Thursday, October 10, 2024

ಪ್ರಾಯೋಗಿಕ ಆವೃತ್ತಿ

ಸಮಾನ ಮನಸ್ಕರ ವೇದಿಕೆಯಿಂದ ಪ್ರಮೋದ್ ಮುತ್ತಾಲಿಕ್ ನಿರ್ಬಂಧಕ್ಕೆ ಮನವಿ

ಸಮಾನ ಮನಸ್ಕರ ವೇದಿಕೆಯಿಂದ 19ರ ಗುರುವಾರದಂದು  ಶ್ರೀರಂಗಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಗಿತ್ತು.

ಪ್ರಮೋದ್ ಮುತ್ತಾಲಿಕ್, ಕಾಳಿಸ್ವಾಮಿ ತರದ ಕೆಲವರು ಹೊರ ಜಿಲ್ಲೆಗಳ ಕಿಡಿಗೇಡಿಗಳು ಮಂಡ್ಯ ಜಿಲ್ಲೆಗೆ ಬಂದು ಸಮಾಜದ ಶಾಂತಿ ಸಾಮರಸ್ಯ ವನ್ನು ಹಾಳುಮಾಡುವ ಕೆಲಸ ಮಾಡುತ್ತಿದ್ದು, ಇವರನ್ನು ಮಂಡ್ಯ ಜಿಲ್ಲೆಗೆ ಪ್ರವೇಶ ಮಾಡದಂತೆ ಸರ್ಕಾರ ನಿರ್ಬಂಧ ಹೇರಬೇಕು ಎಂದು ತಹಶಿಲ್ದಾರರಿಗೆ ಇದೇ ಶನಿವಾರ 21ರಂದು ಮನವಿ ಸಲ್ಲಿಸುವ ಮೂಲಕ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಲು ತೀರ್ಮಾನಿಸಲಾಯಿತು.

ಪೂರ್ವ ಬಾವಿ ಸಭೆಯ ಅದ್ಯಕ್ಷತೆಯನ್ನು ಸಮಾನ ಮನಸ್ಕರ ವೇದಿಕೆಯ ಸಂಚಾಲಕ ಲಕ್ಷ್ಮಣ್ ಚೀರನಹಳ್ಳಿ ವಹಿಸಿದ್ದರು.

ಸಭೆಯಲ್ಲಿ ಪ್ರಜ್ಞಾವಂತರ ವೇದಿಕೆಯ ಸಂಚಾಲಕರಾದ C S ವೆಂಕಟೇಶ. ರೈತ ಸಂಘಟನೆಯ ಮಂಜೇಶಗೌಡ . ದಲಿತ ಸಂಘರ್ಷ ಸಮಿತಿಯ ಕುಬೇರಪ್ಪ ನಂಜುಂಡ ಮೌರ್ಯ ಸುರೇಶ್. ತಾಹೇರ್ ಶಂಕ್ರಪ್ಪಗೌಡ ಜನವಾದಿ ಮಹಿಳಾ ಸಂಘಟನೆಯ ಜಯಮ್ಮ ಇನ್ನೂ ಮುಂತಾದವರು ಭಾಗವಹಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!