Friday, May 17, 2024

ಪ್ರಾಯೋಗಿಕ ಆವೃತ್ತಿ

ನೀರು ಬಿಟ್ಟಿದ್ದು ಸಾಕು, ಬೇಸಿಗೆಗೆ ನೀರು ಉಳಿಸಿ: ಹೋರಾಟಗಾರರ ಒತ್ತಾಯ

ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಿದ್ದು ಸಾಕು, ಇನ್ನಾದರೂ ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಆಗದಂತೆ ಕೃಷ್ಣರಾಜಸಾಗರದಲ್ಲಿ ನೀರು ಉಳಿಸಿಕೊಳ್ಳಲು ಮುಂದಾಗಬೇಕೆಂದು ಕಾವೇರಿ ಹೋರಾಟಗಾರರು ಒತ್ತಾಯಿಸಿದರು.

ಮಂಡ್ಯ ನಗರದ ಸರ್ ಎಂ ವಿ ಪ್ರತಿಮೆ ಎದುರು 22ನೇ ದಿನದ ಉಪವಾಸದಲ್ಲಿ ಭಾಗವಹಿಸಿ ಒತ್ತಾಯಿಸಿದರು, ಸರದಿ ಉಪವಾಸದಲ್ಲಿ ಗುನ್ನಾಯಕನಹಳ್ಳಿ ಗ್ರಾಮದ ಜಿ.ನಾಗಪ್ಪ, ಜಯರಾಮು, ಶಿವಲಿಂಗಯ್ಯ, ಜಿ.ಸಿ ಚೆಲುವೇಗೌಡ, ಜಿ.ಸಿ.ನಾಗರಾಜ್, ಚಂದ್ರೇಗೌಡ, ಶಿವಣ್ಣ, ಶಿವರತ್ನಮ್ಮ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ನಿರಂತರ ಅನ್ಯಾಯ ಆಗುತ್ತಿದ್ದರೂ ಕರ್ನಾಟಕದ ಹಿತ ಕಾಪಾಡದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸರದಿ ಉಪವಾಸಕ್ಕೆ  ಗುನ್ನಾಯಕನಹಳ್ಳಿ ಗ್ರಾಮಸ್ಥರು ಬೆಂಬಲ ಸೂಚಿಸಿದರು.

ಬಿಜೆಪಿ ಮುಖಂಡ ಅಶೋಕ್ ಜಯರಾಮ್ ನಿರಂತರ ಧರಣಿಯಲ್ಲಿ ಭಾಗಿಯಾಗಿ ಕಾವೇರಿ ಹೋರಾಟ ಬೆಂಬಲಿಸಿದರು. ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದ ಜಯರಾಂ, ರೈತ ಸಂಘದ ಇಂಡವಾಳು ಚಂದ್ರಶೇಖರ್, ಮುದ್ದೇಗೌಡ, ಕನ್ನಡ ಸೇನೆ ಮಂಜುನಾಥ್, ಎಸ್ ನಾರಾಯಣ್, ಕೆ.ಆರ್ ಸತ್ಯಬಾಮ, ಪವಿತ್ರ ಹಾಗೂ ಅರುಣ ನೇತೃತ್ವ ವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!