Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಿಮ್ಸ್ ಹೆರಿಗೆ ವಾರ್ಡ್ ನಲ್ಲಿ ಭ್ರೂಣ ಪತ್ತೆ

ಮಂಡ್ಯ ಮಿಮ್ಸ್ ( ಜಿಲ್ಲಾಸ್ಪತ್ರೆ) ತುರ್ತು ಚಿಕಿತ್ಸಾ ಘಟಕದ ಶೌಚಾಲಯದಲ್ಲಿ ಭ್ರೂಣ ಪತ್ತೆಯಾಗಿದೆ.

ಮಂಗಳವಾರ ರಾತ್ರಿ ಶೌಚಾಲಯಕ್ಕೆ ತೆರಳಿದ್ದ ಮಹಿಳೆಗೆ ಪ್ರಸವ ಆಗಿದ್ದು, ಆ ಭ್ರೂಣವನ್ನು ಶೌಚಾಲಯ ದಲ್ಲೇ ಬಿಟ್ಟು ಹೋಗಿದ್ದಾಳೆ.

ಬುಧವಾರ ಬೆಳಿಗ್ಗೆ ಶೌಚಾಲಯ ಸ್ವಚ್ಛಗೊಳಿಸಲು ಬಂದ ನೌಕರರು ಭ್ರೂಣ ಬಿದ್ದಿರುವುದನ್ನು ಕಂಡು ಹೆಗ್ಗಣವೋ ಏನೋ ಬಿದ್ದಿದೆ ಎಂದು ತಿಳಿದು ಬೇರೆ ನೌಕರರಿಗೆ ತಿಳಿಸಿದ್ದಾರೆ. ಈ ವಿಷಯ ತಿಳಿದ ವೈದ್ಯರು ಹೋಗಿ ನೋಡಲಾಗಿ ಭ್ರೂಣ ಎಂದು ತಿಳಿದುಬಂತು. ಈ ಭ್ರೂಣ ಯಾರದ್ದು ಎಂದು ಪತ್ತೆಯಾಗಿಲ್ಲ. ಆಸ್ಪತ್ರೆಯಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರೀಕ್ಷಿಸಿ ಪತ್ತೆ ಹಚ್ಚಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!