Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ಆರ್.ಪೇಟೆ| ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ಪ್ರತಿಭಟನೆ

ಕೆ.ಆರ್.ಪೇಟೆ ತಾಲ್ಲೂಕಿನ ಕೊಮ್ಮೇನಹಳ್ಳಿ, ಕತ್ತರಘಟ್ಟ, ಬಿಲ್ಲರಾಮನಹಳ್ಳಿ, ಸಾಧುಗೋನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಗಳ ಕೆರೆಗಳಿಗೆ ಹೇಮಾವತಿ ನಂ.55ನೇ ವಿತರಣಾ ನಾಲೆಯಿಂದ ನೀರು ತುಂಬಿಸಿ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿ ಪಟ್ಟಣದ ಹೇಮಾವತಿ ನೀರಾವರಿ ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಕಳೆದ ಒಂದು ತಿಂಗಳ ಹಿಂದೆ ನೀರು ಹೇಮಾವತಿ ಮುಖ್ಯ ನಾಲೆಯಲ್ಲಿ ಸುಮಾರು ಒಂದೂವರೆ ತಿಂಗಳು‌ ನೀರು ಹರಿಸಿದ ಸಂದರ್ಭದಲ್ಲಿ ನಮ್ಮ ಗ್ರಾಮದ ಕೆರೆ ಕಟ್ಟೆಗಳಿಗೆ ಹನಿ ನೀರನ್ನು ಬಿಡದೇ ನಿರ್ಲಕ್ಷ್ಯ ವಹಿಸಲಾಗಿದೆ. ಇದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ, ಈ ಮತ್ತೆ 10 ದಿನಗಳ ಮಟ್ಟಿಗೆ ಮತ್ತೊಮ್ಮೆ ಮುಖ್ಯನಾಲೆಗೆ ನೀರು ಹರಿಸಲಾಗುತ್ತಿದೆ. ಆದರೂ ಸಹ ನೀರಾವರಿ ಅಧಿಕಾರಿಗಳು  ಇದೂವರೆವಿಗೂ ನೀರು ತುಂಬಿಸಲು ಗಂಭೀರವಾದ ಪ್ರಯತ್ನ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆ.ಆರ್.ಪೇಟೆ ಪಟ್ಟಣದ ಹೇಮಾವತಿ ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಕಿಜರ್ ಅಹಮದ್ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ರೈತರು, ನಂ.55ನೇ ವಿತರಣಾ ನಾಲೆಗೆ ಹೆಚ್ಚು ನೀರಿ ಹರಿಸಿ ಕೊನೆಯ ಭಾಗದ ಗ್ರಾಮಗಳಾದ ಕೆ.ಆರ್.ಪೇಟೆ: ತಾಲ್ಲೂಕಿನ ಕೊಮ್ಮೇನಹಳ್ಳಿ, ಕತ್ತರಘಟ್ಟ, ಬಿಲ್ಲರಾಮನಹಳ್ಳಿ, ಸಾಧುಗೋನಹಳ್ಳಿ  ಗ್ರಾಮಗಳ ಕೆರೆಗಳಿಗೆ ಭಾರತೀಪುರ ಬಳಿ ಇರುವ  ಹೇಮಾವತಿ ನಂ.55ನೇ ವಿತರಣಾ ನಾಲೆಯಿಂದ ನೀರು  ತುಂಬಿಸಿ  ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡಬೇಕೆಂದು ಆಗ್ರಹಿಸಿದರು.
ರೈತರೊಂದಿಗೆ ಹೆಚ್.ಟಿ.ಲೋಕೇಶ್, ಬ್ಲಾಕ್ ‌ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಡಾ.ಕೆ.ಸಿ.ಶ್ರೀಕಾಂತ್, ಟಿಎಪಿಸಿಎಂಎಸ್ ನಿರ್ದೇಶಕ ಬಲದೇವ್ ಬೇಟಿ ನೀಡಿ ಭಾರತೀಪುರದ ಬಳಿ ಮುಖ್ಯ ನಾಲೆಯಿಂದ 55ನೇ ವಿತರಣಾ ನಾಲೆಗೆ ಬಿಟ್ಟಿರುವ ನೀರಿನ ಪ್ರಮಾಣವನ್ನು ಪರಿಶೀಲನೆ ನಡೆಸಿದರು. ಅಲ್ಲದೇ ಇದೇ ಸಾಮರ್ಥ್ಯದ ನೀರನ್ನು ಕೆರೆಗಳು ಭರ್ತಿಯಾಗುವರೆವಿಗೂ ನಿತ್ಯ ಹರಿಸಬೇಕು. ಸವಡಿಗಳು, ಇಂಜಿನಿಯರ್ ಗಳು ಕ್ರಿಯಾಶೀಲವಾಗಿ ಕೆಲಸ ಮಾಡಿ ಕೊನೆಯ ಭಾಗದ ಕೆರೆಕಟ್ಟೆಗಳನ್ನು ತುಂಬಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಮುಖಂಡರಾದ ನಾಗೇಗೌಡ, ಸುರೇಶ್, ಅನಿಲ್ ಗೌಡ, ಜಗದೀಶ್, ರಾಮೇಗೌಡ,  ನಾಗರಾಜೇಗೌಡ, ಪ್ರಕಾಶ್, ಕೃಷ್ಣೇಗೌಡ, ಶಿವೇಗೌಡ, ಗೋಪಾಲ್, ಚಂದ್ರು, ಸುನಿಲ್, ಧನುಷ್, ದೀಕ್ಷಿತ್, ಶೇಖರ್, ಜಗದೀಶ್, ಶೇಖರ್, ಸಾಧುಗೋನಹಳ್ಳಿ ಸುರೇಶ್, ರಘು ಸೇರಿದಂತೆ ರೈತರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!