Friday, September 20, 2024

ಪ್ರಾಯೋಗಿಕ ಆವೃತ್ತಿ

ರೈತರು ಸುಭಿಕ್ಷರಾಗಿರಲು ನಾಲ್ವಡಿಯವರು ಕಾರಣ: ಮಣಿ

ಜಿಲ್ಲೆಯ ರೈತರೆಲ್ಲ ಇಂದು ಆರ್ಥಿಕವಾಗಿ ಸುಭಿಕ್ಷರಾಗಿದ್ದಾರೆ ಎಂದರೆ ಅದಕ್ಕೆ ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರೇ ಕಾರಣ ಎಂದು ಚಾಮುಂಡೇಶ್ವರಿ ಷುಗರ್ಸ್ ಉಪಾಧ್ಯಕ ಮಣಿ ತಿಳಿಸಿದರು.

ಮದ್ದೂರು ತಾಲ್ಲೂಕಿನ ಭಾರತೀನಗರದಲ್ಲಿರುವ ಚಾಂಷುಗರ್ ಶಾಲಾ ಅವರಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮದ್ದೂರು ಮತ್ತು ಚಾಂ ಷುಗರ್ಸ್ ಪ್ರೌಢ ಶಾಲೆ ಇವರುಗಳ ಸಹಯೋಗದಲ್ಲಿ ನಾಲ್ವಡಿ ಕೃಷ್ಣ ರಾಜ ಒಡೆಯರ್ ಅವರ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಈ ಭಾಗದ ರೈತರು ನೀರಿಲ್ಲದೆ ಮಳೆ ನೀರನ್ನು ಆಶ್ರಯಿಸಿ ವ್ಯವಸಾಯ ಮಾಡುತ್ತಿರುವ ಕಷ್ಟವನ್ನ ಕಂಡು ಕನ್ನಂಬಾಡಿ ಜಲಾಶಯ ನಿರ್ಮಾಣ ಮಾಡಲು ಮುಂದಾದರು. ಆ ಸಂದರ್ಭದಲ್ಲಿ ಹಣದ ಸಮಸ್ಯೆ ಒದಗಿದಾಗ ತಮ್ಮ ಪತ್ನಿಯ ಒಡವೆಯನ್ನು ಮುಂಬೈನಲ್ಲಿ ಹೋಗಿ ಮಾರಿ ಕನ್ನಂಬಾಡಿ ಅಣೆಕಟ್ಟು ನಿರ್ಮಿಸಿದರು. ಇಂತಹ ಹೆಮ್ಮೆಯ ಅರಸ ನಾಲ್ಮಡಿಯವರು ಇಂದಿಗೂ ಅಜರಾಮರರಾಗಿದ್ದಾರೆ ಎಂದು ಗುಣಗಾನ ಮಾಡಿದರು.

ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಕ.ಸಾ.ಪ.ಮಂಡ್ಯ ಜಿಲ್ಲಾ ಅಧ್ಯಕ್ಷ ಸಿ.ಕೆ.ರವಿಕುಮಾರ್, ಮಾತನಾಡಿ, ನಾಲ್ವಡಿ ಕೃಷ್ಣ ರಾಜ ಒಡೆಯರ್ ಪ್ರತಿಮೆ ನಮ್ಮ ಜಿಲ್ಲೆಯಲ್ಲಿ ಇಲ್ಲದಿರುವುದು ನಿಜಕ್ಕೂ ಶೋಚನೀಯ, ಮುಂದಿನ ದಿನಗಳಲ್ಲಿ ಅವರ ಪ್ರತಿಮೆಯನ್ನು ಸ್ಥಾಪಿಸಲಾಗುವುದು ಎಂದರು.

ಕೃಷ್ಣರಾಜ ಒಡೆಯರ್ ಅವರು ನಾಡನ್ನು ಕಟ್ಟಿದ ಆದರ್ಶ ಚಿಂತಕರು. 1915 ನೇ ಇಸವಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು. ನಮ್ಮ ನಾಡು- ನುಡಿ ವಿಷಯಕ್ಕೆ ಧಕ್ಕೆ ಬಂದರೆ ಕ.ಸಾ.ಪ ಮೊದಲು ಮುಂಚೂಣಿಯಲ್ಲಿ ನಿಲ್ಲುತ್ತದೆ ಎಂದರು.

ಪ್ರೊ.ಹೆಚ್.ಬಿಳೀಗೌಡ ಅವರು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಪ್ರಾತ ಸ್ಮರಣೀಯರ ಸಾಲಿಗೆ ಸೇರಿದ್ದು, ಇತಿಹಾಸವನ್ನು ಅರಿಯದವ ಇತಿಹಾಸವನ್ನು ಸೃಷ್ಟಿಸಲಾರ ಎಂಬ ಗಾದೆಯ ಮಾತಿನಂತೆ ನಾವು ಪೂರ್ವಿಕರ ಇತಿಹಾಸವನ್ನು ಒಮ್ಮೆ ಅರಿತಾಗ ಅವರ ಸಾಧನೆ, ಜನಪರ ಕೆಲಸಗಳು, ನಾಡನ್ನು ಕಟ್ಟುವುದರ ಉದಾತ್ತ ಚಿಂತನೆಗಳ ಬಗ್ಗೆ ತಿಳಿಯುತ್ತದೆ.

ನಾಲ್ವಡಿ ರವರು ನಾಡನ್ನು ಕಟ್ಟುವುದರ ಬಗೆಗಿನ ಚಿಂತನೆಗಳು ರಾಷ್ಟ್ರದ ಉದ್ದಗಲಕ್ಕೂ ವ್ಯಾಪಿಸಿದೆ. ಹಲವಾರು ರಾಜ ಮಹಾರಾಜರುಗಳು ಎರವಲು ಪಡೆಯುವಂತೆ ಮಾಡಿದ ಅಪ್ರತಿಮ, ದೀಮಂತ ನಾಯಕ ನಾಲ್ವಡಿ ಕೃಷ್ಣರಾಜ ಒಡೆಯರ್ ಎಂದು ಬಣ್ಣಿಸಿದರು.

ಸಂದರ್ಭದಲ್ಲಿ ತಾ.ಕ.ಸಾ.ಪ.ಅದ್ಯಕ್ಷ ಸುನೀಲ್ ಕುಮಾರ್, ಗೌರವ ಕಾರ್ಯದರ್ಶಿ ಹರ್ಷ ,ಪ್ರೊ.ಬೋರೇಗೌಡ, ನಿತೀಶ್, ಲಿಂಗಯ್ಯ, ಶಿಕ್ಷಕರಾದ ಶ್ರೀನಿವಾಸ್, ಸುಜಾತ.ಡಿ.ಕೆ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!