Saturday, November 21, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು| ವಿಜೃಂಭಣೆಯ ಕೆಂಪೇಗೌಡ ಜಯಂತಿ ಆಚರಣೆಗೆ ನಿರ್ಧಾರ

ನಾಡಪ್ರಭು ಕೆಂಪೇಗೌಡರು ಸರ್ವ ಜನಾಂಗದ ಅಭಿವೃದ್ದಿಗೆ ಶ್ರಮಿಸಿ ಮಾದರಿ ಆಡಳಿತಕ್ಕೆ ಮುನ್ನುಡಿ ಬರೆದವರು ಎಂದು ತಹಶೀಲ್ದಾರ್ ಸೋಮಶೇಖರ್ ಅಭಿಪ್ರಾಯಪಟ್ಟರು.

ಮದ್ದೂರು ತಹಶಿಲ್ದಾರ್ ಕಚೇರಿಯಲ್ಲಿ ನಡೆದ ಕೆಂಪೇಗೌಡ ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ  ಅವರು ಮಾತನಾಡಿದರು.

ಜೂ.27ರಂದು ನಾಡಪ್ರಭು ಕೆಂಪೇಗೌಡ ಅವರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿದ್ದು
ಮದ್ದೂರಿನಲ್ಲಿ ಪ್ರತಿವರ್ಷದಂತೆ ಈ ವರ್ಷವು ವಿಜೃಂಭಣೆಯಿಂದ ಆಚರಿಸಲು ಸಂಘ- ಸಂಸ್ಥೆಗಳು ಸಹಕರಿಸಬೇಕೆಂದು ತಿಳಿಸಿದರು.

ಅಂದು ನರಸಿಂಹಸ್ವಾಮಿ ದೇವಸ್ಥಾನದಿಂದ ಶಾಲಾ ಮಕ್ಕಳು ಹಾಗೂ ಜನಪದ ಕಲಾತಂಡಗಳೊಟ್ಟಿಗೆ ಕೆಂಪೇಗೌಡ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ಹೊರಟು ತಾಲ್ಲೂಕು ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲು ಸಭೆ ನಿರ್ಣಯ ಕೈಗೊಂಡಿತು.

ಶಾಸಕರಾದ ಉದಯ್ ಅವರ ಸಹಕಾರ ಕೋರುವಂತೆ ಹಾಗಲಹಳ್ಳಿ ಬಸವರಾಜ್ ಸಲಹೆ ನೀಡಿದರು.
ಉದ್ಯಮಿ ಪ್ರಣಾಮ್ ಸತೀಶ್, ಕೆಂಪೇಗೌಡ ಜಯಂತಿ ಆಚರಣೆಯ ನಿರ್ವಹಣೆ ಜವಬ್ದಾರಿ ಹೊಂದಿರುವ ಅಖಿಲ ಕರ್ನಾಟಕ ಒಕ್ಕಲಿಗರ ಸಂಘಕ್ಕೆ ಇಪ್ಪತ್ತೈದು ಸಾವಿರ ರೂ. ನೆರವು ಪ್ರಕಟಿಸಿದರು.

ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಕರಿಬಸವಯ್ಯ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೆಶಕಿ ರೇಖಾ, ಅಕ್ಷರದಾಸೋಹ ವಿಭಾಗದ ಮಂಗಳಮ್ಮ, ಪಶು ವೈದ್ಯಾಧಿಕಾರಿ ಪ್ರವೀಣ್, ತಾ ಪಂ ಸಹಾಯಕ ನಿರ್ದೆಶಕ ಮಂಜುನಾಥ ಹಾಗೂ ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಅಧ್ಯಕ್ಷ ಶಿವಲಿಂಗಯ್ಯ ಚಂದೂಪುರ ,ಕಾರ್ಯದರ್ಶಿ ಹಾಗಲಹಳ್ಳಿ ಬಸವರಾಜ್, ಜಿಲ್ಲಾ ಸಂಘಟನೆಯ ನಾರಾಯಣ್, ವೆಂಕಟ ಚಲುವಯ್ಯ, ಮರಳಿಗ ಶಿವರಾಜ್, ಮಹದೇವ್, ಉಪ್ಪಿನಕೆರೆ ಶಿವರಾಮ್, ನಾಗರಾಜ್, ಚನ್ನಪ್ಪ, ನಾರಾಯಣ್, ಮ ನ ಪ್ರಸನ್ನಕುಮಾರ್, ಮಹೇಶ್ ಕುದುರಗುಂಡಿ, ರಾಖೇಶ್ ಹಾಗೂ ನ.ಲಿ.ಕೃಷ್ಣ ಸಭೆಯಲ್ಲಿದ್ದರು

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ