Thursday, September 19, 2024

ಪ್ರಾಯೋಗಿಕ ಆವೃತ್ತಿ

ಬದುಕೇನು ಭಾರವಲ್ಲ ಅನುಭವಿಸಿ…….

ವಿವೇಕಾನಂದ ಎಚ್.ಕೆ

ಬದುಕೇನು ಭಾರವಲ್ಲ ಅನುಭವಿಸಿ…….

ಮುಂದಿನ ಜನ್ಮಕ್ಕಾಗುವಷ್ಟು ನೋವನ್ನುಂಡಿದ್ದೇನೆ,

ಪೂರ್ತಿ ಬದುಕಿಗಾಗುವಷ್ಟು ಕಷ್ಟಗಳನ್ನೆದುರಿಸಿದ್ದೇನೆ,

ಇಡೀ ದೇಹದಲ್ಲಿರುವ ನೀರು ಹಿಂಗುವಂತೆ ಕಣ್ಣೀರಾಗಿದ್ದೇನೆ,

ಏಳು ತಲೆಮಾರಿಗಾಗುವಷ್ಟು ಅವಮಾನಿತನಾಗಿದ್ದೇನೆ,

ಹಲವಾರು ಸಲ ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಶೋಷಣೆಗೊಳಗಾಗಿದ್ದೇನೆ,

ಈ ಬದುಕು ಸಾಕೆನಿಸುವಷ್ಟು ನೊಂದಿದ್ದೇನೆ,

ಜೀವನದಲ್ಲಿ ಮತ್ತೆಂದೂ ಮೇಲೇರಲು ಸಾಧ್ಯವಾಗದಷ್ಟು ಸೋತಿದ್ದೇನೆ,

ಸಮಾಜದ ಯಾರೂ ಗಮನಿಸದಷ್ಟು ಅಲಕ್ಷಿತನಾಗಿದ್ದೇನೆ,

ಇಲ್ಲಿಯವರೆಗೂ ಗಳಿಸಿದ್ದೆಲ್ಲವನ್ನೂ ಕಳೆದುಕೊಂಡಿದ್ದೇನೆ,

ಅನಾಥ ಪ್ರಜ್ಞೆ ಹಗಲಿರುಳು ಕಾಡುತ್ತಾ ಬಸವಳಿದಿದ್ದೇನೆ,

ಆದರೂ,…………..

ಬದುಕನ್ನು ಎದುರಿಸುತ್ತಿದ್ದೇನೆ,

ಈ ಕ್ಷಣಕ್ಕೂ ನಗು ನಗುತಲಿದ್ದೇನೆ,

ಮತ್ತೆ ಮತ್ತೆ ಮನದಲ್ಲಿ ಸುಂದರ ಭವಿಷ್ಯದ ಕನಸು ಕಾಣುತ್ತಿದ್ದೇನೆ,

ನಾನೀಗ ಎಲ್ಲದರಿಂದ ಮುಕ್ತ, ಸಂತೃಪ್ತ, ನಿರ್ಲಿಪ್ತ,

ಎಲ್ಲವನ್ನೂ ಕಳೆದುಕೊಂಡು ನನ್ನನ್ನು ನಾನು ಪಡೆದಿದ್ದೇನೆ,

ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ,

ಬದುಕೇನು ಭಾರವಲ್ಲ, ಅನುಭವಿಸಿ.

ಜೀವನ ಒಂದು ಅದ್ಬುತ ಮೈದಾನ ಹೊಂದಿದ ಪಾಠಶಾಲೆ – ನೆನಪಿರಲಿ,

ಓದಿರಿ, ಬರೆಯಿರಿ, ಪ್ರವಾಸ ಮಾಡಿರಿ
ಸಾಧ್ಯವಾಗದಿದ್ದರೆ ಆಟವಾಡಿ.

ಮತ್ತೆಲ್ಲವೂ ನಿಮ್ಮದಾಗುತ್ತದೆ.

ಇದೊಂದು ಎಲ್ಲರ ಬದುಕಿನ ಬಹುತೇಕ ಸತ್ಯ ಮತ್ತು ವಾಸ್ತವ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!