Thursday, November 19, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಮದ್ದೂರು ವಿದ್ಯುತ್ ವಿತರಣಾ ಕೇಂದ್ರದಲ್ಲಿ 11 ಕೆ.ವಿ.ಪರಿವರ್ತಕ, ಲೈನ್ ಮತ್ತು ಈ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ 11 ಕೆ.ವಿ. ಮಾರ್ಗಗಳ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ನಾಳೆ ಡಿ.17ರಂದು ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಮದ್ದೂರು ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಈ ಎಲ್ಲಾ ಫೀಡರ್‌ಗಳಾದ ಎಫ್-1 ಮದ್ದೂರು, ಹೆಚ್.ಕೆ.ವಿ.ನಗರ, ಎಫ್-3 ವಿವೇಕಾನಂದನಗರ (ಮದ್ದೂರು ಟೌನ್), ಎಫ್-6 ಬೆಸಗರಹಳ್ಳಿ, ಎಫ್-7 ಕೆ.ಐ.ಎ.ಡಿ.ಬಿ., ಎಫ್- 8 ಸಿ.ಎ.ಕೆರೆ, ಎಫ್-9 ಕ್ಯಾತಘಟ್ಟ, ಎಫ್-10 ಮಠದದೊಡ್ಡಿ, ಎಫ್-11 ಕ್ಲೀನ್ ಪ್ಯಾಕ್ಸ್, ಎಫ್-12 ಛತ್ರದಹೊಸಹಳ್ಳಿ, ಎಫ್- 13 ವಳಗೆರೆಹಳ್ಳಿ, ಎಫ್-14 ಸಾದೊಳಲು ಐಪಿ, ಎಫ್-15 ಗುರುದೇವಹಳ್ಳಿ ಎನ್.ಜೆ.ವೈ. & ಎಫ್-16 ಬಸವನಪುರ, ಈ ಫೀಡರ್‌ಗಳ ಗ್ರಾಮ ಪಂಚಾಯಿತಿಗಳಾದ ಸಿ.ಎ.ಕೆರೆ, ಕ್ಯಾತಘಟ್ಟ, ನಗರಕೆರೆ, ಗೊರವನಹಳ್ಳಿ, ಗೆಜ್ಜಲಗೆರೆ, ಸಾದೊಳಲು ವಳಗೆರೆಹಳ್ಳಿ ಮತ್ತು ಚಾಮನಹಳ್ಳಿ ವ್ಯಾಪ್ತಿಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ