Friday, November 20, 2026

ಪ್ರಾಯೋಗಿಕ ಆವೃತ್ತಿ

ಒಳ ಮೀಸಲಾತಿಯಿಲ್ಲದೇ ಹುದ್ದೆಗಳ ಭರ್ತಿ ಮಹಾ ಮೋಸ : ವೆಂಕಟಗಿರಿಯಯ್ಯ

ಮಂಡ್ಯ: ರಾಜ್ಯಪಾಲರ ಅಂಕಿತ ಪಡೆದ ಪರಿಶಿಷ್ಟ ಜಾತಿಯ ಒಳ ಮೀಸಲಾತಿಯಿಲ್ಲದೇ ಹಿಂದಿನ ಮೀಸಲಾತಿ ನಿಯಮಾನುಸಾರ ೫೬,೩೪೨ ಹುದ್ದೆಗಳನ್ನು ತುಂಬುವ ರಾಜ್ಯಸರಕಾರದ ನಿರ್ಧಾರ ಸೂಕ್ತವಲ್ಲ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಖಂಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೩೦ ದಿನದೊಳಗೆ ಈ ಹುದ್ದೆಗಳನ್ನು ಹಿಂದಿನ ಮೀಸಲಾತಿಯಂತೆ ಭರ್ತಿ ಮಾಡಲು ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟ ತೀರ್ಮಾನಿಸಿದೆ. ಇದರಿಂದ ಅಸ್ಪೃಶ್ಯ ಜಾತಿಗಳಿಗೆ ಅನ್ಯಾಯವಾಗಲಿದೆ ಎಂದು ಆರೋಪಿಸಿದರು.

ನ್ಯಾ.ನಾಗಮೋಹನ್‌ದಾಸ್ ಆಯೋಗದ ವರದಿಯಂತೆ ಸಿದ್ದರಾಮಯ್ಯ ಸರಕಾರದ ಶೇ.೫೦ರಷ್ಟು ಮೀಸಲಾತಿಯ ಮಿತಿಯ ಒಳ ಮೀಸಲಾತಿ ನೀತಿಯ ಪ್ರವರ್ಗಗಳ ಅನುಸಾರ ೮೫೦೦ ಹುದ್ದೆಗಳನ್ನು ಸಮಾಜ ಹಂಚಿಕೆ ಮಾಡಲು ಸರಕಾರ ಮುಂದಾಗಬೇಕೆಂದು ಒತ್ತಾಯಿಸಿದರು.

ಪರಿಶಿಷ್ಟ ಜಾತಿ ಎಬಿಸಿ ಪ್ರವರ್ಗದ ಒಳಮೀಸಲಾತಿಗೆ ರಾಜ್ಯಪಾಲರ ಅಂಕಿತ ಪಡೆದ ಸಿದ್ದರಾಮಯ್ಯ ಸರಕಾರ ನಿರುದ್ಯೋಗಿ ಯುವ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದು ಪ್ರಸಕ್ತ ಒಳ ಮೀಸಲಾತಿ ನೀತಿ ಕೈಬಿಟ್ಟು ಹಿಂದಿನ ಮೀಸಲಾತಿ ನೀತಿ ಅನುಸಾರ ನಿರ್ಧಾರ ಕೈಗೊಂಡಿರುವುದು ಖಂಡನಾರ್ಹ, ಕೂಡಲೇ ಎಬಿಸಿ ಪವರ್ಗವಾರು ಶೇ೧೫ರಷ್ಟು ೮೫೦೦ ಹುದ್ದೆಗಳನ್ನು ಸಮಾನವಾಗಿ ಹಂಚಿಕೆ ಮಾಡಿ ಭರ್ತಿ ಮಾಡುವ ನಿರ್ಣಯ ಮಾಡಬೇಕು. ಇಲ್ಲವಾದಲ್ಲಿ ಈ ಅನ್ಯಾಯದ ವಿರುದ್ಧ ತೀವ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಬಿ.ಆನಂದ್, ಮಹಿಳಾ ಜಿಲ್ಲಾಧ್ಯಕ್ಷ ಸುಶ್ಮಿತ, ಸಂಪನ್ಮೂಲ ವ್ಯಕ್ತಿ ಶರಾವತಿ ಅಶ್ವತ್, ತಾಲೂಕು ಅಧ್ಯಕ್ಷರಾದ ಮುತ್ತುರಾಜ್, ವಿಮಲ ನಂದೀಶ್, ಸುಧಾ ಶ್ರೀಕಂಠು, ಸ್ವಾಮಿ, ಗೀತ ಇದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ