Friday, September 20, 2024

ಪ್ರಾಯೋಗಿಕ ಆವೃತ್ತಿ

ಹಣಕಾಸು ಸಾಕ್ಷರತಾ ಸಪ್ತಾಹದ ಕಾರ್ಯಕ್ರಮ

ಮಂಡ್ಯ ನಗರದ ಆರ್‌.ಸಿ.ಟಿ ಸಭಾಂಗಣದಲ್ಲಿ ಬ್ಯಾಂಕ್‌ ಆಫ್‌ ಬರೋಡ ಬ್ಯಾಂಕ್‌ನಿಂದ ಗುರುವಾರ ಆಯೋಜಿಸಿದ್ದ ಹಣಕಾಸು ಸಾಕ್ಷರತಾ ಸಪ್ತಾಹದ ಕಾರ್ಯಕ್ರಮವನ್ನು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಎಂಪಿ ದೀಪಕ್‌ ಉದ್ಘಾಟಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಮೊದಲು ನಮ್ಮ ಪೂರ್ವಜರು ಕೇವಲ ನಗದು ರೂಪದಲ್ಲಿ ತಮ್ಮ ವ್ಯವಹಾರವನ್ನು ನಡೆಸುತ್ತಿದ್ದರು. ಆದರೇ ತಂತ್ರಜ್ಞಾನ ಬೆಳೆದಂತೆ ನಗದು ರಹಿತವಾಗಿ ಆನ್‌ಲೈನ್‌ ಮೂಲಕ ಹಣವನ್ನು ಪಾವತಿಸಿ ವ್ಯವಹರಿಸಲಾಗುತ್ತಿದೆ. ಇದರಿಂದ ಅನೇಕ ಮೋಸಗಳು ನಡೆಯುತ್ತಿವೆ. ಇದರ ಬಗ್ಗೆ ಯುವಕರಿಗೆ ಹೆಚ್ಚಿನ ಜಾಗೃತಿ ನೀಡುವುದು ಅವಶ್ಯಕವಾಗಿದ್ದು, ಬ್ಯಾಂಕ್‌ ಆಫ್‌ ಬರೋಡ ಬ್ಯಾಂಕ್‌ ಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.

ಯಾವುದೇ ದೇಶ ಉದ್ದಾರ ಆಗಬೇಕು ಎಂದರೇ ಆ ದೇಶದ ಯುವಕರಿಗೆ ಹೆಚ್ಚಿನ ಜ್ಞಾನ ಇರಬೇಕಾಗುತ್ತದೆ. ಮುಂದೆ ದೇಶವನ್ನು ಕಟ್ಟಲು ಯುವಕರಿಂದ ಮಾತ್ರ ಸಾಧ್ಯ ಆದರಿಂದ ನಮ್ಮ ಬ್ಯಾಂಕ್‌ ನವರು ಯುವಕರಿಗೆ ಹಣಕಾಸಿನ ವ್ಯವಹಾರಗಳ ಬಗ್ಗೆ ಜಾಗೃತಿ ಹಾಗೂ ಮಾಹಿತಿ ನೀಡಲು ಟಾರ್ಗೆಟಿಂಗ್‌ ಗ್ರೂಪ್ಸ್‌ ಎಂ ಆಲೋಚನೆಯಲ್ಲಿ ಯುವ ಪೀಳಿಗೆ ಕಾರ್ಯಗಾರ ಆಯೋಜಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಆರ್‌ಸೆಟಿ ನಿರ್ದೇಶಕ ಬಿ ವಿವೇಕ್‌, ಆರ್ಥಿಕ ಸಾಕ್ಷರತಾ ಸಮಾಲೋಚಕಿ ಕೆಪಿ ಅರುಣಾ ಕುಮಾರಿ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!