Tuesday, November 24, 2026

ಪ್ರಾಯೋಗಿಕ ಆವೃತ್ತಿ

ಅನಾಥ ಶವವಾದ ಕನ್ನಡ ಚಿತ್ರ ನಿರ್ದೇಶಕ ; ಯಾರಿಗೂ ಬೇಡವಾಯ್ತು ಡೇವಿಡ್ ಪಾರ್ಥಿವ ಶರೀರ

ಕನ್ನಡ ಚಿತ್ರರಂಗದ ನಿರ್ದೇಶಕ ಹಾಗೂ ಪೊಲೀಸ್‌ ಸ್ಟೋರಿ, ಜೈಹಿಂದ್‌ ಸೇರಿದಂತೆ ಹಲವು ಸಿನಿಮಾಗಳ ಬರಹಗಾರ ಎಸ್‌.ಎಸ್‌ ಡೇವಿಡ್‌ (55) ಹೃದಯಾಘಾತದಿಂದ ಭಾನುವಾರ(ಆ.31) ಸಂಜೆ 7.30ರ ಸುಮಾರಿಗೆ ಬೆಂಗಳೂರಿನ ಆರ್ ಆರ್ ನಗರದ ಎಸ್.ಎಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಪಾರ್ಥಿವ ಶರೀರವನ್ನು ಪಡೆಯಲು ಕುಟುಂಬಸ್ಥರು ಮುಂದಾಗದಿರುವುದರಿಂದ, ಅವರ ಶವವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದೆ.

90ರ ದಶಕದಲ್ಲಿ ಖಳನಾಯಕನಾಗಿದ್ದ ಎಸ್‌ ಎಸ್‌ ಡೇವಿಡ್‌ ಜೈಹಿಂದ್, ಧೈರ್ಯ ಮುಂತಾದ ಸಿನಿಮಾಗಳನ್ನ ನಿರ್ದೇಶಿಸಿದ್ದರು.

ಎಸ್​ಎಸ್ ಡೇವಿಡ್ ಅವರು ಚಿತ್ರಕಥೆ ಬರಹಗಾರನಾಗಿ ಮಾತ್ರವಲ್ಲದೆ ನಿರ್ದೇಶನದಲ್ಲೂ ಛಾಪು ಮೂಡಿಸಿದ್ದರು. ‘ಹಾಯ್ ಬೆಂಗಳೂರು’ ಹಾಗೂ ‘ಧೈರ್ಯ’ ಚಿತ್ರವನ್ನ ನಿರ್ದೇಶನ ಮಾಡಿ ಡೇವಿಡ್ ಗಮನ ಸೆಳೆದಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ.

ಡೇವಿಡ್ ಅವರು ಆಗಸ್ಟ್ 31ರಂದು ಔಷಧ ಅಂಗಡಿಗೆ ತೆರಳಿದ್ದರು. ಈ ವೇಳೆ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ಬೆಂಗಳೂರಿನ ಆರ್​ಆರ್ ನಗರದ ಎಸ್​ಎಸ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಕುಟುಂಬದವರು ಬಾರದೆ ಮೃತದೇಹ ಕೊಡುವುದಿಲ್ಲ ಎಂದು ಆರ್ ​ಆರ್​ ನಗರ ಪೊಲೀಸರು ಹೇಳಿದ್ದಾರೆ. ಡೇವಿಡ್ ಅವರ ಅಕ್ಕ ಉಡುಪಿಯ ಕಾಪುವಿನಲ್ಲಿದ್ದಾರೆ. ಅವರು ತಮಗೆ ಬರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದು, ಇಲ್ಲಿಯೇ ಅಂತಿಮ ಸಂಸ್ಕಾರ ನಡೆಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಡೇವಿಡ್ ಜತೆ ಕೆಲಸ ಮಾಡಿದ್ದ ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು ಮಾತನಾಡಿದ್ದು, ಸೂಪರ್ ಹಿಟ್ ‘ಪೊಲೀಸ್ ಸ್ಟೋರಿ’ ಚಿತ್ರಕ್ಕೆ ಎಸ್.ಎಸ್. ಡೇವಿಡ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿದ್ದರು. ಸಾಯಿ ಕುಮಾರ್ ನಟಿಸಿದ್ದ ‘ಅಗ್ನಿ IPS’ ಚಿತ್ರಕ್ಕೂ ಕಥೆ ಒದಗಿಸಿದ್ದರು. ಡೇವಿಡ್ ನಿರ್ದೇಶನದ ಚಿತ್ರಗಳಲ್ಲಿ ನಾನು ಹೀರೊ ಆಗಿ ನಟಿಸಿದ್ದೆ ಎಂದು ಮೆಲಕು ಹಾಕಿದ್ದಾರೆ.

ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡೇವಿಡ್ ಪಾರ್ಥೀವ ಶರೀರ ಇರಿಸಲಾಗಿದೆ. ಡೇವಿಡ್ ಅವರಿಗೆ ಮದುವೆ ಆಗಿರಲಿಲ್ಲ. ಅವರ ಸೋದರಿ ಸಂಬಂಧಿ ಉಡುಪಿಯ ಕಾಪುವಿನಲ್ಲಿ ಇದ್ದಾರೆ. ಸಹೋದರನ ಅಂತ್ಯಕ್ರಿಯೆಗೆ ತಾವು ಬರೋಕೆ ಸಾಧ್ಯವಿಲ್ಲ, ಬೆಂಗಳೂರಿನಲ್ಲೇ ಅಂತ್ಯಕ್ರಿಯೆ ನಡೆಸಿ ಎಂದು ಸಲಹೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ