ಭಗ್ನಪ್ರೇಮಿಯೊಬ್ಬ ತಾನು ಇಷ್ಟಪಟ್ಟಿದ ಯುವತಿ ತನ್ನ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಜಿಗುಪ್ಸೆಗೊಂಡು ತನ್ನ ಪ್ರೇಯಸಿಯ ಮನೆ ಮುಂದೆಯೇ ಜಿಲೆಟಿನ್ ಸ್ಪೋಟಕ ಬಳಸಿ ಸ್ಪೋಟಿಸಿಕೊಂಡು ಸಾವನ್ನಪ್ಪಿರುವ ಭೀಕರ ಘಟನೆ ನಾಗಮಂಗಲ ತಾಲೂಕಿನ ಕಾಂತಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಳೇನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ
ನಾಗಮಂಗಲ ತಾಲ್ಲೂಕಿನ ಬಸವೇಶ್ವರ ನಗರ ವಾಸಿ ರಾಮಚಂದ್ರ ಎಂಬ ಯುವಕ ತನ್ನನ್ನು ತಾನೇ ಸ್ಪೋಟಿಸಿ ಕೊಂಡು ಆತ್ಮಹತ್ಯೆ ಮಾಡಿಕೊಂಡವವನು.
ಘಟನೆ ವಿವರ
ತಾನು ಪ್ರೀತಿಸುತ್ತಿದ್ದ ಅಪ್ರಾಪ್ತೆ ಯುವತಿಯೊಂದಿಗೆ ಕಳೆದ ವರ್ಷ ಮನೆ ಬಿಟ್ಟು ಓಡಿ ಹೋಗಿದ್ದ ಯುವಕ ರಾಮಚಂದ್ರ, ಪೋಕ್ಸೋ ಕಾಯ್ದೆಯಲ್ಲಿ ಜೈಲು ಪಾಲಾಗಿದ್ದ. ಎರಡು ಕುಟುಂಬಗಳ ರಾಜಿ ಸಂಧಾನದ ಮೂಲಕ ಜೈಲಿನಿಂದ ಹೊರಬಂದಿದ್ದ. ಆದರೆ ಈ ಯುವಕನಿಗೆ ಅಪ್ರಾಪ್ತೆ ಯುವತಿಯು ಮತ್ತೇ ಸಂಪರ್ಕಕ್ಕೆ ಸಿಕ್ಕಿರಲಿಲ್ಲ ಎನ್ನಲಾಗಿದೆ.
ಇದರಿಂದ ಮನನೊಂದು ಯುವಕ ಶನಿವಾರ ರಾತ್ರಿ ಯುವತಿ ಮನೆ ಮುಂದೆ ಜಿಲೆಟಿನ್ ಕಡ್ಡಿಯಿಂದ ಸ್ಪೋಟಿಸಿಕೊಂಡಿದ್ದಾನೆ. ಸ್ಪೋಟದ ತೀವ್ರತೆಗೆ ಯುವಕನ ದೇಹದ ಕೆಲ ಭಾಗಗಳು ಛಿದ್ರ ಛಿದ್ರವಾಗಿವೆ.
ನಾಗಮಂಗಲ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನಾ ಸ್ಥಳಕ್ಕೆ ಸ್ವತಃ ಮಂಡ್ಯ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅಡಿಷನಲ್ ಎಸ್ ಪಿ ತಿಮ್ಮಯ್ಯ, ಡಿ ವೈ ಎಸ್ ಪಿ ಚೆಲುರಾಜು, ಸಿಪಿಐ ನಿರಂಜನ್ ಪಿಎಸ್ಐ ರಾಜೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲೆಟಿನ ಸ್ಫೋಟದ ಹಿನ್ನೆಲೆ ಬೆಂಗಳೂರಿನ ಬಾಂಬು ಪತ್ತೆ ಮತ್ತು ನಿಷ್ಕ್ರಿಯ ದಳ ಹಾಗೂ ಮೈಸೂರಿನ ಎಸ್.ಎಫ್ .ಐ. ಘಟನಾ ಸ್ಥಳವನ್ನು ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತನ ತಾಯಿ ಲಕ್ಷ್ಮಿ ತನಿಖೆ ನಡೆಸುವಂತೆ ಗ್ರಾಮಾಂತರ ಠಾಣೆಗೆ ದೂರು ದಾಖಲಿಸಿದ್ದಾರೆ




