Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಹಿಳಾ ಸಮಾನತೆ ಇಲ್ಲದೇ ವಿಶ್ವಮಾನವ ಧರ್ಮ ಸ್ಥಾಪನೆ ಅಸಾಧ್ಯ: ಬಿ.ಟಿ.ವಿಶ್ವನಾಥ್

ಮಹಿಳೆಯರಿಗೆ ಪುರುಷರಷ್ಟೇ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸಮಾನತೆ ನೀಡದೇ ಯಾವುದೇ ದೇಶದಲ್ಲಿ ವಿಶ್ವ ಮಾನವ ಧರ್ಮ ಸ್ಥಾಪನೆ ಅಸಾಧ್ಯವೆಂದು ಪ್ರಗತಿಪರ ನ್ಯಾಯವಾದಿ ಬಿ.ಟಿ.ವಿಶ್ವನಾಥ್ ಅಭಿಪ್ರಾಯಪಟ್ಟರು.

ಮೈಸೂರು ಜಿಲ್ಲೆಯ ಬನ್ನೂರು ಹೋಬಳಿ ಯಾಚೇನಹಳ್ಳಿಯಲ್ಲಿ ರಾಮಕೃಷ್ಣ ಸೇವಾ ಕೇಂದ್ರ ಟ್ರಸ್ಟ್ ವತಿಯಿಂದ ನಡೆದ ವಿಶ್ವಮಾನವ ಮೌಲ್ಯ ಚಿಂತನ ಸತ್ಸಂಗ-15 ಹುಣ್ಣಿಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶ್ವಮಾನವ ಮೌಲ್ಯಗಳಲ್ಲಿ “ಮಹಿಳಾ ಪಾತ್ರ” ಕುರಿತು ಅವರು ವಿಚಾರ ಮಂಡನೆ ಮಾಡಿದರು.

ಹೆಣ್ಣೊಂದು ಕಲಿತರೆ ಶಾಲೆಯನ್ನು ತೆರೆದಂತೆ ಎಂಬ ನಾಣ್ಣುಡಿ ಇದೆ, ಎಲ್ಲಿ ಮಹಿಳೆಯರಿಗೆ ಸಾಮಾನ ಅವಕಾಶಗಳನ್ನು ಕಲ್ಪಿಸಲಾಗಿದಯೇ ಅಂತಹ ದೇಶಗಳು ಪ್ರಗತಿಯಲ್ಲಿ ದಾಪುಗಾಲು ಇಟ್ಟಿವೆ. ಉದಾಹರಣೆಗೆ ಸ್ಪೀಡನ್ ದೇಶದಲ್ಲಿ ಶೇ.45ರಷ್ಟು ಜನ ಮಹಿಳಾ ಪರವಾಗಿದ್ಧಾರೆ, ಅಲ್ಲಿ ಮಹಿಳೆಯರಿಗೆ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಸಮಾನ ಅವಕಾಶಗಳನ್ನೂ ಕಲ್ಪಿಸಲಾಗಿದೆ, ಆದ್ದರಿಂದ ಆ ದೇಶವು ಪಗ್ರತಿ ಸಾಧಿಸಲು ಸಾಧ್ಯವಾಗಿದೆ ಎಂದು ವಿವರಿಸಿದರು.

ವಿಶ್ವದಲ್ಲಿ ಜೀವ್ಸ್ (Jews)  ಎನ್ನುವ ಜನಾಂಗದವರೇ ಶೇ.20 ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದಾರೆ, ಇವರ ಜನಸಂಖ್ಯೆ ವಿಶ್ವದಲ್ಲಿ ಶೇ.1ರಷ್ಟಿದೆ, ಆದರೂ ಅತಿ ಹೆಚ್ಚು ನೊಬೆಲ್ ಪ್ರಶಸ್ತಿಗಳನ್ನು ಪಡೆದಿದ್ದಾರೆ, ಇದು ಹೇಗೆ ಸಾಧ್ಯವಾಯಿತು ಎಂದು ಯೋಚಿಸಿದರೆ, ಜ್ಯೂಸ್ ಜನಾಂಗದಲ್ಲಿ ಮಹಿಳೆಯರಿಗೆ ಪುರುಷನಷ್ಟೆ ಎಲ್ಲ ರಂಗಗಳಲ್ಲಿಯೂ ಅವಕಾಶ ಕಲ್ಪಿಸಲಾಗಿದೆ ಎಂಬುದು ತಿಳಿದು ಬರುತ್ತದೆ ಎಂಬ ಮಾಹಿತಿ ನೀಡಿದರು.

ವಿಶ್ವದಲ್ಲಿ ಡೆನ್ಮಾರ್ಕ್, ಇಟಲಿ, ಆಸ್ಟೇಲಿಯಾ, ಯುಎಸ್, ಟರ್ಕಿ, ಮೆಕ್ಸಿಕೋ ಹಾಗೂ ಜರ್ಮಿನಿ ಸೇರಿದಂತೆ 10 ರಾಷ್ಟ್ರಗಳಲ್ಲಿ ಮಹಿಳೆಯರಿಗೆ ಹೆಚ್ಚು ಸಮಾನ ಅವಕಾಶಗಳನ್ನು ಕಲ್ಪಿಸಲಾಗಿದೆ, ಆದ್ದರಿಂದ ಈ ಎಲ್ಲ ದೇಶಗಳು ಅಭಿವೃದ್ದಿ ಸಾಧಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಶ್ರೀರಾಮಕೃಷ್ಣ ಸೇವಾ ಕೇಂದ್ರ ಟ್ರಸ್ಟ್ ನ ಶ್ರೀನಾದಾನಂದನಾಥ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿದ್ದರು. ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್.ನಾಗರಾಜ್‌, ಕೆ.‌ಜಿ.ವಿಜಯಕುಮಾರ್, ಡಾ.ಮಾದೇಶ್, ಅಭಿಯಂತರ ಜಿ ಎನ್ ಕೆಂಪರಾಜು, ಡಾ.ಆದಿತ್ಯಗೌಡ, ನುಡಿ ಕರ್ನಾಟಕದ ಸಂಪಾದಕರಾದ ಎನ್.ನಾಗೇಶ್, ಸಂತೋಷ್, ಮುಖಂಡರಾದ ಟಿ ಡಿ ನಾಗರಾಜ್, ವೈರಮುಡಿ, ಪಾವನಿ, ನೆಲದನಿ ಬಳಗದ ಮಂಗಲ ಲಂಕೇಶ್, ಸುಬ್ರ್ಮಮಣ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!