Thursday, September 19, 2024

ಪ್ರಾಯೋಗಿಕ ಆವೃತ್ತಿ

ವಿಜೃಂಭಣೆಯಿಂದ ನಡೆದ ಮತ್ತಿತಾಳೇಶ್ವರ ಭವ್ಯ ರಥೋತ್ಸವ

ಚರ್ಮರೋಗ ನಿವಾರಣೆ ಮಾಡುವ ದೇವರೆಂದೇ ಪ್ರಸಿದ್ದಿ ಪಡೆದಿರುವ ಮಳವಳ್ಳಿ ತಾಲ್ಲೂಕಿನ ಕಲ್ಲುವೀರನಹಳ್ಳಿ ಮತ್ತು ಕಂದೇಗಾಲದ ಮಧ್ಯೆ ನೆಲೆಸಿರುವ ಶ್ರೀಮತ್ತಿತಾಳೇಶ್ವರ ಸ್ವಾಮಿಯ 12ನೇ ಷಷ್ಠಿ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಷಷ್ಠಿಯ ಅಂಗವಾಗಿ ಮತ್ತಿತಾಳೇಶ್ವರ, ಶ್ರೀಮಹದೇಶ್ವರ ಹಾಗೂ ಮತ್ತಿತಾಳೇಶ್ವರ ಬಸವಪ್ಪ ಅವರಿಗೆ ವಿವಿಧ ರೀತಿಯ ಹೂಗಳಿಂದ ಅಲಂಕರಿಸಲಾಗಿತ್ತು. ನಂತರ ವಿವಿಧ ಪೂಜಾ ಕೈಂಕರ್ಯಗಳು ವಿಧಿ ವಿಧಾನಗಳಿಂದ ಜರುಗಿದವು.

ಇಂದು ಮಧ್ಯಾಹ್ನ 1.30 ರ ಸಮಯದಲ್ಲಿ ಮತ್ತಿತಾಳೇಶ್ವರ ದೇವಸ್ಥಾನದ ಕಲ್ಯಾಣಿಯಲ್ಲಿ ಧರೆಗೆ ದೊಡ್ಡವರು ಮಂಟೇಸ್ವಾಮಿ ಬಸವಪ್ಪ, ಮತ್ತಿತಾಳೇಶ್ವರ ಉತ್ಸವ ಮೂರ್ತಿ, ಬಸವಪ್ಪ, ಕಂದೇಗಾಲದ ಚನ್ನಿಗರಾಯಸ್ವಾಮಿ, ಚಿಕ್ಕದೇವಮ್ಮ, ಚಿಕ್ಕವೀರಪ್ಪ ಸೇರಿದಂತೆ ಇತರೆ ದೇವತೆಗಳ ಹೂ- ಹೊಂಬಾಳೆ ಕಾರ್ಯಕ್ರಮ ಜರುಗಿತು.

ತಮಟೆ ಮಂಗಳ ವಾದ್ಯಗಳೊಂದಿಗೆ ಉತ್ಸವ ಮೂರ್ತಿಯನ್ನು ಮೆರವಣಿಯಲ್ಲಿ ಕರೆತಂದು ಷಷ್ಠಿ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಸ್ಥಾನಕ್ಕೆ ಆಗಮಿಸಿದ ಸಾವಿರಾರು ಭಕ್ತರು ರಥಕ್ಕೆ ಹಣ್ಣ,ಜವನ ಎಸೆದು ಪುನೀತರಾದರು. ದೇವಸ್ಥಾನದ ಆವರಣದಲ್ಲಿರುವ ನಾಗರಕಲ್ಲುಗಳಿಗೆ ಮಹಿಳೆಯರು ತನಿ ಎರೆದು ವಿಶೇಷ ಪೂಜೆ ಸಲ್ಲಿಸಿದರು. ಹರೆಕೆವೊತ್ತ ಭಕ್ತರು ನೆಲದಲ್ಲಿ ಊಟ ಮಾಡುವುದರ ಮೂಲಕ ಹರಕೆ ತೀರಿಸಿದರು. ದೇವಸ್ಥಾನಕ್ಕೆ ಬಂದ ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮವು ಜರುಗಿತು.

ಮತ್ತಿತಾಳೇಶ್ವರ ಸ್ವಾಮಿ ದೇವಸ್ಥಾನದ ಅರ್ಚಕ ನಾಗೇಂದ್ರ ಮಾತನಾಡಿ, ದೇವರ ಮೂಲ ಹೆಸರು ಸುಬ್ರಮಣ್ಯ
ಸ್ವಾಮಿಯಾಗಿದ್ದು, ಮತ್ತಿಮರದ ಕೆಳಗೆ ಹೊಡೆದು ಮೂಡಿರುವುದರಿಂದ ಮತ್ತಿತಾಳೇಶ್ವರ ಎಂದು ಪ್ರಸಿದ್ದಿ ಪಡೆಯಿತು. ಯಾವುದೇ ಚರ್ಮ ರೋಗವನ್ನು ವಾಸಿ ಮಾಡುವ ದೇವರಾಗಿದ್ದು, ದೇವಸ್ಥಾನಕ್ಕೆ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಾರೆ, ಚರ್ಮ ರೋಗ ಇರುವವರು ಸ್ವಾಮಿಯ ವಾರದಿನವಾದ ಭಾನುವಾರ ಮತ್ತು ಗುರುವಾರ ದೇವಸ್ಥಾನದ ಕೊಳದಲ್ಲಿ ಸ್ನಾನ ಮಾಡಿ ಮೂರು ವಾರ ಪೂಜೆ ಸಲ್ಲಿಸಿದರೇ ಚರ್ಮರೋಗವು ವಾಸಿಯಾಗಲಿದೆ ಎಂದರು.

ಇದನ್ನೂ ಓದಿ:ಜಗತ್ತಿನಲ್ಲಿಯೇ ಕನ್ನಡ ಭಾಷೆ ಸಮೃದ್ಧ ಭಾಷೆ

ಷಷ್ಠಿ ಹಬ್ಬದ ಪ್ರಯುಕ್ತ ಮತ್ತಿತಾಳೇಶ್ವರ ದೇವರಿಗೆ ಆರಾಧನೆ, ವಿಶೇಷಪೂಜೆ ನಡೆಯಿತು, ಷಷ್ಠಿ ರಥೋತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ಪೂಜೆ  ಸಲ್ಲಿಸಿದ್ದಾರೆಂದು ಹೇಳಿದರು. ತಹಶೀಲ್ದಾರ್ ವಿಜಯಣ್ಣ ರಥಕ್ಕೆ ಪೂಜೆ ಸಲ್ಲಿಸಿದರು. ತಾಲ್ಲೂಕು ಆಡಳಿತ ವಿರುದ್ದ ಆಕ್ರೋಶ: ಮತ್ತಿತಾಳೇಶ್ವರ ದೇವಸ್ಥಾನಕ್ಕೆ ಆಗಮಿಸಿದ ಸಾವಿರಾರು ಭಕ್ತರು ಸಾರಿಗೆ ಬಸ್ ಸೌಲಭ್ಯವಿಲ್ಲದೇ ತಾಲ್ಲೂಕು ಆಡಳಿತದ ವಿರುದ್ದ ಹಿಡಿ
ಶಾಪ ಹಾಕಿದರು.

ಮಳವಳ್ಳಿಯಲ್ಲಿ ಕೆಎಸ್ಆರ್‌ಟಿಸಿ ಡಿಪೋ ಇದ್ದರೂ ಬಸ್ ಸೌಲಭ್ಯ ಕಲ್ಪಿಸಿಕೊಡುವಲ್ಲಿ ತಾಲ್ಲೂಕು ಆಢಳಿತ ವಿಫಲವಾಗಿದೆ, ದೇವಸ್ಥಾನಕ್ಕೆ ಹೋಗಲು ಮತ್ತು ವಾಪಸ್ ಬರಲು ಖಾಸಗಿ ವಾಹನಗಳನ್ನು ಅವಲಂಭಿಸುವುದರ ಜೊತೆಗೆ ಕೇಳಿದಷ್ಟು ಹಣ ಕೊಡುವಂತಾಗಿದೆ ಎಂದು ಕಿಡಿಕಾರಿದರು.

ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಭಾನುವಾರ, ಗುರುವಾರ ಹಾಗೂ ವಿಶೇಷ ದಿನಗಳಲ್ಲಿ ಮಳವಳ್ಳಿ, ಕೆ.ಎಂ.ದೊಡ್ಡಿ ಮತ್ತು ಹಲಗೂರಿನಿಂದ ಬಸ್ ಸೌಲಭ್ಯ ಕಲ್ಪಿಸಿದರೆ ಎಲ್ಲಾ ಕಡೆಗಳಿಂದಲೂ ಬರುವ ಭಕ್ತರಿಗೆ ಅನುಕೂಲವಾಗುತ್ತದೆ ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!