ಮಂಡ್ಯ ನಗರದ ಶುಗರ್ ಸಿಟಿ ಲಯನ್ಸ್ ಸಂಸ್ಥೆಯ ವತಿಯಿಂದ ರಾಷ್ಟ್ರೀಯ ಅಭಿಯಂತರರ ದಿನಾಚರಣೆ-2024 ಸರ್.ಎಂ.ವಿ ಪ್ರಶಸ್ತಿ ಪ್ರದಾನ ಸಮಾರಂಭವು ನಗರದ ಸರ್.ಎಂ.ವಿ ಪ್ರತಿಮೆಯ ಮುಂಭಾಗದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ಮೈಸೂರು ಕಂಪನಿಯ ಉಪ ಮುಖ್ಯ ಇಂಜಿನಿಯರ್ ಹಾಗೂ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರದ ಟಿ.ಎಸ್. ಶುಭಾರವರಿಗೆ ಅಭಿನಂದಿಸಲಾಯಿತು.
ಈ ವೇಳೆ ವೇದಿಕೆಯಲ್ಲಿ ಅಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲರಾದ ಕೆ.ಟಿ. ಹನುಮಂತು, ಪ್ರತಿಭಾಂಜಲಿ ಡೇವಿಡ್, ಶುಗರ್ ಸಿಟಿ ಅಲಯನ್ಸ್ ಸಂಸ್ಥೆಯ ಸದಸ್ಯರುಗಳಾದ ಸುನಿಲ್ ಬಾಬು, ಮಲ್ಲಿಕಣ್ಣ, ಬಿ.ಆರ್. ಮಹೇಶ್, ಎನ್. ನಾಗರಾಜು, ಎಂ.ಡಿ. ನಾಗರಾಜು, ಕೆ.ಎಂ. ಮಧುಸೂದನ್, ಎಸ್. ಡಿ. ಸೋಮಶೇಖರ್, ಎಸ್. ಎಂ. ಲೋಕೇಶ್, ರಾಧಾಕೃಷ್ಣ ಹಾಗೂ ಇನ್ನಿತರರಿದ್ದರು.