Saturday, November 21, 2026

ಪ್ರಾಯೋಗಿಕ ಆವೃತ್ತಿ

HMT – ಕುದುರೆಮುಖ ಅದಿರು ಕಾರ್ಖಾನೆ ಪುನರಾರಂಭ – ಕುಮಾರಸ್ವಾಮಿ

ರಾಜ್ಯದ ಪ್ರತಿಷ್ಟಿತ ಕಾರ್ಖಾನೆಗಳಾದ ಹೆಚ್.ಎಂ.ಟಿ ಹಾಗೂ ಕುದುರೆಮುಖ ಅದಿರು ಕಾರ್ಖಾನೆ ಪುನಾರಾರಂಭಕ್ಕೆ ಚಿಂತನೆ ನಡೆಸಿದ್ದು, ಜಪಾನ್ ದೇಶಕ್ಕೆ ತಜ್ಞರ ತಂಡ ಕಳುಹಿಸಿ ತಂತ್ರಜ್ಞಾನ ಮಾಹಿತಿ ಪಡೆಯಲಾಗಿದ್ದು, ಡಿಸೆಂಬರ್ ಒಳಗೆ ಭದ್ರಾವತಿ ಮತ್ತು ಉಕ್ಕು ಮತ್ತು ಕಬ್ಬಿಣ ಕಾರ್ಖಾನೆಯನ್ನು ಪುನರಾರಂಭ  ಮಾಡಲಾಗುವುದು ಎಂದು ಕೇಂದ್ರ ಕೈಗಾರಿಕಾ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಮಂಡ್ಯ ನಗರದ ಬಸ್ ನಿಲ್ದಾಣದ ಬಳಿ ಸಂಸದರ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಆಟೋ ನಿಲ್ದಾಣದ ಉದ್ಘಾಟನೆ ನೆರವೇರಿಸಿ, ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಸಚಿವರು,

ನೂತನ ಕೈಗಾರಿಕೆಗಳ ಸ್ಥಾಪನೆ ರಾಜ್ಯ ಸರ್ಕಾರದ ಸಹಕಾರ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯ ಪ್ರತಿನಿಧಿಸುವ ಐವರು ಕೇಂದ್ರ ಸಚಿವರೊಟ್ಟಿಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತಾಳಿರುವುದು ಸರಿಯಲ್ಲವೆಂದರು.

4,500 ಬಸ್

ಪರಿಸರ ಕಾಳಜಿ ಉದ್ದೇಶದಿಂದ ವಿದ್ಯುತ್ ಚಾಲಿತ ಬಸ್ ಗಳ ಸಂಚಾರಕ್ಕೆ ಒತ್ತು ನೀಡಲು ಕೇಂದ್ರ ಸರ್ಕಾರ ಮುಂದಾಗಿದ್ದು, 10 ಸಾವಿರ ಬಸ್ ಗಳನ್ನು ಪ್ರಸಕ್ತ ವರ್ಷ ನೀಡಲಾಗುತ್ತಿದ್ದು, ಈ ಪೈಕಿ 4,500 ಬಸ್ ಗಳನ್ನು ಬೆಂಗಳೂರಿಗೆ ನೀಡಲಾಗುತ್ತದೆ ಎಂದು ವಿವರಿಸಿದರು.

ನೆರೆ ಹಾವಳಿಯಿಂದ ನಲುಗಿರುವ ಉತ್ತರ ಕರ್ನಾಟಕದ ಐದಾರು ಜಿಲ್ಲೆಗಳ ರೈತರಿಗೆ ಅಗತ್ಯ ಪರಿಹಾರ ಕೊಡುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿದ ಅವರು, ಕಲಬುರಗಿಯಲ್ಲಿ ರೈತ ಪ್ರತಿಭಟನೆ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರೂ ಕಾಳಜಿ ತೋರದ ಕ್ರಮ ಸರಿಯಲ್ಲವೆಂದು ತಿವಿದರು.

ಜಿಲ್ಲೆ ಹಾಗೂ ರಾಜ್ಯದಲ್ಲಿ ಕೈಗಾರಿಕಾ ಸ್ಥಾಪನೆಗೆ ಕೇಂದ್ರ ಸರ್ಕಾರ ಆಸಕ್ತಿ ತಳೆದಿದ್ದು ರಾಜ್ಯ ಸರ್ಕಾರದ ನಡವಳಿಕೆ ಬದಲಾಗಬೇಕೆಂದ ಅವರು ರಾಜ್ಯದ ಅಭಿವೃದ್ದಿಗೋಸ್ಕರ ಕೇಂದ್ರದ ಜೊತೆ ಸಂಘರ್ಷ ಮಾಡಿಕೊಳ್ಳುವುದು ಸರಿಯಲ್ಲವೆಂದರು.

ಜಿಲ್ಲೆಯ ಮತದಾರರ ಆರ್ಶೀವಾದದಿಂದ ಸಂಸದ ಹಾಗೂ ಕೇಂದ್ರ ಕೈಗಾರಿಕಾ ಸಚಿವನಾಗಿರುವ ನನ್ನ ಮೇಲೆ ಜಿಲ್ಲೆಯ ಜನರಿಗೆ ಬಹಳಷ್ಟು ನಿರೀಕ್ಷೆಗಳಿವೆ. ಅವನ್ನು ಸಾಕಾರಗೊಳಿಸಲು ಶ್ರಮಿಸುವ ಇರಾದೆಯು ನನ್ನದಾಗಿದ್ದು, ರಾಜ್ಯ ಸರ್ಕಾರದ ಕಾರ್ಯ ವೈಖರಿಯಿಂದ ನೆರೆಯ ಆಂಧ್ರ ಪ್ರದೇಶಕ್ಕೆ ಕೈಗಾರಿಕೆಗಳು ಸ್ಥಳಾಂತರವಾಗುತ್ತಿದ್ದು ರಾಜ್ಯ ಸರ್ಕಾರ ಆಸಕ್ತಿ ತೋರಿ ಅಗತ್ಯ ಸಹಕಾರ ನೀಡಿದರೆ ಕಾರ್ಖಾನೆ ಸ್ಥಾಪನೆಗೆ ಒತ್ತು ನೀಡಲಾಗುವುದೆಂದರು.

ಬಿಬಿಎಂಪಿ ಹಾಗೂ ರಾಜ್ಯದ ಇತರೆ ಪಟ್ಟಣ ಪ್ರದೇಶಗಳ ಜನ ವಸತಿ ಪ್ರದೇಶಗಳಿಗೆ ಎ ಖಾತಾ ಹೆಸರಿನಲ್ಲಿ ದುಬಾರಿ ಶುಲ್ಕ ವಿಧಿಸಿ 20×30 ಅಳತೆಯ ನಿವೇಶನಗಳಿಗೆ 2 ರಿಂದ 8 ಲಕ್ಷ ರೂಪಾಯಿ ವಸೂಲಿಗೆ ನಿಂತಿರುವುದು ಸರಿಯಾದ ಕ್ರಮವಲ್ಲ ಎಂದು ಪ್ರಶ್ನಿಸಿದರು.

ಸಿಆರ್’ಎಸ್ ಫಂಡ್ ಮೂಲಕ ಅಭಿವೃದ್ದಿ ಚಿಂತನೆ

ಕೈಗಾರಿಕೆಗಳ ಸಿಆರ್’ಎಸ್ ಫಂಡ್ ಸದ್ಭಳಕೆ ಮೂಲಕ ಜಿಲ್ಲೆಯ ಶಾಲಾ ಕಟ್ಟಡ, ಹಳ್ಳಿಗಳಲ್ಲಿ  ಬಸ್ ನಿಲ್ದಾಣ ಹಾಗೂ ಹೈ ಮಾಸ್ಕ್ ದೀಪಗಳ ಅಳವಡಿಕೆ ಮತ್ತು ಮೈಷುಗರ್ ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಚಿಂತನೆ ನಡೆಸಲಾಗಿದೆ ಎಂದರು.

ಮುಂದಿನ ತಿಂಗಳು ಜಿಲ್ಲೆಯ ಗಮನಾರ್ಹ ಭೇಟಿ ನೀಡಿ ಹಲವು ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು. ತರುವಾಯ ರಾಜ್ಯ ಪ್ರವಾಸ ಗುರಿಯನ್ನು ಹೊಂದಲಾಗಿದೆ ಎಂದರು.

ಜಿಲ್ಲೆಯ ಕಬ್ಬು ಬೆಳೆಗಾರರ ಪರಿಶ್ರಮದಿಂದ ಸ್ಥಾಪನೆಗೊಂಡು ಸಹಸ್ರಾರು ವಿದ್ಯಾರ್ಥಿಗಳಿಗೆ ಜ್ಞಾನ ದೇಗುಲವಾಗಿದ್ದ ಮೈಷುಗರ್ ಶಾಲೆಯ ಮೂಲ ಸೌಕರ್ಯ ಅಭಿವೃದ್ದಿಗೆ ಒತ್ತು ನೀಡುವ ಉದ್ದೇಶದಿಂದ 10 ಕೋಟಿ ರೂಪಾಯಿ ಅನುದಾನ ಒದಗಿಸುವ ಯೋಜನೆ ಪ್ರಕ್ರಿಯೆಯಲ್ಲಿದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಮಾಜಿ ಸಂಸದ ಸಿ.ಎಸ್.ಪುಟ್ಟರಾಜು, ವಿಧಾನ ಪರಿಷತ್ ಸದಸ್ಯ ಕೆ.ವಿವೇಕಾನಂದ, ಮಾಜಿ ಶಾಸಕ ಕೆ.ಟಿ.ಶ್ರೀಕಂಠೇಗೌಡ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್ (ನಾಗೇಶ್), ಆರ್’ಎಪಿಸಿಎಂಎಸ್ ಅಧ್ಯಕ್ಷ ಯು.ಸಿ.ಶೇಖರ್, ನಿರ್ಮಿತಿ ಕೇಂದ್ರ ಯೋಜನ ನಿರ್ದೇಶಕ ಜಯಪ್ರಕಾಶ್, ಮುಖಂಡ ಬಿ.ಆರ್.ರಾಮಚಂದ್ರು ಸೇರಿದಂತೆ ಇತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ