಾಹನಗಳನ್ನೇ, ಎಲ್ಲಾ ಕ್ಷೇತ್ರಗಳಲ್ಲಿ ಅಳಡಿಸುವ ಮಹತ್ವದ ಯೋಜನೆಗಳನ್ನು ರೂಪಿಸುತ್ತಿದೆ ಎಂದರು.

ಭಾರತದ ಅತ್ಯಧಿಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರಾಟ ಹಾಗೂ ಉತ್ಪನ್ನ ಮಾಡುವ ಕಂಪನಿ ಆದಂತಹ ಹೀರೋ ಎಲೆಕ್ಟ್ರಿಕ್ ಕಂಪನಿಯು ಗ್ರಾಹಕರ ಹಿತದೃಷ್ಟಿಯಿಂದ ಈ ಸರ್ವಿಸ್ ಕ್ಯಾಂಪನ್ನು ಹಮ್ಮಿಕೊಂಡಿದ್ದು,ಜನರು ಇದರ ಸದುಪಯೋಗ ಪಡೆಯಬೇಕು ಎಂದರು.

ಜಿಲ್ಲೆಯಾದ್ಯಂತ ಕಳೆದ ಎರಡು ವರ್ಷದಿಂದ ಸಾವಿರಕ್ಕೂ ಅಧಿಕ ಎಲೆಕ್ಟ್ರಿಕ್ ದ್ವಿಚಕ್ರ ವಾಹನವನ್ನು ಮಾರಾಟ ಮಾಡಿದ್ದು, ಹೀರೋ ಎಲೆಕ್ಟ್ರಿಕ್ ವಾಹನ ಬಳಕೆದಾರರ ವಾಹನಗಳ ಸಣ್ಣಪುಟ್ಟ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳಿಗೆ ಸೂಕ್ತ ಉಪಯುಕ್ತ ಉಚಿತ ಸರ್ವಿಸ್ ಗಳನ್ನು ನೀಡಲಾಯಿತು ಎಂದು ತಿಳಿಸಿದರು.

ಹೀರೋ ಎಲೆಕ್ಟ್ರಿಕ್ ಸಂಸ್ಥೆಯು ಕೇವಲ ಮಾರಾಟ ಮಾಡುವ ಗುರಿಯಷ್ಟೇ ಇಟ್ಟುಕೊಂಡಿಲ್ಲ. ಗ್ರಾಹಕರ ಸೇವೆಯನ್ನು ಗರಿಷ್ಠ ಗುರಿಯಾಗಿಟ್ಟುಕೊಂಡು ನಡೆಯುತ್ತಿರುವುದು ಪ್ರಶಂಸನೀಯ ಎಂದು ಹೀರೋ ಎಲೆಕ್ಟ್ರಿಕ್ ವಾಹನದ ಬಳಕೆದಾರರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಹೀರೋ ಎಲೆಕ್ಟ್ರಿಕ್ ಕಂಪನಿಯ ಹಿರಿಯ ಸರ್ವಿಸ್ ಇಂಜಿನಿಯರ್ ಕಿರಣ್, ಶೋರೂಮ್ ಹಿರಿಯ ಸರ್ವಿಸ್ ಟೆಕ್ನಿಷಿಯನ್ ಸಲ್ಮಾನ್ ಅಲಿ ಖಾನ್, ಚೈತ್ರ,ಸವಿತಾ,ರಾಘವೇಂದ್ರ, ರೂಪ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!