Friday, November 20, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | ಎರಡು ಪ್ರತ್ಯೇಕ ಕೊಲೆ ಪ್ರಕರಣ ; ಆರೋಪಿಗಳ ಬಂಧನ

ಮಂಡ್ಯ ಜಿಲ್ಲೆಯ ಮದ್ದೂರು ಹಾಗೂ ಮಳವಳ್ಳಿಯಲ್ಲಿ ಇತ್ತೀಚೆಗೆ ನಡೆದ ಎರಡು ಕೊಲೆಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆಂದು ಮಂಡ್ಯ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮದ್ಧೂರು ತಾಲ್ಲೂಕಿನ ವಡ್ಡರದೊಡ್ಡಿ ಗ್ರಾಮದ ಅರುಣ ಬಿನ್ ಕಬ್ಬಾಳ ಪುಟ್ಟಯ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಆರೋಪಿಗಳಾದ ನಿಡಘಟ್ಟ ಗ್ರಾಮದ ವಿಕಾಸ್ ಎನ್.ಎಸ್ (31), ಹನುಮಂತಪುರ ಗ್ರಾಮದ ಭರತ್ ಗೌಡ ಹೆಚ್.ಆರ್ (23) ಹೇಮಂತ್ ಹೆಚ್.ಪಿ (23), ನಿತ್ಯಾನಂದ (25), ಯರಗನಹಳ್ಳಿ ಗ್ರಾಮದ ಚಂದನ್ (25), ಹೆಮ್ಮನಹಳ್ಳಿ ಗ್ರಾಮದ ಕುಮಾರ ಹೆಚ್.ಎಸ್ (23), ಶ್ರೀನಿವಾಸ್ ಹೆಚ್.ಎಸ್ (21) ಎಂಬುವವರನ್ನು ಬಂಧಿಸಲಾಗಿದೆ. ಇವರು ಹಳೆಯ ದ್ವೇಷದಿಂದ ಅರುಣನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದರು. ಈ ಬಗ್ಗೆ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದರು.

ಆರೋಪಿಗಳ ಪತ್ತೆಗೆ ಮದ್ದೂರು ಗ್ರಾಮಾಂತರ ವೃತ್ತದ ಸರ್ಕಲ್ ಪೊಲೀಸ್ ಇನ್ಸ್‌ ಪೆಕ್ಟರ್ ವೆಂಕಟೇಗೌಡ ನೇತೃತ್ವದಲ್ಲಿ ಮದ್ದೂರು ಪಿ.ಎಸ್ ಐ ಮಂಜುನಾಥ ಕೆ, ಕೆಸ್ತೂರು ಪಿ.ಎಸ್.ಐ ಶ್ರವಣ ಎಸ್ ದಾಸರಡ್ಡಿ, ಬೆಸಗರಹಳ್ಳಿ ಪಿ.ಎಸ್.ಐ. ಪ್ರಕಾಶ್.ಎಸ್ ಮದ್ದೂರು, ಸಿಬ್ಬಂದಿಗಳಾದ ಸಿಹೆಚ್ ಸಿ ಅವರಾದ, ಪ್ರಶಾಂತ್ ಹೆಚ್ ಎಸ್, ಪ್ರಶಾಂತ ಕುಮಾರ್, ರಜಿತ್ ಸಿಪಿಸಿಯವರಾದ ಚಿರಂಜೀವಿ ಪೂಜಾರ, ರಮೇಶ, ವಿಶ್ವಲ್ ಕರಿಗಾರ್, ವಿಷ್ಣುವರ್ಧನ್, ಪ್ರಸನ್ನ ಅವನ್ನೊಗಳಗೊಂಡ ತಂಡ ರಚನೆ ಮಾಡಲಾಗಿತ್ತು ಎಂದರು.

ಮಳವಳ್ಳಿ ಯುವಕನ ಕೊಲೆ ಆರೋಪಿಗಳ ಬಂಧನ

ಮಳವಳ್ಳಿ ತಾಲ್ಲೂಕು ಮಾಗನೂರು ಗೇಟ್ ಹತ್ತಿರ ಸಿದ್ದೇಶ್ವರ ಬಾರ್ ಅಂಡ್ ರೆಸ್ಟೋರೆಂಟ್‌ನಲ್ಲಿ ಮದ್ಯಪಾನ ಮಾಡುತ್ತಾ ಕುಳಿತಿದ್ದಾಗ ಯೋಗೇಶ್ ಎಂಬ ಯುವಕನ್ನನ್ನು ಕೊಚ್ಚಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ತಿಳಿಸಿದರು.

ಮಳವಳ್ಳಿ ಎನ್.ಇ.ಎಸ್ ಬಡಾವಣೆಯ ಮನೋಜ್ ಪಟೇಲ್ ಅಲಿಯಾಸ್ ಪಟೇಲ (23). ನಂದನ್ ಜೆ ಅಲಿಯಸ್ ಅಪ್ಪಿ (22), ಮೈಸೂರು ರಾಘವೇಂದ್ರ ನಗರದ ಜಿ.ಆರ್.ಗಿರೀಶ್ ಅಲಿಯಾಸ ಡಾಲಿ ಗುರು ಅಲಿಯಾಸ್ ಗುರುಪ್ರಸಾದ್ (24 ವರ್ಷ) ಹಾಗೂ ಎನ್ ಪ್ರೀತಮ್ ಅಲಿಯಾಸ್ ಪ್ರೀತಿ (18 ) ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳು ಯೋಗೇಶನನ್ನು ಹಳೆಯ ದ್ವೇಷದಿಂದ ಕೊಲೆ ಮಾಡಿರುವುದಾಗಿ ತಿಳಿದುಬಂದಿದೆ ಎಂದರು.

ಈ ಪ್ರಕರಣದ ಆರೋಪಿಗಳ ಪತ್ತೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಶ್ ಬಿ.ಜಿ., ಹಲಗೂರು ವೃತ್ತ ನಿರೀಕ್ಷಕ ಬಿ.ಎಸ್. ಶ್ರೀಧರ, ಕಿರುಗಾವಲು ಠಾಣೆಯ ಪಿಎಸ್‌ಐ ಡಿ.ರವಿಕುಮಾರ, ಮಳವಳ್ಳಿ ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಶಿವಶಂಕರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿಬ್ಬಂದಿಗಳಾದ ಸಿಹೆಚ್’ಸಿ ಅವರಾದ ನಾಗೇಂದ್ರ, ಉಮೇಶ್, ಹಲಗೂರು ಠಾಣೆಯ ಸಿ.ಹೆಚ್.ಸಿ ರಿಯಾಜ್ ಪಾಷ, ಶಿವಕುಮಾರ, ರವಿಕಿರಣ್, ಲೋಕೇಶ್ ಸಿ.ಪಿ.ಸಿ ಕೌಶಿಕ್, ನವೀನ್ ಕುಮಾರ, ಬಾನಪ್ಪ ರಾಠೋಡ, ಆದರ್ಶ್, ದೇವರಾಜ ಅವರನ್ನೊಳಗೊಂಡ ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು ಎಂದರು.

ಎರಡು ಪ್ರತ್ಯೇಕ ಕೊಲೆ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಿರುವ ಕೆಸ್ತೂರು ಹಾಗೂ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರ ಕಾರ್ಯವನ್ನು ಮಂಡ್ಯ ಎಸ್ಪಿ ಬಾಲದಂಡಿ ಅವರು ಶ್ಲಾಘಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ