Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ| ಮುಡಾ ನೂತನ ಅಧ್ಯಕ್ಷರಾಗಿ ನಯೀಮ್ : ನಾಲ್ವರು ಸದಸ್ಯರ ನೇಮಕ

ಲೋಕಸಭೆ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಮಂಡ್ಯ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡುವ ಪ್ರಕಿಯೆ ಶುರುವಾಗಿದ್ದು, ಮಂಡ್ಯ ನಗರಾಭಿವೃದ್ದಿ ಪ್ರಾಧಿಕಾರ(ಮುಡಾ)ದ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ನಾಲ್ವರ ಸದಸ್ಯರ ನೇಮಕಾತಿ ಮಾಡಿ ನಗರಾಭಿವೃದ್ದಿ ಇಲಾಖೆಗೆ ಅಧೀನ ಕಾರ್ಯದರ್ಶಿ ಲತಾ ಕೆ. ಆದೇಶ ಹೊರಡಿಸಿದ್ದಾರೆ.

ಮಂಡ್ಯ ನಗರಸಭೆ 5ನೇ ವಾರ್ಡ್ ಸದಸ್ಯ ನಯೀಮ್ ಬಿನ್ ಸಿರಾಜ್ ಖಾನ್ ಅವರನ್ನು ಮುಡಾ ಅಧ್ಯಕ್ಷರಾಗಿ, ಜಿಲ್ಲಾ ಕುರುಬರ ಸಂಘದ ಮುಖಂಡ ನಿವೃತ್ತ ಸೆಸ್ಕಾಂ ನೌಕರ ದೊಡ್ಡಯ್ಯ ಬಿನ್ ಜವರಯ್ಯ, ಎಂ.ಕೃಷ್ಣ ಬಿನ್ ಲೇಟ್ ಮರೀಗೌಡ, ಎಂ.ಎಸ್.ಅರುಣ್ ಕುಮಾರ್ ಬಿನ್ ಲೇಟ್ ಶಿವಲಿಂಗಯ್ಯ, ಕೇಶವ ಡಿ ಬಿನ್ ಜವರಯ್ಯ ಇವರುಗಳನ್ನು ಸದಸ್ಯರನ್ನಾಗಿ ನೇಮಕಗೊಳಿಸಲಾಗಿದೆ.

ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ.ರವಿಕುಮಾರ್ ಗೌಡ ಗಣಿಗರವರ ಶಿಫಾರಸ್ಸಿನ ಮೇರೆಗೆ ಸರ್ಕಾರದ ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ ಕಾಯ್ದೆ 1987ರ ಕಲಂ 3(3)(ಎ) ಮತ್ತು (ಎಂ) ರಡಿಯಲ್ಲಿ ಸದರಿಯವರ ನೇಮಕ ಮಾಡಲಾಗಿದೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ