Friday, October 11, 2024

ಪ್ರಾಯೋಗಿಕ ಆವೃತ್ತಿ

ಮಳೆಯಲ್ಲೂ ಮುಂದುವರಿದ ಶ್ರಮಿಕ ನಿವಾಸಿಗಳ ಪ್ರತಿಭಟನೆ

ಭಾರಿ ಮಳೆಗೆ ಕಾಳಿಕಾಂಭ ದೇವಾಲಯದ ಹಿಂದೆ ಇರುವ ಕಾಳಿಕಾಂಭ ಸ್ಲಂ ನಿವಾಸಿಗಳು ನಿದ್ದೆಯಿಲ್ಲದೆ ರಾತ್ರಿಗಳನ್ನು ಕಳೆಯುವಂತಾಗಿದೆ. ಕಾಳಿಕಾಂಬ ಶ್ರಮಿಕ ನಿವಾಸಿಗಳ ಮನೆ ನಿರ್ಮಾಣದ ಕೆಲಸವಂತೂ ನಿರಂತರವಾಗಿ ನೆನೆಗುದಿಗೆ ಬಿದ್ದಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಕಾಳಿಕಾಂಬ ಸ್ಲಂ ನಿವಾಸಿಗಳು ಕರ್ನಾಟಕ ಜನಶಕ್ತಿ ಸಂಘಟನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ನಿನ್ನೆ ಗುರುವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಸ್ಲಂ ಜನರಿಗೆ ಎರಡೂ ಕಡೆಗಳಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಶೆಡ್ಡುಗಳ ಪರಿಸ್ಥಿತಿಯಂತೂ ಶೋಚನೀಯವಾಗಿದ್ದು, ಸಣ್ಣ ಮಳೆಯನ್ನೂ ಕೂಡ ಅವು ತಡೆಯುವ ಸ್ಥಿತಿಯಲ್ಲಿಲ್ಲ. ಬಿರುಮಳೆಗೆ ಶ್ರಮಿಕ ಜನರು ಬೀದಿಪಾಲಾಗಿದ್ದಾರೆ.

ಪ್ರತಿಭಟನೆಯಲ್ಲಿ ಎಲ್ಲಾ ಶ್ರಮಿಕ ನಿವಾಸಿಗಳು ಮತ್ತು ಮಕ್ಕಳು ಸೇರಿದಂತೆ ಪ್ರತಿಭಟನೆ ಮಾಡುತ್ತಾ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ.

ಸರ್ಕಾರದದಿಂದ ಮಂಜೂರಾಗಿರುವ ವಸತಿಗಳನ್ನು ಇನ್ನೂ ವಿತರಿಸದೆ ಸರ್ಕಾರ ವಿಳಂಬ ಮಾಡುತ್ತಿದೆ, ವಸತಿ ಹಕ್ಕಿಗಾಗಿ ಕಳೆದ 15 ವರ್ಷಗಳಿಂದ ಸಂಘಟನೆಯ ಹೋರಾಟ ಮಾಡುತ್ತಿದೆ, ಆದರೆ ಆಡಳಿತಾಧಿಕಾರಿಗಳು, ಸ್ಲಂ  ಬೋರ್ಡ್,  ಜಿಲ್ಲಾ ಶಾಸಕರು, ಸಚಿವರುಗಳು ನಮ್ಮ ಹೋರಾಟವನ್ನು ಪರಿಗಣಿಸಿದೆ, ಸರ್ಕಾರದಿಂದ ಮಂಜೂರಾಗಿರುವ ವಸತಿಗಳನ್ನು ನಿರ್ಮಿಸಿ, ವಾಸಿಸಲು ಅವಕಾಶ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಸಂಘಟಕರು ಆರೋಪಿಸಿದ್ದಾರೆ.

ನಿನ್ನೆ ಗುರುವಾರದಿಂದ ಪ್ರತಿಭಟಿಸುತ್ತಿದ್ದೇವೆ ಅದರೂ ಅಧಿಕಾರಿಗಳು ಸರಿಯಾದ, ಮಾಹಿತಿಯನ್ನು ನೀಡದೆ, ನಮ್ಮ ಹೋರಾಟವನ್ನು  ನಿರ್ಲಕ್ಷ್ಯದಿಂದ ಕಾಣುತ್ತಿದ್ದಾರೆ. ದುಡಿಯುವ ಜನರ, ಬಡವರ ಹೋರಾಟವನ್ನು ಕಡೆಗಣಿಸುತ್ತಿದ್ದಾರೆ. ಇದು ಇದೇ ರೀತಿ ಮುಂದುವರೆದರೆ, ದೊಡ್ಡ ಮಟ್ಟದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಕಾಳಿಕಾಂಬ ಸ್ಲಂ ಜನರಿಗೆ 20 ಗುಂಟೆ ಜಾಗದಲ್ಲಿ ಮನೆ ಕಟ್ಟಿ ಕೊಡಬೇಕೆಂದು ಸರ್ಕಾರ ಆದೇಶಿಸಿದೆ. ಆದರೆ ಕಾಳಿಕಾಂಭ ಟ್ರಸ್ಟ್ ರವರು ಒಪ್ಪಂದದಂತೆ ಬಿಟ್ಟುಕೊಡದೆ ಸತಾಯಿಸುತ್ತಿದ್ದಾರೆ, ಆದ್ದರಿಂದ ನಮ್ಮ ಬೇಡಿಕೆಗಳು ಈಡೇರುವ ತನಕ ನಾವು ಪ್ರತಿಭಟನೆಯನ್ನು ನಿರಂತರವಾಗಿ ಮಾಡುತ್ತೇವೆ ಎಂದು ಶ್ರಮಿಕ ನಿವಾಸಿಗಳ ಒಕ್ಕೂಟವು ತಿಳಿಸಿದೆ.

ಪ್ರತಿಭಟನೆಯಲ್ಲಿ ಶ್ರಮಿಕ ನಿವಾಸಿಗಳ ಮಕ್ಕಳು, ಕರ್ನಾಟಕ ಜನಶಕ್ತಿಯ ಕಾರ್ಯಕಾರಿ ಸಮಿತಿಯ ಮಲ್ಲಿಗೆ,  ಶ್ರಮಿಕ ನಿವಾಸಿಗಳ ಒಕ್ಕೂಟದ ಪದಾಧಿಕಾರಿಗಳಾದ ಪ್ರಕಾಶ್, ಸಿದ್ಧರಾಜು, ಪೂರ್ಣಿಮ, ಬಾಬು, ಕೃಷ್ಣಪ್ಪ ಮಹಿಳಾ ಮುನ್ನಡೆಯ ಜ್ಯೋತಿ, ಕಮಲ, ಶಿಲ್ಪ  ಸೇರಿದಂತೆ ಎಲ್ಲಾ ಶ್ರಮಿಕ ನಿವಾಸಿಗಳು ನಿರಂತರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ.

ಇದನ್ನೂ ಓದಿ : ಕಾಳಿಕಾಂಬ ಸ್ಲಂ ನಿವಾಸಿಗಳ ಪ್ರತಿಭಟನೆ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!